ಬೆಂಗಳೂರು, (thenewzmirror.com) ;
2023ರ ಜನವರಿ 15ರಂದು ಸೇನಾ ದಿನದ ಪಥಸಂಚಲನದ ಆತಿಥ್ಯವನ್ನ ಈ ಬಾರಿ ಬೆಂಗಳೂರು ವಹಿಸಲಿದೆ.. ರಾಷ್ಟ್ರದ ರಾಜಧಾನಿಯ ಹೊರಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಕ್ರಮಗಳನ್ನು ನಡೆಸುವ ನಿರ್ಧಾರಕ್ಕೆ ಅನುಗುಣವಾಗಿದ್ದು, ನಾಗರಿಕರ ವ್ಯಾಪಕವಾಗಿ ತೋರ್ಪಡಿಸುವ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯ ಹೆಚ್ಚಿನ ಉದ್ದೇಶ ಹೊಂದಿದೆ.
ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಅಧಿಕೃತವಾಗಿ ಅಧಿಕಾರವಹಿಸಿಕೊಂಡ ದಿನದ ಅಂಗವಾಗಿ ಜ. 15 ಅನ್ನ ಸೇನಾದಿನ ಆಚರಿಸಲಾಗುತ್ತಿದೆ. ಇದರ ಸಂಕೇತವಾಗಿ ಪಥಸಂಚಲನ ಆಯೋಜನೆ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಸುವುದು ದಕ್ಷಿಣ ಭಾರತದ ಜನರ ಶೌರ್ಯ, ತ್ಯಾಗ ಮತ್ತು ರಾಷ್ಟ್ರಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸುವುದಾಗಿದೆ ಮತ್ತು ಇದು ಕರ್ನಾಟಕ ಮೂಲದ ಫೀಲ್ಡ್ ಮಾರ್ಷಲ್. ಕೆ ,ಎಂ. ಕಾರ್ಯಪ್ಪ ಅವರಿಗೆ ಸಲ್ಲಿಸುವ ಗೌರವದ ದ್ಯೋತಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ದಿನಕ್ಕಾಗಿ ಭಾರತೀಯ ಸೇನೆಯು ಶಾಲಾ/ಕಾಲೇಜು ವಿದ್ಯಾರ್ಥಿಗಳು, ದೂರದ ಗ್ರಾಮಗಳು ಮತ್ತು ಸಮಾಜದ ಎಲ್ಲಾ ಸ್ತರಗಳ ಜನರೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಗರಿಕರ ಜತೆಗಿನ ಬಾಂಧವ್ಯವನ್ನು ವೃದ್ಧಿಸಲು ವ್ಯಾಪಕ ಪ್ರಚಾರ ಅಭಿಯಾನವನ್ನು ಆಯೋಜಿಸಿದೆ.
ಪಥಸಂಚಲನದ ದಿನವಾದ ಜ. 15 ರಂದು ಸೇನಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ವೀರಯೋಧರಿಗೆ ಪುಷ್ಪ ನಮನ ಸಲ್ಲಿಸುವ ಜತೆಗೆ ಸೇನಾ ದಿನದ ಪರೇಡ್ ಅನ್ನು ಅವಲೋಕಿಸುವರು. ಪಥಸಂಚಲನ (ಪರೇಡ್) ಭಾರತೀಯ ಸೇನೆಯ ಸೇನಾ ಪರಾಕ್ರಮವನ್ನು ಎತ್ತಿ ತೋರಿಸುವುದೇ ಅಲ್ಲದೆ, ಭವಿಷ್ಯ ಸಿದ್ಧ, ತಂತ್ರಜ್ಞಾನ ಆಧಾರಿತ, ಮಾರಕ ಮತ್ತು ಚುರುಕುಬುದ್ಧಿಯ ಪಡೆಯನ್ನಾಗಿ ಪರಿವರ್ತಿಸಲು ಭಾರತೀಯ ಸೇನೆಯು ಕೈಗೊಂಡಿರುವ ಪ್ರಯತ್ನಗಳನ್ನು ಪ್ರದರ್ಶಿಸುತ್ತದೆ.
ಸೇನಾ ದಿನಾಚರಣೆ 2023 ರ ಪೂರ್ವಭಾವಿಯಾಗಿ, ದಕ್ಷಿಣ ಕಮಾಂಡ್ ದೀಕ್ಷಾದಾನ ಸಮಾರಂಭವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. 2023ರ ಜನವರಿ 13 ರಂದು, ಸದರನ್ ಕಮಾಂಡ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಸೇನಾ ಸಿಬ್ಬಂದಿಗೆ ವಿಶಿಷ್ಟ ಸೇವಾ ಪ್ರಶಸ್ತಿಗಳನ್ನು ನೀಡಲಿದ್ದಾರೆ.
2022ರ ಡಿಸೆಂಬರ್ 17ರಂದು ವಿಜಯ ದಿನದ ಸ್ಮರಣಾರ್ಥ, “ದಕ್ಷಿಣ ಸ್ಟಾರ್ ವಿಜಯದ ಓಟ – 2022” (ಧೇಯ – ಸೈನಿಕರಿಗಾಗಿ ಓಟ – ಸೈನಿಕರೊಂದಿಗೆ ಓಟ) ಆಯೋಜಿಸಲಾಗಿತ್ತು, ಇದರಲ್ಲಿ ದಕ್ಷಿಣ ಕಮಾಂಡ್ ವ್ಯಾಪ್ತಿಯ 18 ಕೇಂದ್ರಗಳಲ್ಲಿ ಸುಮಾರು 50,000 ಮಂದಿ ಭಾಗವಹಿಸಿದ್ದರು (ಜೈಸಲ್ಮೇರ್, ಅಹಮದಾಬಾದ್, ಜೋದ್ಪುರ್, ಭುಜ್ & ಅಲ್ವಾರ್, ಭೋಪಾಲ್, ಸಿಕಂದ್ರಾಬಾದ್, ಝಾನ್ಸಿ, ಗ್ವಾಲಿಯರ್, ಚೆನ್ನೈ, ಬೆಂಗಳೂರು, ಬೆಳಗಾವಿ, ವೆಲ್ಲಿಂಗ್ಟನ್ (ಟಿಎನ್), ಪುಣೆ, ನಾಸಿಕ್, ನಾಗ್ಪುರ, ಅಹಮದಾಬಾದ್ ಮತ್ತು ಮುಂಬೈ) ಗಳಲ್ಲಿ ಏಕಕಾಲದಲ್ಲಿ ಹಸಿರು ನಿಶಾನೆ ತೋರಲಾಗಿತ್ತು.
24 ಡಿಸೆಂಬರ್ 2022- ರಕ್ತದಾನ ಮಾಡುವ ಮೂಲಕ ಅಗತ್ಯವಿರುವ ರೋಗಿಗಳಿಗೆ 7,500 ಯೂನಿಟ್ ರಕ್ತವನ್ನು ಸಂಗ್ರಹಿಸಲು ಮತ್ತು 75,000ಸ್ವಯಂಪ್ರೇರಿತ ದಾನಿಗಳ ದತ್ತಾಂಶ ಸಂಗ್ರಹ ಮಾಡಲಾಗುವುದು
30 ಡಿಸೆಂಬರ್ 2022 – ಭಾರತೀಯ ಸೇನೆಯಿಂದ 75 ದೂರದ /ಗಡಿ / ಅಭಿವೃದ್ಧಿಯಲ್ಲಿ ಹಿಂದುಳಿದ ಹಳ್ಳಿಗಳಲ್ಲಿ (ಧ್ಯೇಯ : ಗ್ರಾಮ ಸೇವೆ- ರಾಷ್ಟ್ರ ಸೇವೆ) ವೈದ್ಯಕೀಯ ಶಿಬಿರಗಳು, ಅಗ್ನಿಪಥ್ ಯೋಜನೆ ಜಾಗೃತಿ, ವೀರ ನಾರಿಯರು ಮತ್ತು ವೀರ ಮಾತಾಗಳ ಸನ್ಮಾನ, ಸ್ವಚ್ಚತಾ ಅಭಿಯಾನ, – ವಾಲಿಬಾಲ್ / ಖೋ ಖೋ / ಕಬಡ್ಡಿ ಆಟಗಳಿಗೆ ಮೂಲಸೌಕರ್ಯ ವೃದ್ಧಿ ಮತ್ತು ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು.
೦7 ಜನವರಿ 2023 – ‘ವಿದ್ಯಾಂಜಲಿ’ ಯೋಜನೆ, ಇದರಲ್ಲಿ ಆರ್ಮಿ ಪಬ್ಲಿಕ್ ಶಾಲೆಗಳು 75 ಸರ್ಕಾರಿ / ಸರ್ಕಾರಿ ಅನುದಾನಿತ ಶಾಲೆಗಳೊಂದಿಗೆ ಅಂಗಸಂಸ್ಥೆ ಹೊಂದಿದ್ದು, ಪರಸ್ಪರ ಅನುಕೂಲವಾಗುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಂಚಿಕೊಳ್ಳಲು ಮತ್ತು ವಿನಿಮಯ ಮಾಡಿಕೊಳ್ಳಲು ಕ್ರೀಡಾ ಮೂಲಸೌಕರ್ಯಗಳನ್ನು ವಿನಿಮಯ ಮಾಡಿಕೊಳ್ಳುವುದು, ಕ್ರೀಡಾಕೂಟಗಳನ್ನು ಆಯೋಜಿಸುವುದು ಮತ್ತು ಯೋಗ ಮತ್ತು ಇತರ ಮೃದು ಕೌಶಲ್ಯ (ಸಾಫ್ಟ್ ಸ್ಕಿಲ್ಸ್ )ಗಳನ್ನು ಉತ್ತೇಜಿಸುವುದು.
10 ಜನವರಿ 2023 – ಜಲಮೂಲಗಳ ಪುನರುಜ್ಜೀವನ ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಗಾಗಿ 75 ಅಮೃತ ಸರೋವರಗಳು / ಕರೆಗಳ (ಉದ್ದೇಶ: ಜಲ – ಜೀವನ್ ಸುರಕ್ಷಾ) ಸೃಷ್ಟಿ / ಪುನರುಜ್ಜೀವನದ ಕೆಲಸ.
14 ಜನವರಿ 2023 – ‘ವ್ರಾಕ್ಷರೋಪಣ’ (ಉದ್ದೇಶ : ಪರ್ಯಾವರಣ ಸುರಕ್ಷಾ) ದಕ್ಷಿಣ ಕಮಾಂಡ್ ಪ್ರದೇಶದಾದ್ಯಂತ ಹಸಿರು ಭಾರತಕ್ಕಾಗಿ 75,000 ಸಸಿಗಳನ್ನು ನೆಡುವುದು.
ಸೇನಾ ದಿನಾಚರಣೆಯ ವಾರದಲ್ಲಿ (2023ರ ಜನವರಿ 09-15ರವರೆಗೆ), ಶಸ್ತ್ರಾಸ್ತ್ರಗಳು ಮತ್ತು ಸಾಧನಗಳ ಪ್ರದರ್ಶನ, ಬ್ಯಾಂಡ್ ಪ್ರದರ್ಶನಗಳು, ರಸಪ್ರಶ್ನೆ ಸ್ಪರ್ಧೆಗಳು, ಚಿತ್ರಕಲೆ ಮತ್ತು ಪ್ರಬಂಧ ಬರೆಯುವ ಸ್ಪರ್ಧೆಗಳು, ಸೈಕ್ಲಥಾನ್ಗಳು, ಶೌರ್ಯ ಪ್ರಶಸ್ತಿ ಪುರಸ್ಕೃತರಿಂದ ಉತ್ತೇಜನಕಾರಿ ಭಾಷಣಗಳು, ಪ್ರಸಿದ್ಧ ಯುದ್ಧಗಳ ಮರುಸೃಷ್ಟಿ ಪ್ರದರ್ಶನ, ಯುದ್ಧ ಸ್ಮಾರಕ/ಯುದ್ಧ ವಸ್ತು ಸಂಗ್ರಹಾಲಯಗಳಿಗೆ ಭೇಟಿ ಮತ್ತು “ಏಕ್ ಭಾರತ್ ಸರ್ವಶ್ರೇಷ್ಠ ಭಾರತ’ ವಿಷಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.