ಬೆಂಗಳೂರು, (thwnewzmirror.com) :
ಬೆಂಗಳೂರಿನಲ್ಲಿ ಕಳೆದ ಹತ್ತು ದಿನಗಳಿಂದ ಎಗ್ಗಿಲ್ಲದೆ ಮಳೆ ಸುರಿಯುತ್ತಿದೆ. ಒಂದುಕಡೆ ಅವಾಂತರಗಳ ಮೇಲೆ ಅವಾಂತರ ಸೃಷ್ಟಿಯಾಗುತ್ತಿದೆ. ಮತ್ತೊಂದು ಕಡೆ ಸಾರ್ವಜನಿಕರಿಂದ ದೂರುಗಳೂ ಹೆಚ್ಚಾಗುತ್ತಿವೆ. ಹೀಗಿದ್ದರೂ ಬಿಬಿಎಂಪಿ ಮುಖ್ಯ ಆಯುಕ್ತರು ಮಾತ್ರ ಫುಲ್ ಕೂಲ್ ನಲ್ಲಿದ್ದಾರೆ.
ಇಡೀ ಬೆಂಗಳೂರಿನಲ್ಲು ಯಾವುದೇ ಸಮಸ್ಯೆ ಆದರೂ ಅದನ್ನ ತಕ್ಷಣದಲ್ಲಿ ಬಗೆಹರಿಸುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ. ಅದರಲ್ಲೂ ಮಳೆ ಬಂದಾಗ ಅಂತೂ ದೂರುಗಳ ಸರಮಾಲೆಯೇ ಕೇಳಿಬರುತ್ತೆ. ಅದೇ ರೀತಿ ಕಳೆದ ಎಂಟು ದಿನಗಳಲ್ಲಿ ಮಳೆಯಿಂದ ಸಮಸ್ಯೆ ಆಗಿದೆ ಎಂದು ಬರೋಬ್ಬರಿ 134 ದೂರುಗಳು ಕೇಳು ಬಂದಿವೆ.
ದೂರುಗಳ ಮಾಹಿತಿ
ದಿನಾಂಕ ದೂರುಗಳ ಸಂಖ್ಯೆ
5 35
6 23
8 18
11 24
12 34
ಹೀಗೆ ಮರ ಬಿದ್ದಿದೆ, ನೀರು ನುಗ್ಗಿದೆ., ಮನೆಗೆ ನೀರು ನುಗ್ಗಿದೆ ಅಂತ ದೂರುಗಳನ್ನ ಸಾರ್ವಜನಿಕರು ಕಂಟ್ರೋಲ್ ರೂಂ ಗೆ ಕರೆಮಾಡಿ ತಿಳಿಸುತ್ತಿದ್ದಾರೆ. ಆದರೆ ಬಿಬಿಎಂಪಿ ಮಾತ್ರ ಸಮಸ್ಯೆ ಬಗೆಹರಿಸ್ತೀವಿ ಅಂತ ಹೇಳ್ತಿದೆ ಹೊರ್ತು ಶಾಶ್ವತ ಪರಿಹಾರ ಹುಡುಕುವ ಕೆಲಸವನ್ನ ಮಾತ್ರ ಮಾಡುತ್ತಲೇ ಇಲ್ಲ.
ಬಿಬಿಎಂಪಿ ಏನು ಮಾಡಬೇಕು…?
ಮಳೆ ಬಂದಾಗ ನೀರು ಎಲ್ಲಿ ನಿಲ್ಲುತ್ತೆ.., ಇದಕ್ಕೆ ಕಾರಣ ಏನು ಅನ್ನೋದನ್ನ ತಿಳಿದುಕೊಳ್ಳಬೇಕು.. ಬಳಿದ ಅದನ್ನ ಸರಿಪಡಿಸುವ ಕೆಲಸವನ್ನ ಮಾಡಬೇಕು. ಆದರೆ ಬಿಬಿಎಂಪಿ ಕೇವಲ ಮೀಡಿಯಾ ಮುಂದೆ ಮಾತ್ರ ಬರೀ ಫೋಸು ಕೊಡುವ ಕೆಲಸ ಮಾಡಿ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ.
ಇನ್ನೂ ಮೂರು ದಿನ ಭಾರೀ ಮಳೆ ಬೆಂಗಳೂರಿನಲ್ಲಿ ಸುರಿಯುವ ಸಾಧ್ಯತೆಯಿದ್ದು, ಫುಲ್ ಅಲರ್ಟ್ ಆಗಿ ಕೆಲ್ಸ ಮಾಡ್ಬೇಕಿದೆ. ಕೆಳಹಂತದ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಕೊಟ್ಟ ಸೂಚನೆಗಳನ್ನ ಹೇಗೆ ಪಾಲನೆ ಮಾಡುತ್ತಾರೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.