ಬೆಂಗಳೂರು, (www.thenewzmirror.com) :
ತೆರಿಗೆಯಿಂದ ತಪ್ಪಿಸಿಕೊಳ್ಳಲು ವಿದೇಶಿ ಬ್ಯಾಂಕ್ ಗಳ ಖಾತೆಗಳಲ್ಲಿ ಹಣ ಇಟ್ಟಿರೋ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈಗೆ ಸಮನ್ಸ್ ಜಾರಿ ಮಾಡಿದೆ.
ಪನಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಈಗ ಐಶ್ವರ್ಯ ರೈ ಸಂಕಷ್ಟ ಎದುರಿಸುತ್ತಿದ್ದಾರೆ. ಈಗಾಗಲೇ ಜಾರಿ ಮಾಡಿದ್ದ ಸಮನ್ಸ್ ಗೆ ಸ್ಪಂದಿಸಿ ವಿಚಾರಣೆಗೆ ಹಾಜರಾಗದ ಕಾರಣ ಐಶ್ವರ್ಯ ರೈಗೆ ಮತ್ತೊಂದು ಬಾರಿ ಇಡಿ ಸಮನ್ಸ್ ಜಾರಿ ಮಾಡಿದೆ.
ವಿಶ್ವದ ಶ್ರೀಮಂತ ವ್ಯಕ್ತಿಗಳು ಆಯಾ ದೇಶದ ತೆರಿಗೆಗಳನ್ನು ಪಾವತಿ ಮಾಡುವುದರಿಂದ ತಪ್ಪಿಸಿಕೊಳ್ಳೋಕೆ ಕಡಲಾಚೆಯ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಹೊಂದಿ ಅಲ್ಲಿ ಹಣ ಇಟ್ಟಿದ್ದರು ಎಂದು ತಿಳಿದು ಬಂದಿದೆ..,
ಐಶ್ವರ್ಯ ರೈ ಸೇರಿದಂತೆ ಭಾರತದ 500 ಕ್ಕೂ ಹೆಚ್ಚು ಶ್ರೀಮಂತರು ಈ ರೀತಿ ಕಡಲಾಚೆಯ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿ ಹಣ ಇಟ್ಟಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಅಜಯ್ ದೇವಗನ್ ಸೇರಿದಂತೆ ಹಲವರು ಈ ಆರೋಪ ಎದುರಿಸುತ್ತಿದ್ದಾರೆ.
2016 ರಲ್ಲಿ ಪನಾಮಾ ಪೇಪರ್ಸ್ ಗಳು ಮಾಧ್ಯಮಗಳಿಗೆ ಲೀಕ್ ಆಗಿ ತೆರಿಗೆಗಳ್ಳರ ಅಸಲಿ ಬಣ್ಣ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಐಶ್ವರ್ಯ ರೈಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಕಳೆದ ಬಾರಿ ಜಾರಿ ಮಾಡಿದ್ದ ಸಮನ್ಸ್ ಗೆ ಹಾಜರಾಗಲು ಸಮಯ ಕೇಳಿದ್ದ ಐಶ್ವರ್ಯ ರೈ, ಮತ್ತೊಂದು ದಿನಾಂಕ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಇಡಿ ಈಗ ಐಶ್ವರ್ಯ ರೈ ಗೆ ಸಮನ್ಸ್ ಜಾರಿ ಮಾಡಿದೆ.
ಈಗ ಐಶ್ವರ್ಯ ರೈ ಇಡಿಗೆ ಯಾವ ರೀತಿಯ ಉತ್ತರ ಕೊಡುತ್ತಾರೆ ಎಂಬುವುದು ಕುತೂಹಲಕ್ಕೆಡೆ ಮಾಡಿದೆ.