ಬೆಂಗಳೂರು , (www.thenewzmirror.com) :
ಇನ್ಮುಂದೆ ದೇವಸ್ಥಾನದಲ್ಲಿ ಮಹಾ ಮಂಗಳಾರತಿ, ಅಭಿಷೇಕದ ಸಂದರ್ಭದಲ್ಲಿ ನಿಗದಿತ ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಬಳಸುವಂತಿಲ್ಲವಂತೆ.., ಹೀಗೆ ಬಳಸಿದ್ರೆ ನೊಟೀಸ್ ಕೊಡ್ತೀವಿ ಅಂತ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ನೊಟೀಸ ಕೊಡುವ ಕೆಲ್ಸವನ್ನ ಮಾಡುತ್ತೆ..,
ಅದೇ ರೀತಿ ನಗರದ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ನೋಟಿಸ್ ಜಾರಿ ಮಾಡಲಾಗಿದೆ. ದೊಡ್ಡ ಗಣಪತಿ ದೇವಸ್ಥಾನ, ಮಿಂಟೋ ಆಂಜನೇಯ ದೇಗುಲ, ಕಾರಂಜಿ ಆಂಜನೇಯಸ್ವಾಮಿ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ಸೇರಿ ಹಲವು ದೇಗುಲಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಈಗಾಗಲೇ ನೊಟೀಸ್ ನೀಡಲಾಗಿದೆ.
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಮಂಗಳಾರತಿ, ಅಭಿಷೇಕ, ಹಬ್ಬ ಹರಿದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಂಟೆಯನ್ನ ಬಾರಿಸಲಾಗುತ್ತೆ. ಆದ್ರೆ ಅಂಥ ಗಂಟೆ ಬಾರಿಸಿದ್ದಕ್ಕೆ ಇದೀಗ ನಿಗದಿತ ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಬಳಕೆ ಆಗುತ್ತಿದೆ.., ನಿಗದಿತ ಡೆಸಿಬಲ್ಗಿಂತ ಕಡಿಮೆ ಶಬ್ದ ಬಳಸುವಂತೆ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ.
ದೇವಸ್ಥಾನದಲ್ಲಿರೋ ಘಂಟೆ, ಡಮರುಗ, ಧ್ವನಿ ವರ್ಧಕ ಬಳಕೆಗೆ ನಿಗದಿತ ಡೆಸಿಬಲ್ಗಿಂತ ಮೀರಬಾರದು. ಘಂಟೆ ಬಾರಿಸುವ ಸಂದರ್ಭದಲ್ಲೂ ನಿಗದಿತ ಡೆಸಿಬಲ್ ಗಿಂತ ಕಡಿಮೆ ಶಬ್ದ ಬಳಕೆ ಆಗಬೇಕು ಎಂದು ನೊಟೀಸ್ ನಲ್ಲಿ ಉಲ್ಲೇಖಿಸಲಾಗಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನೊಟೀಸ್ ಗೆ ಭಾರೀ ವಿರೋಧ ಕೇಳಿ ಬರ್ತಿದೆ. ಹಿಂದೂ ದೇವಾಲಯಗಳ ಮೇಲೆ ಇಂಥ ನೊಟೀಸ್ ಕೊಡುತ್ತಿರೋದು ಸರಿಯಲ್ಲ ಅಂತ ಭಕ್ತರು ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ.