ಬೆಂಗಳೂರು, (www.thenewzmirror.com):
ತಮ್ಮ ವಿರುದ್ಧ ಟ್ರೋಲ್ ಮಾಡುವವರಿಗರ ನಟಿ ತಮ್ಯ ಮತ್ತರ ಟಾಂಗ್ ಕೊಟ್ಟಿದ್ದಾಋ. ಅದರ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧವೂ ಗರಂ ಆಗಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಮತ್ತು ಸಚಿವ ಅಶ್ವಥ್ ನಾರಾಯಣ್ ಭೇಟಿ ಕುರಿತು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಂಸದೆ ಟ್ವಿಟ್ ಮಾಡಿ ಅಸಮಾಧಾನ ತೋಡಿಕೊಂಡಿದ್ದರು. ಇದು ಡಿಕೆಶಿ ಅಭಿಮಾನಿಗಳ ಅಸಮಧಾನಕ್ಕೆ ಕಾರಣವಾಗಿತ್ತು. ಇದ್ರಿಂದ ರೊಚ್ಚಿಗೆದಿದ್ದ ಅಭಿಮಾನಿಗಳು ಟ್ವೀಟ್ ಮೂಲಕಬೇ ರಮ್ಯಾಗೆ ಟಾಂಗ್ ಕೊಟ್ಟಿದ್ರು.
ಇದೀಗ ಮತ್ತೆ ಟ್ವಿಟ್ ವಾರ್ ಮುಂದುವರೆಸಿರುವ ನಟಿ ರಮ್ಯಾ, ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವಂತೆ ಕೆಪಿಸಿಸಿ ಕಚೇರಿಯಿಂದ ಸೂಚನೆ ಹೋಗಿದೆ ಎಂದು ನೇರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಕಚೇರಿಯಿಂದ ನನ್ನನ್ನು ಟ್ರೋಲ್ ಮಾಡುವಂತೆ ಸಂದೇಶವನ್ನೂ ರವಾನಿಸಲಾಗಿದೆ ಎಂದು ಟ್ವೀಟ್ ಮೂಲಕಗುಡುಗಿದ್ದಾರೆ.
ನನ್ನನ್ನು ಟ್ರೋಲ್ ಮಾಡುವ ತೊಂದರೆಯನ್ನು ನೀವು ತೆಗೆದುಕೊಳ್ಳಬೇಡಿ ಎಂದು ರಮ್ಯಾ ಹೇಳಿದ್ದಾರೆ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಟ್ರೋಲ್ ಮಾಡಿರುವ ಸರಣಿ ಸ್ಕ್ರೀನ್ ಶಾಟ್‍ಗಳನ್ನು ಹಂಚಿಕೊಳ್ಳುವುದರ ಮೂಲಕ ಕೆಪಿಸಿಸಿ ವಿರುದ್ಧ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ.
ಡಿಕೆ ಶಿವಕುಮಾರ್ ಅವರೇ ನಿಮಗೆ ಪಕ್ಷದ ಸದಸ್ಯತ್ವ ಕೊಟ್ಟು ಕಾಂಗ್ರೆಸ್ ಗೆ ಕರೆತಂದಿದ್ದು ಎಂದು ಡಿಕೆಶಿ ಫ್ಯಾನ್ಸ್ ಹೇಳಿದಕ್ಕೆ ರಮ್ಯಾ ಅವ್ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನನಗೆ ಅವಕಾಶ ಯಾರಾದರೂ ಕೊಟ್ಟಿದ್ದರೇ ಅದು ರಾಹುಲ್ ಗಾಂಧಿ ಮಾತ್ರ, ಅವರೇ ನ್ನ ಬೆನ್ನೆಲುಬಾಗಿ ಜೊತೆ ನಿಂತಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಹಾಗೆನೇ ನನಗೆ ಅವಕಾಶ ಕೊಟ್ಟೆ ಎಂದು ಹೇಳುತ್ತಿರುವವರು ಅವಕಾಶವಾದಿಗಳು.. ಅಂಥ ಅವಕಾಶವಾದಿಗಳು ನನ್ನ ಬೆನ್ನಿಗೆ ಚೂರಿ ಹಾಕಿದವರು ಹಾಗೂ ನನ್ನನ್ನ ಹತ್ತಿಕ್ಕಿದವರು ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಆರೋಪ ಮಾಡಿದ್ದಾರೆ.
ನೀವು ಟಿವಿಯಲ್ಲಿ ನೋಡುವುದೆಲ್ಲವೂ ಅವರ ಮರೆಮಾಚುವ ಪ್ರಹಸನವಾಗಿದೆ.., ಅವರೆದ್ದೆಲ್ಲ ವಂಚಕ ಮನಸ್ಸು ಎಂದು ಅಸಮಾಧಾನವನ್ನೂ ಹೊರಹಾಕಿದ್ದಾರೆ.