ಬೆಂಗಳೂರು, (www.thenewzmirror.com) ;
ಗ್ರಾಮೋದ್ಧಾರ ಕೇಂದ್ರ ರಾಜ್ಯದ ಎಲ್ಲಾ ಗ್ರಾಮಪಂಚಾಯತ್ ನಲ್ಲೂ ನಿರೋದ್ಯೋಗಿಗಳಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆ. ಇದನ್ನ ನಂಬಿ ಹಣ ಕಟ್ಟಿ ಮೋಸ ಹೋದ ಅದೆಷ್ಟೋ ನಿರುದ್ಯೋಗಿಗಳ ಬದುಕು ಇನ್ನೂ ಸರಿಯಾಗಿಲ್ಲ. ಅತ್ತ ಹಣವೂ ಇಲ್ಲದೆ ಇತ್ತ ಸಂಪರ್ಕಕ್ಕೂ ಸಿಗದೆ ತಲೆ ಮರೆಸಿಕೊಂಡಿರೋ ಕೇಂದ್ರದ ಸಿಇಓ ವಿರುದ್ಧ ಇದೀಗ ಹಣ ಹೂಡಿದವರು ಹುಡುಕಿಕೊಡಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪ್ರತಿ ಗ್ರಾಮಪಂಚಾಯತಿಯಲ್ಲಿ ಈ ಕೇಂದ್ರದ ಬಗ್ಗೆ ಆಸಕ್ತಿ ಹೊಂದಿದವರು ಲಕ್ಷಾಂತರ ರೂ ಹೂಡಿಕೆ ಮಾಡಿದ್ರು. ಇನ್ನೇನು ಕೇಂದ್ರ ಓಪನ್ ಆಗೇ ಬಿಡ್ತು ಅಂತ ಅನ್ಕೊಂಡಿದ್ದವ್ರಿಗೆ ಇದೀಗ ಕೇಂದ್ರ ಶಾಕ್ ಕೊಟ್ಟಿದ್ದನ್ನ ನಿಮ್ಮ ನ್ಯೂಝ್ ಮಿರರ್ ಸರಣಿ ವರದಿ ಪ್ರಸಾರ ಮಾಡಿತ್ತು.. ಅಷ್ಟೇ ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆಗೆ ಸಂಪರ್ಕಿಸಿದರೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಗ್ರಾಮೋದ್ಧಾರ ಕೇಂದ್ರದ ಸಿಇಓ ಕುರಿತಂತೆ ವರದಿಯೂ ಪ್ರಕಟವಾಗಿತ್ತು.
ಹೀಗೆ ಕೇಂದ್ರ ನಂಬಿ ಅತಂತ್ರರಾಗಿರೋರ ಮೂರನೇ ವರದಿ ಇದಾಗಿದ್ದು, ಈ ವರದಿ ಮೂಲಕನಾದ್ರೂ ಹಣ ಹೂಡಿದವರಿಗೆ ನ್ಯಾಯ ಸಿಗುತ್ತಾ ಕಾದು ನೋಡಬೇಕಿದೆ.
ಯೆಸ್, ಗ್ರಾಮೋದ್ಧಾರ ಕೇಂದ್ರದ ಸಿಇಓ ಎಸ್. ಎಸ್ ಕೌಶಿಕ್ ಇದೀಗ ಹಣ ಹೂಡಿದವರ ಪಾಲಿನ ವಿಲನ್ ಆಗಿದ್ದಾರೆ. ನೀವು ಹಣ ಕಟ್ಟಿ ನೀವು ಹೇಳಿರೋ ಗ್ರಾ.ಪಂ ನಲ್ಲಿ ಕೇಂದ್ರ ತೆರೆಯಲು ಅವಕಾಶ ನೀಡೋದಲ್ಲದೆ ನಿಮ್ಮ ಜೀವನಕ್ಕೆ ದಾರಿ ಮಾಡಿಕೊಡುತ್ತೀವಿ ಅಂತೆಲ್ಲಾ ಕಿವಿ ಮೇಲೆ ಹೂವಿಟ್ಟ ಕೌಶಿಕ್ ಇದೀಗ ಯಾರ ಕೈಗೂ ಸಿಗ್ತಿಲ್ಲ..
ಹಣ ಹೂಡಿದ್ದವರು ಎಷ್ಟು ಕರೆಮಾಡಿದರೂ ಫೋನ್ ರಿಸೀವ್ ಮಾಡದೆ ಬೇಜವಾಬ್ದಾರಿ ತನ ತೋರಿಸುತ್ತಿರೋ ಕೌಶಿಕ್ ಇದೀಗ ಊರು ಬಿಟ್ಟಿದ್ದಾರಾ ಅನ್ನೋ ಅನುಮಾನ ಕಾಡತೊಡಗಿದೆ.
ಲಕ್ಷಗಟ್ಟಲೇ ಹಣ ಕಟ್ಟಿ ಸ್ವಂತ ಬದುಕು ಕಟ್ಟಿಕೊಳ್ಳಬೇಕೆಂಬ ಆಸೆಯಲ್ಲಿದ್ದವ್ರ ಬೆನ್ನಿಹೆ ಚೂರಿಹಾಕಿ ಇದೀಗ ಬೆಂಗಳೂರು ಬಿಟ್ಟಿದ್ದಾರಾ ಅನ್ನೋ ಅನುಮಾನ ಕಾಡತೊಡಗಿದೆ.
ಅತ್ತ ಹಿರಿಯೂರಿನಲ್ಲೂ ಕಚೇರಿ ಇಲ್ಲ ಇತ್ತ ಬೆಂಗಳೂರಿನಲ್ಲೂ ಕಚೇರಿಯಿಲ್ಲದೆ ನೂರಾರು ಯುವಕರು ಕಷ್ಟ ಪಟ್ಟು ಕೂಡಿಟ್ಟ ಹಣ ಪಡೆದು ಅದೇ ಹಣದಲ್ಲಿ ಮಜಾಮಾಡುತ್ತಿರೋದಕ್ಕೆ ಬ್ರೇಕ್ ಯಾವಾಗ ಎನ್ನುವ ಪ್ರಶ್ನೆ ಇದೀಗ ಕಾಡತೊಡಗಿದೆ.
ಕಳಪೆ ಗುಣಮಟ್ಟದ ಆಹಾರ ಕೊಟ್ಟು ಮೋಸ ಮಾಡಿದ್ದ ಕೇಂದ್ರ ಇದೀಗ ಹಣ ಕೇಳಿದ್ರೆ ನೋ ರೆಸ್ಪಾನ್ ಎನ್ನುವ ರೀತಿ ವರ್ತನೆ ಮಾಡುತ್ತಿದೆ ಎನ್ನುವ ಆರೋಪವನ್ನ ಹಣ ಕೊಟ್ಟು ಪರಿಪಿಸುತ್ತಿರೋ ಯುವಕರು ಮಾಡುತ್ತಿದ್ದಾರೆ.
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ..!
ಇನ್ನು ಕಷ್ಟಪಟ್ಡು ಕೂಡಿಟ್ಟ ಹಣ ಕೊಟ್ಟು ಕೇಂದ್ರ ಆರಂಭಿಸಿ ಸ್ವಂತ ಕಾಲಮೇಲೆ ನಿಲ್ಲೋಣ ಎಂದುಕೊಂಡಿದ್ದ ಯುವಕರ ಬದುಕು ಅತಂತ್ರವಾಗಿದೆ. ಇನ್ನ ಹಣ ಪಡೆದು ಮಜಾ ಮಾಡುತ್ತಿರೋ ಸಿಇಓ ನಡೆ ನೋಡಿದ್ರೆ ಯಾರದ್ದೋ ದುಡ್ಡ ಯಲ್ಲಮ್ಮನ ಜಾತ್ರೆ ಎನ್ನುವಂತಾಗಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.
ಎಲ್ಲಿದೆ ಕಚೇರಿ..?
ಮೂಲಗಳ ಪ್ರಕಾರ ಕರೋನಾಗೂ ಮೊದಲು ಬೆಂಗಳೂರಿನ ಉತ್ತರ ಹಳ್ಳಿಯಲ್ಲಿದ್ದ ಕಚೇರಿಯನ್ನ ಹಿರಿಯೂರಿಗೆ ಶಿಫ್ಟ್ ಮಾಡಲಾಗಿತ್ತು. ಆನಂತರ ದಿನಕ್ಕೊಂದು ಕಥೆ ಹೇಳುತ್ತಾ ನೂರಾರು ಕನಸು ಕಂಡು ಹಣ ಕಟ್ಟಿದ್ದವರ ದುಡ್ಡಿನಲ್ಲಿ ಎಂಜಾಯ್ ಮಾಡುತ್ತಾ ಕಾಲಹರಣ ಮಾಡುತ್ತಿರೋ ಕೌಶಿಕ್ ಇದೀಗ ಎರಡೂ ಕಡೆಯ ಕಚೇರಿಯನ್ನ ಕ್ಲೋಸ್ ಮಾಡಿದ್ದಾರಂತೆ.
ಇದೀಗ ನಾವು ಕಟ್ಟಿರೋ ಹಣ ಪಡೀಬೇಕು ಎಲ್ಲಿ ಹೋಗ್ಬೇಕು ಅನ್ನೋದು ತೋಚದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಚೆಕ್ ಕೂಡ ಬೌನ್ಸ್..!
ಇನ್ನೊಂದು ಪ್ರಕರಣದಲ್ಲಿ ಗ್ರಾಮೋದ್ಧಾರ ಕೇಂದ್ರದ ಸಿಬ್ಬಂದಿ ಕೊಟ್ಟಿರುವ ಚೆಕ್ ಕೂಡ ಬೌನ್ಸ್ ಆಗ್ತಾ ಇದೆಯಂತೆ. ಚೆಕ್ ಬೌನ್ಸ್ ಆಗ್ತಾ ಇದೆಯಲ್ವಾ ಅಂತ ಕೇಳೋಕೆ ಹೋದ್ರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರಂತೆ. ಪದೇ ಪದೇ ಹಣ ಕೊಡಿ ಅಂತ ಕೇಳಿದ್ರೆ ಫೋನ್ ರಿಸೀವ್ ಮಾಡೋದನ್ನೇ ನಿಲ್ಲಿಸುತ್ತಾರಂತೆ.
ಇದೀಗ ಹಣ ಕೊಟ್ಟುಗ್ರಾಮೋದ್ಧಾರ ಕೇಂದ್ರದ ಯಾವೊಬ್ಬ ಪ್ರಮುಖರೂ ಸಂಪರ್ಕಕ್ಕೆ ಸಿಗದೆ ಪರಿತಪಿಸುವಂತಾಗಿದೆ. ಇದಕ್ಕೆ ಕೊನೆ ಎಂದು ಎನ್ನುವ ಪ್ರಶ್ನೆ ಕಾಡುತ್ತಿದ್ದು ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.