ಬೆಂಗಳೂರು, (www.thenewzmirror.com) :
ಜಿಎಸ್ ಟಿ ಸರಕು ಸೇವಾ ತೆರಿಗೆ.., ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡ್ತಿದ್ದವ್ರಿಗೆ ಬಿಸಿ ಮುಟ್ಟಿಸಬೇಕು ಅಂತ ಪ್ರಧಾನಿ ಮೋದಿ ಜಾರಿಗೆ ತಂದ್ರ ತೆರಿಗೆ ಸೇವೆ. ಇಡೀ ದೇಶಾದ್ಯಂತ ಒಂದೇ ರೀತಿಯ ತೆರಿಗೆ ಇರಬೇಕು ಎನ್ನುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದ ಜಿಎಸ್ ಟಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ.,
ಆರಂಭದಲ್ಲಿ ಗಬ್ಬರ್ ಸಿಂಗ್ ಟ್ಯಾಕ್ಸ್ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು.., ಹಾಗೆನೇ ಎನ್ ಡಿಎ ಮೈತ್ರಿ ಕೂಟ ಹೊರತು ಪಡಿಸಿ ಉಳಿದ ಎಲ್ಲಾ ಪಕ್ಷಗಳೂ ಜಿಎಸ್ ಟಿಯನ್ನ ವಿರೋಧ ಮಾಡಿದ್ದವು. ಆಗ ಟೀಕೆ ಮಾಡಿದ ಪಕ್ಷಗಳು ಬಿಜೆಪಿ ಯೇತರ ಆಡಳಿತದಲ್ಲಿದ್ದ ರಾಜ್ಯಗಳೂ ಇದೀಗ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಆಗಿದೆ. ಯಾಕಂದ್ರೆ ಒಂದೊಂದು ರಾಜ್ಯಗಳು ನಾಮುಂದು ತಾಮುಂದು ಅಂತ ತೆರಿಗೆ ರೂಪದಲ್ಲಿ ಕೇಂದ್ರ ಹಣ ಸಂದಾಯ ಮಾಡುತ್ತಿವೆ.
ಅಷ್ಟಕ್ಕೂ ಜಿಎಸ್ ಟಿ ಜಾರಿಗೆ ಬಂದು ಹಲವು ವರ್ಷಗಳೇ ಕಳೆದಿವೆ., ಈಗ ಯಾಕೆ ಈ ವಿಚಾರ ಅಂತ ಪ್ರಶ್ನೆ ಮಾಡಬಹುದು. ಅದಕ್ಕೂ ಒಂದು ಕಾರಣವಿದೆ. ಇಂಡಿಯನ್ ಟೆಕ್ ಆಂಡ್ ಇನ್ಫ್ರಾ ಕೊಟ್ಟಿರೋ ಮಾಹಿತಿ ಪ್ರಕಾರ ಎಲ್ಲಾ ರಾಜ್ಯಗಳಿಂದಲೂ ಜಿಎಸ್ ಟಿ ರೂಪದ ತೆರಿಗೆ ನಿರೀಕ್ಷೆಗೂ ಮೀರಿ ಸಂಗ್ರಹವಾಗುತ್ತಿದೆ ಅಂತ ವರದಿ ಕೊಟ್ಟಿದೆ.
ಕಳೆದ ತಿಂಗಳು ಅಂದರೆ 2022 ರಸೆಪ್ಟೆಂಬರ್ ನಲ್ಲಿ ಟಾಪ್ 10 ಜಿಎಸ್ ಟಿ ಸಂಗ್ರಹದ ಪಟ್ಟಿಯನ್ನ ಪ್ರಕಟಮಾಡಿದ್ದು, ಅಚ್ಚರಿ ಎನ್ನುವಂಥಹ ಮಾಹಿತಿ ಬಹಿರಂಗವಾಗಿದೆ.
ಆ ವರದಿಯಲ್ಲಿ ಮೋದಿಯ ಕನಸಿನ ತೆರಿಗೆ ಸಂಗ್ರಹ ಮಾರ್ಗಕ್ಕೆ ಗುಜರಾತ್ ಕೂಡ ಅಷ್ಟು ಸಕರಾತ್ಮಕವಾಗಿ ಸ್ಪಂದನೆ ಮಾಡಿಲ್ಲ.. ಯಾಕಂದ್ರೆ ಗುಜರಾತ್ ಗಿಂತಲೂ ಹೆಚ್ಚು ತೆರಿಗೆ ಸಂಗ್ರಹವನ್ನ ಕರ್ನಾಟಕ ಮಾಡಿದೆ. ಹಾಗೆನೇ ದೇಶದ ಅತಿ ದೊಡ್ಡ ರಾಜ್ಯ ಅಂತ ಕರೆಸಿಕೊಳ್ಳುವ ಉತ್ತರ ಪ್ರದೇಶದಿಂದಲೂ ನಿರೀಕ್ಷೆ ಮಾಡಿದಂಷ್ಟು ತೆರಿಗೆ ಸಂಗ್ರಹವಾಗಿಲ್ಲ ಅನ್ನೋದು ಬಟಾಬಯಲಾಗಿದೆ.
ಕಳೆದ ತಿಂಗಳು ಮಹಾರಾಷ್ಟ್ರ ರಾಜ್ಯದಿಂದ 21,403 ಕೋಟಿ ಜಿಎಸ್ ಟಿ ಸಂಗ್ರಹವಾಗಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು 9,760 ಕೋಟಿ ಜಿಎಸ್ ಟಿ ಸಂಗ್ರಹವಾಗಿದೆ. ಟಾಪ್ 10 ರಲ್ಲಿ ಓಡಿಸ್ಸಾ ರಾಜ್ಯವಿದ್ದು, 3765 ಕೋಟಿ ಜಿಎಸ್ ಟಿ ಸಂಗ್ರಹವಾಗಿದೆ.
ದೇಶದ ಟಾಪ್ 10 ಜಿಎಸ್ ಟಿ ಸಂಗ್ರಹವಾದ ರಾಜ್ಯಗಳು
ರಾಜ್ಯ ಸೆಪ್ಟೆಂಬರ್ ತಿಂಗಳ ಸಂಗ್ರಹ( ಕೋಟಿಗಳಲ್ಲಿ)
ಮಹಾರಾಷ್ಟ್ರ 21,403 ಕೋಟಿ
ಕರ್ನಾಟಕ 9,760 ಕೋಟಿ
ಗುಜರಾತ್ 9020 ಕೋಟಿ
ತಮಿಳುನಾಡು 8637 ಕೋಟಿ
ಹರಿಯಾಣ 7403 ಕೋಟಿ
ಉತ್ತರ ಪ್ರದೇಶ 7004 ಕೋಟಿ
ಪಶ್ಚಿಮ ಬಂಗಾಳ 4804 ಕೋಟಿ
ದೆಹಲಿ 4741 ಕೋಟಿ
ತೆಲಂಗಾಣ 3915 ಕೋಟಿ
ಓಡಿಸ್ಸಾ 3765 ಕೋಟಿ