ಬೆಂಗಳೂರು,(www.thenewzmirror.com):
ಇತ್ತೀಚೆಗೆ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಹೆಚ್ಚಳದ ಬೆನ್ನಲ್ಲೆ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ನೀಡಿದೆ ಸರ್ಕಾರ.., ಸದ್ದಿಲ್ಲದೆ ಆಟೋ ಪ್ರಯಾಣ ದರವನ್ನ ಏರಿಕೆ ಮಾಡಿದ್ದು, ಜೇಬಿಗೆ ಕತ್ತರಿ ಹಾಕೋಕೆ ಹೊರಟಿದೆ.
ಆಟೋ ದರ ಹೆಚ್ಚಿಸಿ ಬೆಂಗಳೂರಿನ ಜನತೆಗೆ ಶಾಕ್ ಮೇಲೆ ಶಾಕ್ ನೀಡುವ ಮೂಲಕ ಬೆಂಗಳೂರು ನಗರದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆಟೋರಿಕ್ಷಾ ಪ್ರಯಾಣ ದರ ಡಿಸೆಂಬರ್ 1 ರಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.
ಕರೊನಾದಿಂದಾಗಿ ಆಟೋ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಮೂರು ತಿಂಗಳಿನಿಂದ ಆಟೋ ಪ್ರಯಾಣ ದರ ಏರಿಸುವಂತೆ ಮನವಿ ಮಾಡುತ್ತಾ ಬಂದಿದ್ದರು. ಸತತ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ಕೊನೆಗೂ ಪ್ರಯಾಣ ದರ ಏರಿಕೆಗೆ ಸಮ್ಮತಿ ಸೂಚಿಸಿದೆ.
ಹೀಗಿರುತ್ತೆ ಆಟೋ ಪ್ರಯಾಣ ದರ
ಈ ಹಿಂದೆ ಬೆಂಗಳೂರಿನಲ್ಲಿ ಕನಿಷ್ಠ ದರ 25 ರೂ. ಅದೂ ಮೊದಲ 1.9 ಕಿ.ಮೀಗೆ. ಆದ್ರೀಗ ಗಳಾಗಿತ್ತು. ಆದ್ರೀಗ ಮೊದಲ 2 ಕಿ.ಮೀಗೆ 30 ರೂ.ಗಳಿಗೆ ಹೆಚ್ಚಿಸಿದ್ದು ಐದು ರೂ ಏರಿಕೆ ಮಾಡಲಾಗಿದೆ.
ಆಟೋ ರಿಕ್ಷಾದಲ್ಲಿ ಇದುವರೆಗೆ ಮೊದಲ 2 ಕಿಲೋ ಮೀಟರ್ ವರೆಗೆ ಪ್ರಯಾಣ ಮಾಡಲು ರೂ.25 ರೂಪಾಯಿ ದರ ನಿಗದಿಯಾಗಿತ್ತು. ಇದೀಗ ಐದು ರೂಪಾಯಿ ಹೆಚ್ಚಳ ಮಾಡಲಾಗಿದೆ. ಕನಿಷ್ಠ ದರ ಮೊದಲ 2 ಕಿಲೋ ಮೀಟರ್‌ಗೆ ರೂ.30 ನೀಡಬೇಕಿದೆ. ನಂತರದ ಪ್ರತಿ ಕಿಲೋ ಮೀಟರ್‌ಗೆ ರೂ.15 ರೂಪಾಯಿ ದರ ನಿಗದಿ ಪಡಿಸಲಾಗಿದೆ.
ವೈಟಿಂಗ್ ಚಾರ್ಜ್
ಆಟೋಗಳ ಕನಿಷ್ಠ ಪ್ರಯಾಣದರ ಮಾತ್ರವಲ್ಲ ವೈಯಿಟಿಂಗ್ ಚಾರ್ಜ್ ಸಹ ಏರಿಕೆ ಮಾಡಿದ್ದು, ಮೊದಲ ಐದು ನಿಮಿಷ ಉಚಿತವಾಗಿದ್ದು ಐದು ನಿಮಿಷನದ ನಂತರ ಪ್ರತಿ ಹದಿನೈದು ನಿಮಿಷಕ್ಕೆ ರೂ.5 ದರ ನಿಗದಿ ಪಡಿಸಲಾಗಿದೆ
ಲಗೇಜು ದರ
ಪ್ರಯಾಣಿಕರ ಲಗೇಜು ಸಾಗಾಣಿಕೆಗೆ ಮೊದಲ 20 ಕೆ. ಜಿ. ಉಚಿತವಾಗಿತ್ತು. ಪ್ರಯಾಣಿಕರ ಲಗೇಜು 20 ಕೆಜಿ ಇದ್ದರೆ 5 ರೂಪಾಯಿ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿಯಾಗಿದೆ.
ರಾತ್ರಿ ವೇಳೆಯ ದರ
ಇನ್ನು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ವರೆಗೆ ಸಾಮಾನ್ಯ ದರಕ್ಕಿಂದ ಒಂದೂವರೆ ಪಟ್ಟು ಹೆಚ್ಚಳ ಮಾಡಲು ಅವಕಾಶ ಕೊಡಲಾಗಿದೆ.
ಆಟೋ ಏರಿಕೆಗೆ ಕಾರಣಗಳು
ಅಗತ್ಯ ವಸ್ತುಗಳ ಬೆಲೆ ಏರಿಕೆ
ಆಟೋ ಗ್ಯಾಸ್, ಬಿಡಿ ಭಾಗಗಳ ದರ ಹೆಚ್ಚಳ
ನಿರ್ವಹಣೆ ವೆಚ್ಚವೂ ಅಧಿಕವಾಗಿರುವುದು
ಸುತ್ತೋಲೆಯಲ್ಲಿ ಏನಿದೆ…?
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ನೂತನ ಪರಿಷ್ಕೃತ ದರವನ್ನ ಎಲ್ಲಾ ಪ್ರಯಾಣಿಕರ ಆಟೋಗಳಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಪರಿಷ್ಕೃತ ದರಗಳನ್ನು ಮೀಟರಿನಲ್ಲಿ 2022 ರ ಫೆಬ್ರವರಿ ಅಂತ್ಯದೊಳಗೆ ಮುಂಚೆ ಪುನಃ ಸತ್ಯ ಮಾಪನೆ ಮಾಡಿ ಸೀಲ್ ಹಾಕಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.