ಬೆಂಗಳೂರು, (www.thenewzmirror.com) :
ದಕ್ಷಿಣ ಭಾರತದಲ್ಲಿ ಈಗ ಹೆಚ್ಚು ಬ್ಯೂಸಿ ಇರೋ ನಟಿ ರಶ್ಮಿಕಾ ಮಂದಣ್ಣ.., ಕೇವಲ ಸ್ಯಾಂಡಲ್ ವುಡ್ ಅಷ್ಟೇ ಅಲ್ಲ ಟಾಲಿವುಡ್ ಕಾಲಿವುಡ್ ಬಾಲಿವುಡ್ ನಲ್ಲಿ ಬ್ಯುಸಿ ಇರೋ ನಟಿ.
ಇಂಥ ಬ್ಯುಸಿ ಇರೋ ನಟಿ ಇದೀಗ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರಂತೆ. ಈಗಾಗಲೇ ಪುಷ್ಪ ಸಿನೆಮಾ ಪಾರ್ಟ್ 1 ಸಕ್ಸಸ್ ಬೆನ್ನಲ್ಲೇ ಬಾಲಿವುಡ್ ನ ಸಿನೆಮಾದಲ್ಲೂ ನಟನೆ ಮಾಡ್ತಿದ್ದಾರೆ.
ಪುಷ್ಪ ಪಾರ್ಟ್ 2 ಬಹು ನಿರೀಕ್ಷೆ ಹುಟ್ಟಿಸಿದೆಯಾದರೂ ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ. ಇದೇ ವೇಳೆ ಪುಷ್ಪ 2 ಗಾಗಿ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ದಾರಂತೆ.
ಅವರು ಕೇಳಿರೋ ಸಂಭಾವನೆ ಸಮಂತ ಅವರನ್ನೂ ಹಿಂದಿಕ್ಕಿದೆ ಅನ್ನೋ ಗಾಸಿಪ್ ಹರಿದಾಡುತ್ತಿದೆ. ಪುಷ್ಪ 1 ರಲ್ಲಿ 2 ಕೋಟಿ ಸಂಭಾವನೆ ಪಡೆದಿದ್ದ ನಟಿ ಇದಿಒಗ ಪುಷ್ಪ 2 ಗೆ 3 ಕೋಟಿ ಸಂಭಾವನೆ ಕೇಳಿದ್ದಾರಂತೆ. ಇದು ಸಮಂತಾ ಅವ್ರಿಗಿಂತ ಹೆಚ್ಚು ಅನ್ನೋ ಮಾತುಗಳೂ ಕೇಳಿ ಬರ್ತಿದೆ.
ತೆಲುಗು ಸಿನೆಮಾ ರಂಗದಲ್ಲಿ ಪೂಜಾ ಹೆಗ್ಡೆ 3.5 ಕೋಟಿ ಸಂಭಾವನೆ ಪಡೆಯುತ್ತಿರೋದ್ರಲ್ಲಿ ಮೊದಲನೆ ಸ್ಥಾನದಲ್ಲಿದ್ದಾರಂತೆ. ನಂತೆದ ಸ್ಥಾನದಲ್ಲಿ ರಶ್ಮಿಕಾ ನಿಲ್ಲೋ ಸಾಧ್ಯತೆ ಹೆಚ್ಚಿದೆ.
ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರೋರು
ಪೂಜಾ ಹೆಗ್ಡೆ 3.5 ಕೋಟಿ
ರಶ್ಮಿಕಾ ಮಂದಣ್ಣ 3 ಕೋಟಿ
ಸಮಂತಾ ರುತ್ ಪ್ರಭು 2 ಕೋಟಿ
ಕೀರ್ತಿ ಸುರೇಶ್ 2 ಕೋಟಿ
ಅನುಷ್ಕಾ ಶೆಟ್ಟಿ 2 ಕೋಟಿ