ಬೆಂಗಳೂರು, (www.thenewzmirror.com):
ಮುಂಬರೋ ದಿನಗಳಲ್ಲಿ ನಡೆಯಲಿರೋ ಉಪ ಚುನಾವಣೆಯ ಅಖಾಡಕ್ಕೆ ಮಾಜಿ ಸಿಎಂ ಬಿಎಸ್ ವೈ ಧುಮುಕ್ಕುತ್ತಾರಾ ಅನ್ನೋ ಪ್ರಶ್ನೆಗೆ ವಿಜಯದಶಮಿ ದಿನ ಉತ್ತರ ಸಿಕ್ಕಿದೆ..,
ಈ ಕುರಿತಂತೆ ನಾಡಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಒಂದು ಗಂಟೆಗಳ ಕಾಲ ಬಿಎಸ್ ವೈ ಜತೆ ಮಾತನಾಡಿದ ಸಿಎಂ ರಾಜಾಹುಲಿ ಚುನಾವಣಾ ಪ್ರಚಾರಕ್ಕೆ ಬರ್ತಾರೆ ಅಂತ ಮಾಹಿತಿ ನೀಡಿದ್ದಾರೆ.
ಮಾಜಿ ಸಿಎಂ ನಿವಾಸ ಕಾವೇರಿಗೆ ಭೇಟಿ ಕೊಟ್ಟು ಹಬ್ಬದ ಶುಭಾಶಯ ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಾಡಿಗೆ ಒಳ್ಳೆಯದನ್ನ ಮಾಡಲಿ ಅಂತ ಕೋರಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ರಾಜ್ಯದ ಜನತೆಗೆ ಎದುರಾಗಿರುವ ಸಂಕಷ್ಟಗಳನ್ನು ದೂರಮಾಡಿ ರಾಜ್ಯದಲ್ಲಿ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ ತರಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದ್ದಾರೆ.