ಬೆಂಗಳೂರು/ ಬೆಳಗಾವಿ, (www.thenewzmirror.com):
ರಾಜ್ಯದಲ್ಲಿ ದಿಢೀರ್ ಏರಿಕೆ ಕಾಣುತ್ತಿರೋ ಕರೋನಾ ಕಂಟ್ರೋಲ್ ಮಾಡೋಕೆ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ನಿಯಮವನ್ನ ಜಾರಿಗೆ ತಂದಿದೆ. ಇದ್ರ ಹೊರ್ತಾಗಿಯೂ ಸೋಂಕು ಕಡಿಮೆಯಾಗದ ಹಿನ್ನಲೆಯಲ್ಲಿ ಇದೀಗ ಮತ್ತಷ್ಟು ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಲಾಗ್ತಿದೆ. ಇದರ ಮೊದಲ ಹೆಜ್ಜೆ ಎನ್ನುವಂತೆ ಬೆಳಗಾವಿ ಜಿಲ್ಲೆಯಲ್ಲಿ 1 ರಿಂದ 9 ನೇ ತರಗತಿವರೆಗಿನ ತರಗತಿಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

ಮಕ್ಕಳಲ್ಲಿ ಕೊರೊನಾ ಸೋಂಕು ಉಲ್ಬಣ ಹಿನ್ನೆಲೆ ಬೆಳಗಾವಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದ್ದಾರೆ. ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆ ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆ ಸಭೆ ನಡೆಸಿದ್ರು. ಸಭೆಯಲ್ಲಿ ಏಳು ದಿನದ ಮಟ್ಟಿಗೆ 1 ರಿಂದ 9 ತರಗತಿಗಳ ಶಾಲೆಗಳ ಬಂದ್‌ಗೆ ಸಲಹೆ ಬಂದ ಹಿನ್ನಲೆಯಲ್ಲಿ ಈ ತೀರ್ಮಾನ ಅಂತ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇನ್ನು ವಸತಿ ಶಾಲೆಗಳು ಒಳಗೊಂಡಂತೆ 1 ರಿಂದ 9ನೇ ತರಗತಿಯವರೆಗೆ ಶಾಲೆಗಳು ಬಂದ್ ಆಗಿದ್ದರೂ ಪೋಷಕರು ಹೆದರುವ ಅವಶ್ಯಕತೆ ಇಲ್ಲ ಅಂತ ಅಭಯ ನೀಡರೋ ಜಿಲ್ಲಾಧಿಕಾರಿ, ಮಕ್ಕಳಿಗೆ ರೋಗದ ಗುಣಲಕ್ಷಣ ಇದ್ರೆ ಕೋವಿಡ್ ತಪಾಸಣೆ ಮಾಡಿಸಲು ಡಿಸಿ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಇದೂವರೆಗೂ 143 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದ್ದನ್ನ ಇಲ್ಲಿ ಸ್ಮರಿಸಬಹುದು.