ಬೆಂಗಳೂರು, (www.thenewzmirror.com) ;
ಕರೋನಾದ ನಡುವೆನೇ ಗ್ರಾಹಕರ ಜೇಬಿಗೆ KMF ಮತ್ತೊಂದು ಶಾಕ್ ನೀಡೋಕೆ ಮುಂದಾಗಿದೆ.. ಪ್ರತಿ ಲೀಟರ್ ಹಾಲಿನ ದರವನ್ನ ಕನಿಷ್ಟ 3 ರೂ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸ್ವತಃ ಈ ವಿಚಾರವನ್ನ KMF ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಸದ್ಯ ಲೀಟರ್ ಗೆ 37 ರೂ.ಇದ್ದು ಅದನ್ನ 40 ರೂ.ಗೆ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದೂ ಹೇಳಿರೋ ಅಧ್ಯಕ್ಷ, ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ತೀವಿ ಅಂತಾನೂ ಹೇಳಿದ್ದಾರೆ. ಇತ್ತೀಚೆಗೆ ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆನಡೆದಿದ್ದು ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ.
ದೇಶದ ಇತರ ರಾಜ್ಯಗಳಿಗೆ ಹೋಲಿಸಿದ್ರೆ ನಂದಿನಿ ಹಾಲಿನ ದರ ಕಡಿಮೆಇದ್ದು, ಅದನ್ನ ಸರಿದೂಗಿಸೋ ನಿಟ್ಟಿನಲ್ಲಿ ಹಾಗೆನೇ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ದರ ಹೆಚ್ಚಳಕ್ಕೆ ಮನವಿ ಮಾಡಿದ್ದರಿಂದ ಪ್ರಸ್ತಾವನೆಯನ್ನ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದ್ರು.
ಸದ್ಯ ಹಣಕಾಸು ಇಲಾಖೆ ಸಿಎಂ ಬಳಿ ಇದ್ದು, ಸಿಎಂ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳೋ ಸಾಧ್ಯತೆಯಿದೆ.., ಒಂದು ವೇಳೆ ಸಿಎಂ ರಿಂದ ಬೆಲೆ ಏರಿಕೆಗೆ ಅನುಮೋದನೆ ಸಿಕ್ಕಿದ್ದೇ ಆದ್ರೆ ಬರುವ ಲಾಭಾಂಶವನ್ನ ರೈತರಿಗೆ ನೀಡಲು ತೀರ್ಮಾನ ಮಾಡಲಾಗಿದೆ ಎಂದೂ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ರು. ಬಜೆಟ್ ವೇಳೆ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟವಾಗೋ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತಿವೆ.