ಬೆಂಗಳೂರು, (www.thenewzmirror.com);
ಬಿಬಿಎಂಪಿ ನೀಡಿರುವ ದೂರಿನನ್ವಯ ಕಂದಾಯ ಅಧಿಕಾರಿಗಳನ್ನು ರೆಪ್ರೆಸೆಂಟೇಷನ್ ಆಫ್ ಪಬ್ಲಿಕ್ ಆಕ್ಟ್ ಪ್ರಕಾರ ಏಕಾಏಕಿ ಬಂಧಿಸಿರುವುದು ಸೂಕ್ತವಲ್ಲ ಬದಲಿಗೆ ಅಕ್ರಮ ಎಸಗಿದೆ ಎನ್ನಲಾದ ಮೆ. ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು.
ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಮತ್ತು CEO ನಡೆಸುವ ತನಿಖೆಗೆ ಸಿದ್ದವಿದ್ದು ಅವರಿಗೆ ಮಾನಸಿಕವಾಗಿ ಹಿಂಸೆ ನೀಡಬಾರದು ಎಂದು ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮನವಿ ಮಾಡಿದರು.
ಯಾವುದಾದರೂ ಒಂದು ಸಂಸ್ಥೆ ತನಿಖೆಯನ್ನು ಮಾಡಲಿ ಎರಡು ಮೂರು ಪೊಲೀಸ್ ಠಾಣೆ ಗಳು ಅಥವಾ ವಿವಿಧ ಸಂಸ್ಥೆಗಳು ಭಾಗಿಯಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಬಾರದು ಎಂದು ಅಮೃತ್ ರಾಜ್ ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ
ಬಿ.ಬಿ.ಎಂ.ಪಿ ಕೇಂದ್ರ ಕಛೇರಿ ಆವರಣದಲ್ಲಿರುವ ನೌಕರರ ಭವನದಲ್ಲಿ ಏರ್ಪಡಿಸಿದ್ಧ ಪತ್ರಿಕಾಗೋಷ್ಟಿಯಲ್ಲಿ
ಸಂಘವನ್ನು ಪ್ರತಿನಿಧಿಸಿದ ವಕೀಲ ಶ್ರೀನಿವಾಸ್
ರೆಪ್ರೆಸೆಂಟೇಷನ್ ಆಫ್ ಪಬ್ಲಿಕ್ ಆಕ್ಟ್ ಪ್ರಕಾರ ಬಿಬಿಎಂಪಿ ದೂರು ದಾಖಲಿಸಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಅಧಿಕಾರಿ ದೂರು ದಾಖಲಿಸಬೇಕು. ಇಲ್ಲಿ ಪ್ರೊಸಿಜರ್ ಎರರ್ ಆಗಿದೆ ಎಂದು ಅಭಿಪ್ರಾಯಪಟ್ಟರು.
ಚಿಲುಮೆ ಸಂಸ್ಥೆ BLO ಗುರುತಿನ ಚೀಟಿಯನ್ನು ನಕಲಿ ಮಾಡಿ ಅಕ್ರಮ ಎಸಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಿಬಿಎಂಪಿ ಕಂದಾಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಕಾನೂನಿನ ಪ್ರಕಾರ ಅಸಮಂಜಸ, ಎಂದರು.
ದತ್ತಾಂಶ ಕಳುವ ಪ್ರಕರಣದಲ್ಲಿ ಮೆಲುಮೆ ಸಂಸ್ಥೆ ಭಾಗಿಯಾಗಿರುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತದಾರರ ಪಟ್ಟಿಯಲ್ಲಿ ದತ್ತಾಂಶ ಕಳುವು ಮತ್ತು ಮತದಾರರನ್ನು ತೆಗೆದು ಹಾಕಿರುವ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿ ಅಧಿಕಾರಿಗಳನ್ನು ಬಂಧಿಸುತ್ತಿರುವುದು ಸೂಕ್ತವಲ್ಲ. ಬಿಬಿಎಂಪಿ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಮತ್ತು ಪುನರಾವರ್ತನೆಯಾಗಿರುವ ಹೆಸರುಗಳನ್ನು ಮಾತ್ರ ತೆಗೆದು ಹಾಕಲಾಗಿದೆ.
ಸಂಘದ ಪದಾಧಿಕಾರಿಗಳಾದ ಕೆ.ಜಿ.ರವಿ,ಎಸ್.ಜಿ.ಸುರೇಶ್, ಸಾಯಿಶಂಕರ್, ರಾಮಚಂದ್ರ,ಕೆ.ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ರುದ್ರೇಶ್, ನರಸಿಂಹಸೂರ್ಯಕುಮಾರಿ, ಬಾಬಣ್ಣ, ಕಂದಾಯ ಉಪ ಆಯುಕ್ತರಾದ ಲಕ್ಷ್ಮೀ, ವಕೀಲರಾದ ಶ್ರೀನಿವಾಸ್ ಪಾಲ್ಗೊಂಡಿದ್ದರು.