ಬೆಂಗಳೂರು, (www.thenewzmirror.com) :
ಟೊಮ್ಯಾಟೋ ಇದೀಗ ಮತ್ತೆ ದುಬಾರಿಯಾಗಿದೆ. ಅಕಾಲಿಕ ಮಳೆಯುಂದಾಗಿ ಟೊಮ್ಯಾಟೋ ದರದಲ್ಲಿಭಾರೀ ಏರಿಕೆ ಕಂಡಿದ್ದು, ಜೇಬಿಗೆ ಕತ್ತರಿ ಬೀಳುವಂತಿದೆ.
ನಾಲ್ಕೈದು ತಿಂಗಳ ಬಳಿಕ ಮತ್ತೆ ಟೊಮ್ಯಾಟೊ ದರ ಏರಿಕೆ ಕಂಡಿದೆ. ಈ ಹಿಂದೆ ಕೆ.ಜಿ ಟೊಮ್ಯಾಟೊ ಬೆಲೆ 100ರೂ. ಗಡಿ ದಾಟಿತ್ತು. ಆಗ ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿ ದರ ಏರಿಕೆಯಾಗಿತ್ತು. ಇದ್ರ ಬೆನ್ನಲ್ಲೇ ಬೇಸಿಗೆ ಇರೋದ್ರಿಂದ ರೈತರಿಗೆ ನೀರಿನ ಅಭಾವವಾಗಿತ್ತು. ಹೀಗಾಗಿ ಬೆಳೆ ನಿರೀಕ್ಷೆ ಮಾಡಿದಷ್ಟು ರೈತರಿಗರ ಸಿಗಲಿಲ್ಲ.
ನೀರಿನ ಅಭಾವದಿಂದಾಗಿ ಬಹುತೇಕ ರೈತರು ಟೊಮ್ಯಾಟೊ ಬೆಳೆಯೋದನ್ನೇ ಬಿಟ್ಟಿದ್ರು. ಹೀಗಾಗಿ ದರ ಕೊಂಚ ಏರಿಕೆಯಗಿತ್ತು. ಇದೀಗ ಬೆಂಗಳೂರಿನಲ್ಲಿ ಪ್ರತಿ ಕೆ.ಜಿ ಟೊಮ್ಯಾಟೊಗೆ 60 ರೂ.ಗೆ ಮಾರಾಟವಾಗ್ತಿದೆ. ಆನ್ ಲೈನ್ ನಲ್ಲಿ ಉತ್ತಮ ಗುಣಮಟ್ಟದ ಟೊಮ್ಯಾಟೊ ಬೆಲೆ 70ರವರೆಗೆ ಮಾರಾಟ ಮಾಡಲಾಗುತ್ತಿದೆ.
ಕಳೆದ ಒಂದು ತಿಂಗಳ ಹಿಂದೆ ಕೆ.ಜಿ ಟೊಮ್ಯಾಟೊ ದರ 10 ರಿಂದ 12ರೂ
ಸದ್ಯ ಬರೋಬ್ಬರಿ 50 ರಿಂದ 60 ರೂ. ಗೆ ಟೊಮ್ಯಾಟೊ ಮಾರಾಟ
ಹೊಸ ಇಳುವರಿ ಬರಲು 3 ರಿಂದ 4 ತಿಂಗಳು ಕಾಲಾವದಿ ಬೇಕು
ಕನಿಷ್ಠ ಇನ್ನು 3 ತಿಂಗಳು ಟೊಮ್ಯಾಟೊ ದರ ಇಳಿಯುವ ಲಕ್ಷಣ ಇಲ್ಲ
ಕೋಲಾರದಿಂದ ಬರುವ 14 ಕೆ.ಜಿ ಬಾಕ್ಸ್ ಟೊಮ್ಯಾಟೊಗೆ 600 ರಿಂದ 800 ರೂ.
ಮೈಸೂರು ಭಾಗದಿಂದ 22 ಕೆ.ಜಿ ಬಾಕ್ಸ್ ಟೊಮ್ಯಾಟೊ 900 ರಿಂದ 1,100ರೂ. ಇದೆ