ಬೆಂಗಳೂರು,(www.thenewzmirror):
ಕೋವಿಡ್ ಕಾಲಿಟ್ಟಾಗಿನಿಂದ ಸಾಕಷ್ಟು ಸಂಕಷ್ಟಗಳು ಎದುರಾಗಿದೆ. ಕಣ್ಣಿಗೆ ಕಾಣದ ವೈರಸ್ ಶಿಕ್ಷಣ ಕ್ಷೇತ್ರವನ್ನು ಬುಡ ಮೇಲು ಮಾಡಿದೆ. ಕ್ಲಾಸ್ ರೂಂನಲ್ಲಿ ಕೂತು ಪಾಠ ಕಲಿತ್ತಿದ್ದ ಮಕ್ಕಳು ಮೊಬೈಲ್ ಮುಂದೆ ವರ್ಷಗಳ ಕಾಲ ಕುಳಿತು ಪಾಠ ಕಲಿತ್ತಿದ್ದಾರೆ. ಇದರ ಸೈಡ್ ಎಫೆಕ್ಟ್ ನೇರವಾಗಿ ಮಕ್ಕಳ ಮೇಲೆ ಎರಗಿದ್ದು, ವಿಚಿತ್ರ ಸಿಂಡ್ರೋಮ್ಗೆ ಪುಟಾಣಿಗಳು ತುತ್ತಾಗಿರುವ ಕಳವಳಕಾರಿ ವಿಚಾರವನ್ನು ವೈದ್ಯರು ಹೊರಹಾಕಿದ್ದಾರೆ.
ಸದ್ಯ ಕೋವಿಡ್ ಕೇಸ್ ಕಮ್ಮಿ ಆದ ಬೆನ್ನಲ್ಲೇ ಶಿಕ್ಷಣ ಇಲಾಖೆ, ಶಾಲೆಗಳನ್ನು ಆರಂಭಿಸಿದ್ದರೂ, ಮಕ್ಕಳಿಗೆ ಮಾತ್ರ ಶಾಲೆಗೆ ಹೋಗಲು ಮನಸ್ಸಿಲ್ಲ..ಹೀಗೆ ಕ್ಲಾಸ್ಗೆ ಹೋಗಲು ಹಠ ಹಿಡಿದು ಆನ್ಲೈನ್ ಕ್ಲಾಸ್ಗೆ ಪಟ್ಟು ಹಿಡಿಯುವ ಸಾಕಷ್ಟು ಮಕ್ಕಳಲ್ಲಿ ಸದ್ಯ ವಿಚಿತ್ರ ಸಿಂಡ್ರೋಮ್ ಕಾಣಿಸಲು ಶುರುವಾಗಿದೆ. ಕ್ಲಾಸ್ ಅಟೆಂಡ್ ಮಾಡ್ತೀವಿ ಅಂತ, ಗೇಮಿಂಗ್ನಲ್ಲಿ ಸಮಯ ಕಳೆಯುತ್ತಿರುವ ಸಾಕಷ್ಟು ಪುಟಾಣಿಗಳು ಗೇಮಿಂಗ್ ಸಿಂಡ್ರೋಮ್ಗೆ ಒಳಪಡುತ್ತಿದ್ದಾರೆ. ಮೂರು ಹೊತ್ತು ಮೊಬೈಲ್ ಗೇಮಿಂಗ್ನಲ್ಲಿ ಕಳೆದು ಹೋಗುತ್ತಿರುವ ಮಕ್ಕಳಿಗೆ ಈ ಸಿಂಡ್ರೋಮ್ ಕಾಣಿಸಿಕೊಳ್ಳಲು ಆರಂಭಿಸಿದೆ.
ಆನ್ಲೈನ್ ಗೇಮಿಂಗ್ ಕುರಿತು ಸದ್ಯ ಕೇಂದ್ರ ಶಿಕ್ಷಣ ಇಲಾಖೆ ಆತಂಕ ಹೊರಹಾಕಿದೆ. ಗೇಮಿಂಗ್ ಸಿಂಡ್ರೋಮ್ನಿಂದ ಪಾರು ಮಾಡಲು ಪೋಷಕರಿಗೆ ಅಡ್ವೈಸರಿ ವರದಿ ಪ್ರಕಟಸಿದೆ.
ಕೇಂದ್ರ ಶಿಕ್ಷಣ ಇಲಾಖೆಯ ಅಡ್ವೈಸರಿ ವರದಿಯಲ್ಲೇನಿದೆ..
- ಹಣ ಕೊಟ್ಟು ಆನ್ಲೈನ್ ಗೇಮ್ ಪರ್ಚೇಸಿಂಗ್ ಮಾಡಬೇಡಿ
- ಗೇಮ್ ಡೌನ್ಲೋಡ್ ಮಾಡದಂತೆ ಮಕ್ಕಳಿಗೆ ಎಚ್ಚರಿಕೆ ನೀಡಿ
- ಇಂಟರ್ನೆಟ್ನಲ್ಲಿ ವೈಯಕ್ತಿಕ ವಿವರ ನೀಡದಿರಲು ಕಿವಿಮಾತು
- ಗಂಟೆಗಟ್ಟಲೆ ಮಕ್ಕಳಿಗೆ ಮೊಬೈಲ್ ನೀಡದಿರಲು ಸಲಹೆ
- ಪರ್ಸನಲ್ ಚಾಟ್ ಆ್ಯಕ್ಷನ್ ಆಫ್ ಮಾಡಲು ಸಲಹೆ
- ಮಕ್ಕಳ ವರ್ತನೆ ಬಗ್ಗೆ ನಿಗಾವಹಿಸಲು ಪೋಷಕರಿಗೆ ಸಲಹೆ
- ಚೇಡಿಸುವ ಪ್ರಯತ್ನ ನಡೆದರೆ ಅದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ
- ಗೇಮ್ನ ಏಜ್ ರೇಟಿಂಗ್ ನೋಡುವುದು ಅವಶ್ಯ
ಅದೇನೇ ಹೇಳಿ ಮೊಬೈಲ್ ಅಡಿಕ್ಷನ್ ಯಾವತ್ತಿದ್ದರೂ ಕಣ್ಣಿಗೆ, ಮನಸ್ಸಿಗೆ ಹಾಳು. ಹಾಗಾಗಿ ಆದಷ್ಟು ನಿಮ್ಮ ಮಕ್ಕಳನ್ನು ಮೊಬೈಲ್ನಿಂದ ದೂರ ಇಡಲು ಪ್ರಯತ್ನಿಸಿ ಅನ್ನೊದು ವೈದ್ಯರ ಕಿವಿ ಮಾತು.