ನವದೆಹಲಿ,(www.thenewzmirror.com):
ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಗೆ 51 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಭಾರತದ ಅತ್ಯುನ್ನತ ಚಲನಚಿತ್ರ ಗೌರವ ಪ್ರಶಸ್ತಿಯನ್ನ ನೀಡಿ ಸನ್ಮಾನಿಸಿದರು.
ನವದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ತಲೈವಾ ಭಾರತದ ಅತ್ಯುನ್ನತ ಚಲನಚಿತ್ರ ಗೌರವಕ್ಕೆ ಭಾಜನರಾದ್ರು.
ಭಾರತೀಯ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಗೆ ಈ ಪ್ರಶಸ್ತಿ ನೀಡಿದ್ದು, ಈ ವೇಳೆ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್, ಅಳಿಯಾ ಧನುಷ್, ಐಶ್ವರ್ಯ ಉಪಸ್ಥಿತರಿದ್ರು.
ಬಿಎಂಟಿಸಿಯಲ್ಲಿ ನಿರ್ವಾಹಕ ವೃತ್ತಿ ಆರಂಭಿಸಿದ್ದ ರಜನಿಕಾಂತ್, ಆರಂಭದಲ್ಲಿ ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದ್ರು. 1973ರಲ್ಲಿ ಅಭಿನಯದಲ್ಲಿ ಡಿಪ್ಲೊಮಾ ಪಡೆಯುವ ಸಲುವಾಗಿ ಮದ್ರಾಸ್ ಚಲನಚಿತ್ರ ಸಂಸ್ಥೆ ಸೇರಿಕೊಂಡ್ಡು ತಮ್ಮ ಎರಡನೇ ಇನ್ನಿಂಗ್ ಆರಂಭಿಸಿದರು.
ಅಪೂರ್ವ ರಾಗಂಗಳ್ ಚಿತ್ರದ ಮೂಲಕ ತಮ್ಮ ಬಣ್ಣ ಹಚ್ಚಲು ಆರಂಭಿಸಿದ ರಜನಿ, ನಂತರದ ದಿನಗಳಲ್ಲಿ ಸೂಪರ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವಷ್ಟು ಮಟ್ಟಕ್ಕೆ ಬೆಳೆದ್ರು.