ಬೆಂಗಳೂರು,(www.thenewzmirror.com):
ದೀಪಾವಳಿ ಹಬ್ಬ ಅಂದ್ರೆ ಅಲ್ಲಿ ಪಟಾಕಿಗಳದ್ದೇ ಸದ್ದು.., ಕರೋನಾ ಕಡಿಮೆಯಾಯ್ತು ಈ ಬಾರಿ ಭರ್ಜರಿ ವ್ಯಾಪಾರ ಆಗುತ್ತೆ ಅಂತ ಅನ್ಕೊಂಡಿದ್ದ ವ್ಯಾಪಾರಸ್ಥರಿಗೆ ಈ ಬಾರಿಯೂ ಶಾಕ್.., ಪುನೀತ್ ರಾಜ್ ಅವ್ರ ಅಕಾಲಿಕ ನಿಧನದಿಂದ ಸಿಟಿ ಮಂದಿ ನೋವಿನಲ್ಲಿದ್ದು, ಪಟಾಕಿ ಅಂಗಡಿಗಳತ್ತ ಮುಖ ಮಾಡ್ತಿಲ್ಲ..,
ಈ ಬಾರಿಯ ದೀಪಾವಳಿ ಹಬ್ಬ ಅಷ್ಟೋಂದು ಅದ್ಧೂರಿಯಾಗಿ ಆಚರಣೆಯಾಗೋದು ಅನುಮಾನ ಎನ್ನಲಾಗ್ತಿದೆ. ಪ್ರತಿ ವರ್ಷ ಹಬ್ಬ ಬರ್ತಿದ್ದಂತೆ ಗ್ರಾಹಕ್ರಿಂದ ತುಂಬಿ ತುಳುಕುತ್ತಿದ್ದ ಪಟಾಕಿ ಅಂಗಡಿಗಳು ಈ ಬಾರಿ ಬಿಕೋ ಎನ್ನುತ್ತಿವೆ.., ಗ್ರೀನ್ ಪಟಾಕಿ ಬಂದಿದೆ, ಬನ್ನಿ ಅಂದ್ರೂ ಗ್ರಾಹಕ್ರು ಬರ್ತಿಲ್ಲ.., ಪುನೀತ್ ರಾಜ್ ಕುಮಾರ್ ಅವ್ರ ಅಕಾಲಿಕ ನಿಧನದ ಎಫೆಕ್ಟ್ ಅನ್ನೋ ಮಾತುಗಳೂ ಕೇಳಿ ಬರ್ತಿವೆ.

ದೀಪಾವಳಿ ಹಬ್ಬ ಅಂದ್ರೆನೇ ಅಲ್ಲಿ ಪಟಾಕಿಗಳ ಅಬ್ಬರ ಇದ್ದೇ ಇರುತ್ತೆ.., ಆದ್ರೆ ಈ ಬಾರಿ ಅಂಥ ಅಬ್ಬರ ಕಾಣೋದು ಅನುಮಾನ ಎನ್ನಲಾಗ್ತಿದೆ. ಪರಿಸರ ಮಾಲಿನ್ಯ.., ಇನ್ನೂ ಮರೆಯಾಗದ ಕರೋನಾ ಕರಿಛಾಯೆ ಇದೆಲ್ಲಾದ್ರಿಂದ ಗ್ರಾಹಕ್ರೂ ಹೆಚ್ಚೆಚ್ಚು ಖರೀದಿಗೆ ಮುಂದೆ ಬರ್ತಿಲ್ಲ.., ಪಟಾಕಿ ಖರೀದಿ ಮಾಡ್ಬೇಕಲ್ವಾ ಅನ್ನೋ ಕಾರಣಕ್ಕೆ ಬಂದು ನೂರೋ ಇನ್ನೂರೋ ಕೊಟ್ಟು ಸಣ್ಣಪುಟ್ಟ ಪಟಾಕಿ ಖರೀದಿ ಮಾಡಿ ಹೋಗ್ತಿದ್ದಾರೆ.

ಮನೆಗನಂತಿದ್ದ ನಟ ಪುನೀತ್ ನಿಧನದಿಂದ ಹಬ್ಬ ಆಚರಣೆ ಮಾಡಲು ಸಿಟಿ ಮಂದಿ ಆಸಕ್ತಿ ತೋರಿಸುತ್ತಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬರ್ತಿದೆ. ನಗರದಲ್ಲಿ ಸದ್ಯದ ವಾತಾವರಣವನ್ನ ಗಮನಿಸಿದ್ರೆ.., ಈ ಬಾರಿ ಪಟಾಕಿ ಇಲ್ಲದೆ ಬೆಳಕಿನ ಹಬ್ಬ ಆಚರಣೆ ಆಗುತ್ತಾ ಅನ್ನೋ ಅನುಮಾನ ಮೂಡ್ತಿದೆ.