ಹಣಹಾಕಿದವರ ಸ್ಥಿತಿ ಇದೀಗ ಅತಂತ್ರವೋ ಅತಂತ್ರ…!
ಪ್ರತಿ ಹಳ್ಳಿಯೂ ಸಬಲೀಕರಣವಾಗಬೇಕೆಂಬ ಕನಸಿನಿಂದ ಆರಂಭವಾದ ಗ್ರಾಮೋದ್ಧಾರ ಕೇಂದ್ರವೀಗ ಅತಂತ್ರದ ಕೇಂದ್ರವಾಗಿದೆ..,
ರಾಜ್ಯಾದ್ಯಂತ ಇರುವ 6,024 ಗ್ರಾಮ ಪಂಚಾಯ್ತಿಗಳಲ್ಲೂ ದೇಸಿ ಸ್ಕಿಲ್ಸ್ ಸಂಸ್ಥೆಯಡಿ, ‘ಗ್ರಾಮೋದ್ಧಾರ ಕೇಂದ್ರ ಸ್ಥಾಪಿಸಿ ಪ್ರತಿ ಹಳ್ಳಿಗಳನ್ನೂ ಸಬಲೀಕರಣ ಮಾಡಬೇಕೆಂಬ ಕನಸು ಇದೀಗ ಈಡೇರುವ ಸಮಯ ಕಾಣದ ಸ್ಥಿತಿ ನಿರ್ಮಾಣವಾಗಿದೆ.
ಅದಕ್ಕೂ ಮೊದಲು ಗ್ರಾಮೋದ್ಧಾರ ಕೇಂದ್ರ ಹಿನ್ನೆಲೆಯನ್ನ ಒಮ್ಮೆ ನೋಡ್ಕೊಂಡು ಬಿಡಿ.., 2016 – 17 ರಲ್ಲಿ ವಿಕಾಸ ದೇಸಿ ಸ್ಕಿಲ್ಸ್ ಫೌಂಡೇಷನ್ ಅಡಿಯಲ್ಲಿ ಗ್ರಾಮೋದ್ಧಾರ ಕೇಂದ್ರ ಆರಂಭವಾಯ್ತು.., ಕೌಶಿಕ್, ಕಾವ್ಯ, ಅವ್ರ ನೇತೃತ್ವದಲ್ಲಿ ಆರಂಭವಾದ ಸಂಸ್ಥೆ ಆರಂಭದಲ್ಲಿ ಒಳ್ಳೆಯ ಆಶಾಭಾವನೆಯನ್ನೇ ಮೂಡಿಸಿತ್ತು. ಕಾರಣ ಪ್ರತಿ ಗ್ರಾಮದಲ್ಲೂ ಕಂಪನಿ ತನ್ನ ಶಾಖೆಯನ್ನ ಆರಂಭಿಸಿ ಆನ್ ಲೈನ್ ಸರ್ವೀಸ್ ನೀಡುವುದಾಗಿತ್ತು. ಅಂದ್ರೆ ಅತ್ಯಂತ ಕಡಿಮೆ ದರದಲ್ಲಿ ದಿನಸಿ ವಸ್ತುಗಳನ್ನ ನೀಡುವುದರ ಜತೆಗೆ ಖಾತಾ, ಆಧಾರ್ ಕಾರ್ಡ್, ಸೇರಿದಂತೆ ಆನ್ ಲೈನ್ ಸೇವೆಗಳನ್ನ ನೀಡಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕ್ರು ಅಲೆದಾಡುವುದನ್ನ ತಪ್ಪಿಸುವ ಉದ್ದೇಶ ಇದಾಗಿತ್ತು.
ಆರಂಭದಲ್ಲಿ ಕಂಪನಿ ಹೇಳಿದ ಮಾತಿಗೆ ಸಾವಿರಾರು ಜನ್ರು ನಾಮುಂದು ತಾಮುಂದು ಅಂತ ಮುಂದೆ ಬಂದ್ರು. ಕಂಪನಿ ಫ್ರಾಂಚೈಸಿ ಫೀಸ್ 30 ಸಾವಿರ ಕಟ್ಟಬೇಕು.,. ಉಳಿದಿದ್ದು, ಇಂತಿಷ್ಟು ಹಣ ಕಟ್ಟಿದ್ರೆ ನಿಮಗೆ ಸೇವೆ ನೀಡ್ತೀವಿ ಅಂತಾನೂ ಹೇಳಿತ್ತು. ಯಾರೆಲ್ಲಾ ಆಸಕ್ತಿ ತೋರಿದ್ರೋ ಅವ್ರಿಗೆಲ್ಲಾ ದಿನಕ್ಕೆ 10 ರಿಂದ 20 ಬಾರಿ ಫೋನ್ ಮಾಡಿ ಮಾಹಿತಿ ನೀಡ್ತಿದ್ರು.
ಇದನ್ನ ನಂಬಿದ ಅದೆಷ್ಟೋ ಮಂದಿ ಹಣವನ್ನೂ ಹಾಕಿದ್ರು. ಯಾವಾಗ ರಾಜ್ಯದ ಮೂಲೆ ಮೂಲೆಗಳಿಂದ ಹಣ ಬರಲು ಆರಂಭವಾಗ್ತಿದ್ದಂತೆ ಕರೋನಾ ಹೆಮ್ಮಾರಿ ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದಂತೆ ಲಾಕ್ ಡೌನ್ ಅನ್ನ ಪ್ರಧಾನಿ ಮೋರಿ ಹೇರಿದ್ರು. ಅವಾಗಿನಿಂದ ನೋಡಿ ಹಣ ಹೂಡಿಕೆ ಮಾಡಿದವ್ರಲ್ಲಿ ಆತಂಕ ಶುರುವಾಯ್ತು.
ಇದ್ದಕ್ಕಿದ್ದ ಹಾಗೆ ಕಂಪನಿ ಬೆಂಗಳೂರಿನ ಉತ್ತರಹಳ್ಳಿಯಿಂದ ಹಿರಿಯೂರಿಗೆ ಏಕಾಏಕಿ ಶಿಫ್ಟ್ ಆಯ್ತು… ಅಲ್ಲೀವರೆಗೂ ಚೆನ್ನಾಗಿ ನಡೆಯುತ್ತಿದ್ದ ಕಂಪನಿಯಲ್ಲಿ ಎಲ್ಲವೂ ತಲೆಕೆಳಗಾಯ್ತು.., ಹಗಲಿರುಳು ಎನ್ನದೇ ಕೆಲ್ಸ ಮಾಡ್ತಿದ್ದ ಸಿಬ್ಬಂದಿಗೆ ವೇತನ ನೀಡದ ಸ್ಥಿತಿ ನಿರ್ಮಾಣವಾಯ್ತು. ನಾಲ್ಕೈದು ತಿಂಗಳಿನಿಂದ ವೇತನ ನೀಡದೇ ಸತಾಯಿಸಲು ಕಂಪನಿಯ ಮುಖ್ಯಸ್ಥರು ಆರಂಭಿಸಿದರು. ಇದರ ವಿರುದ್ಧ ಧ್ವನಿ ಎತ್ತಿದಾಗ ಅವ್ರ ವಿರುದ್ಧವೇ ಸುಳ್ಳು ಕೇಸು ದಾಖಲಿಸಲು ಮುಂದಾದ್ರು ಅನ್ನೋ ಆರೋಪಾನೂ ಕೇಳಿ ಬಂದಿದೆ.
ಲ್ಯಾಪ್ ಟಾಪ್ ಕದ್ದಿದ್ದೀರಾ.., ಕ್ಯಾಮೆರಾಕದ್ದಿದ್ದೀರಾ ಅಂತೆಲ್ಲಾ ಹೇಳಿ ಅವ್ರ ಅವ್ರನ್ನ ಏಕಾಏಕಿ ಕೆಲ್ಸದಿಂದ ತೆಗೆದು ಹಾಕಿದ್ರು ಅನ್ನೋ ಆರೋಪಾನೂ ಕೇಳಿ ಬರ್ತಿದೆ. ಇದು ಒಂದು ಕಡೆಯಾದ್ರೆ ಸ್ವಂತ ಊರಿನಲ್ಲಿ ಸ್ವಂತ ಉದ್ಯೋಗ ಸಿಗುತ್ತೆ ಅನ್ನೋ ನಂಬಿಕೆಯಲ್ಲಿದ್ದವ್ರ ಕಥೆ ಇನ್ನೂ ಶೋಚನೀಯ.
ಕಷ್ಟಪಟ್ಟು ಹಣ ಹೂಡಿ ಮಳಿಗೆ ತೆಗೆದು ಇನ್ನೇನು ವ್ಯಾಪಾರ ಆರಂಭಿಸ್ಬೇಕು ಅನ್ನೋ ಕನಸಿನಲ್ಲಿ ಇದ್ದವ್ರಿಗೆ ಶಾಕ್ ಮೇಲೆ ಶಾಕ್ ಆಗ್ತಿದೆ.., ಯಾಕಂದ್ರೆ ಗ್ರಾಮೋದ್ಧಾರ ಕೇಂದ್ರದ ಸಿಬ್ಬಂದಿ ಯಾರೂ ಸರಿಯಾಗಿ ಸ್ಪಂದನೆ ಮಾಡ್ತಿಲ್ಲ.., ಗಂಟೆಗಟ್ಟಲೇ ಫೋನ್ ಮಾಡಿದ್ರೂ ರಿಸೀವ್ ಮಾಡದ ಸ್ಥಿತಿ( ಇದಕ್ಕೆ ಬೇಕಾದ ದಾಖಲೆಗಳು ನಮ್ಮ ಬಳಿ ಇವೆ) ನಿರ್ಮಾಣವಾಗಿದೆ.
ಇನ್ನು ಕಂಪನಿ ಮುಖ್ಯಸ್ಥ ಕೌಶಿಕ್ ಯಾರಿಗೂ ಸ್ಪಂದನೆ ಮಾಡದ ಸ್ಥಿತಿಯಲ್ಲಿದ್ದಾರೆ. ಯಾರಾದ್ರೂ ಕೇಳಲು ಹೋದ್ರೆ ಕಲರ್ ಕಲರ್ ಕಾಗೆ ಹಾರಿಸೋ ಕೆಲ್ಸ ಮಾಡ್ತಿದ್ದಾರೆ ಅನ್ನುವ ಆರೋಪ ಕೇಳಿ ಬರ್ತಿದೆ. ಸಾವಿರಾರು ಮಂದಿ ಹಣ ಹೂಡಿಕೆ ಮಾಡಿದವ್ರಿಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.., ಕೇಂದ್ರ ಆರಂಭದ ಬಗ್ಗೆ ಕೇಳಿದ್ರೆ ಇನ್ನೂ ಸಮಸ್ಯೆ ಇದೆ ಬಗೆಹರಿದಿಲ್ಲ.. ಅಂತ ಸಬೂಬು ಹೇಳುವ ಕೆಲ್ಸ ಮಾಡುತ್ತಿದ್ದಾರಂತೆ..,
ನ್ಯೂಝ್ ಮಿರರ್ ಈ ಬಗ್ಗೆ ಗ್ರಾಮೋದ್ಧಾರ ಕೇಂದ್ರದವ್ರನ್ನ ಸಂಪರ್ಕ ಮಾಡಿದಾಗ ತಮ್ಮದೇ ನೆಪಹೇಳುತ್ತಿದ್ದಾರೆ. ಈ ಹಿಂದೆ ನಮ್ಮ ಕಂಪನಿಯಲ್ಲಿ ಕೆಲ್ಸ ಮಾಡ್ತಿದ್ದವ್ರು ನಮಗೆ ಮೋಸಮಾಡಿದ್ದಾರೆ. ಹೀಗಾಗಿ ಈ ರೀತಿ ಆಗ್ತಿದೆ. ಇನ್ನು ಒಂದು ತಿಂಗಳಲ್ಲಿ( ನಾಲ್ಕೈದು ತಿಂಗಳಿನಿಂದ ಇದೇ ಉತ್ತರ ಬರುತ್ತಿದೆ) ಎಲ್ಲವೂ ಸರಿಯಾಗುತ್ತೆ ಅಂತ ಜಾರಿಕೊಳ್ಳುತ್ತಿದ್ದಾರೆ.
ಸುಳ್ಳು ಕೇಸ್ ಹಿಂದಿನ ಮರ್ಮವೇನು..?
ಇನ್ನು ರಾಜ್ಯದಲ್ಲಿ ಗ್ರಾಮೋದ್ಧಾರ ಕೇಂದ್ರ ಆರಂಭಿಸದಾಗ ಅಲ್ಲಿ ಕೆಲ್ಸ ಮಾಡ್ತಿದ್ದ ಬಹುತೇಕ ಸಿಬ್ಬಂದಿ ಇದೀಗ ಅಲ್ಲಿ ಕೆಲ್ಸ ಮಾಡ್ತಿಲ್ಲ.., ಅವ್ರೆಲ್ಲಾ ಕೆಲಸ ಬಿಡಲು ಕಾರಣ ಹಲವಾರು ಇದೆ. ಸಿಬ್ಬಂದಿ ಕೇಳಿದ್ರೆ ನಮಗೆ ವೇತನ ನೀಡಲಿಲ್ಲ.. ಐದಾರು ತಿಂಗಳು ಕೆಲಸ ಮಾಡಿದ್ರೂ ಸಂಬಳ ಕೊಡಲಿಲ್ಲ.., ಕೇಳೋಕೆ ಹೋದ್ರೆ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ರು. ಇದನ್ನ ಪ್ರಶ್ನೆ ಮಾಡಿದ್ರೆ ನೀವು ಲ್ಯಾಪ್ ಟಾಪ್ ಕದ್ದಿದ್ದೀರಾ.., ಕ್ಯಾಮೆರಾ ಕದ್ದಿದ್ದೀರಾ ಎಂದು ಸುಳ್ಳು ಕೇಸ್ ದಾಖಲು ಮಾಡಿದ್ರು ಅಂತ ಆರೋಪ ಮಾಡ್ತಿದ್ದಾರೆ..,
ಇನ್ನು ಗ್ರಾಮೋದ್ಧಾರ ಕೇಂದ್ರದ ಸೋ ಕಾಲ್ಡ್ ಮುಖ್ಯಸ್ಥ ಅಂತ ಕರೆಸಿಕೊಳ್ತಿರೋ ಕೌಶಿಕ್ ಅವ್ರನ್ನ ಕೇಳಿದ್ರೆ ನಮ್ಮದೇನೂ ತಪ್ಪಿಲ್ಲ.., ಅವ್ರೇ ನಮ್ಮ ಕಂಪನಿ ವಿರುದ್ಧ ಸುಳ್ಳು ಸುಳ್ಳು ಅರೋಪಗಳನ್ನ ಮಾಡುತ್ತಾ ಹೋಗ್ತಿದ್ರು. ಹೀಗಾಗಿ ಅವ್ರನ್ನ ಕೆಲ್ಸದಿಂದ ತೆಗೆಯಲಾಗಿದೆ ಅನ್ನೋ ಜಾರಿಕೊಳ್ಳೋ ಕೆಲ್ಸ ಮಾಡ್ತಿದ್ದಾರೆ.
ಇದು ಅಕ್ಟೋಬರ್ ತಿಂಗಳ ವರೆಗಿನ ಅಪ್ ಡೇಟ್ ಇದು ಇಷ್ಟಕ್ಕೆ ಮುಗಿಯೋ ಲಕ್ಷಣಗಳು ಕಾಣುತ್ತಿಲ್ಲ.., ಗ್ರಾಮೋದ್ಧಾರ ಕೇಂದ್ರದ ಇನ್ನಷ್ಟು ಹಗರಣಗಳ ಎಕ್ಸ್ ಕ್ಲೂಸಿವ್ ಮಾಹಿತಿ ನ್ಯೂಝ್ ಮಿರರ್ ಬಳಿ ಇದ್ದು ಸಂಪೂರ್ಣ ಕಲೆ ಹಾಕಿದ ಬಳಿಕ ಅದರ ವಿವರ ನೀಡಲಾಗುವುದು.