ಬೆಂಗಳೂರು, (www.thenewzmirror.com):
ದೇಶದಲ್ಲಿ ನಂಬರ್ ಒನ್ ಸಾರಿಗೆ ಸಂಸ್ಥೆ ಅಂದ್ರೆ ಅದು ಬಿಎಂಟಿಸಿ.., ಪ್ರತಿ ತಿಂಗಳು ತಾನು ಮಾಡಿರೋ ಸಾಲಕ್ಕೆ ಕೋಟಿಗಟ್ಟಲೇ ಹಣವನ್ನ ಬಡ್ಡಿ ರೂಪದಲ್ಲಿ ಕಟ್ಟುತ್ತಿದೆ. ಇದ್ರಿಂದ ಆಚೆ ಬರೋಕೆ ಎಷ್ಟೇಲ್ಲಾ ಯತ್ನಿಸಿದರೂ ಅದು ಸಾಧ್ಯವಾಗ್ತಿಲ್ಲ..,
ಹೇಗಾದರೂ ಮಾಡಿ ನಷ್ಟದ ಪ್ರಮಾಣವನ್ನ ತಗ್ಗಿಸೋ ನಿಟ್ಟಿನಲ್ಲಿ ಬಿಎಂಟಿಸಿ ಕೊನೆಗೂ ಒಂದು ಪ್ಲಾನ್ ಮಾಡಿದೆ. ಒಂದು ವೇಳೆ ಆ ಪ್ಲಾನ್ ಏನಾದ್ರೂ ವರ್ಕೌಟ್ ಆದ್ರೆ ನಷ್ಟದಲ್ಲಿರೋ ನಿಗಮ ಲಾಭದತ್ತ ಬರೋದಲ್ಲದೇ ಸಿಬ್ಬಂದಿಯ ಬಹು ದಿನದ ಬೇಡಿಕೆ ಈಡೇರಿದ್ರೂ ಅಚ್ಚರಿ ಪಡ್ಬೇಕಿಲ್ಲ..,
ಕೇಂದ್ರ ಸರ್ಕಾರದ 13ನೇ ಹಣಕಾಸು ಆಯೋಗದ ಅನುದಾನದಲ್ಲಿ ಬಿಎಂಟಿಸಿ ಡಿಪೋಗಳಲ್ಲಿ ಸೌರ ಫಲಕಗಳನ್ನ ಅಳವಡಿಸೋಕೆ ತೀರ್ಮಾನ ಮಾಡಿದೆ. ಬೆಸ್ಕಾಂ ನೇತೃತ್ವದಲ್ಲಿ ಅಳವಡಿಸೋ ಕಾರ್ಯದಲ್ಲಿ 22 ಬಸ್ ಡಿಪೋಗಳು, 3 ಕೇಂದ್ರೀಯ ಕಾರ್ಯಾಗಾರದ ಛಾವಣಿಗಳಲ್ಲಿ ಸೋಲಾರ್ ಯೂನಿಟ್ ಅಳವಡಿಕೆಯಾಗಲಿದೆ. ಈಗಾಗಲೇ 17 ಡಿಪೋಗಳಲ್ಲಿ ಕಾಮಗಾರಿ ಆರಂಭನೂ ಆಗಿದೆ.
ಈಗಾಗಲೇ ಸಿಬ್ಬಂದಿಗೆ ನಿಗಧಿತ ವೇಳೆಗೆ ವೇತನ ನೀಡೋಕೆ ಆಗದೇ ಆರ್ಥಿಕ ಸಂಕಷ್ಟವನ್ನ ಎದುರಿಸುತ್ತಿರೋ ಬಿಎಂಟಿಸಿ ಇದೀಗ ಈ ಯೋಜನೆಯಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನ ಉಳಿಸೋ ಸಾಧ್ಯತೆಯಿದೆ.
ಪ್ರತಿಯೊಂದಡು ಡಿಪೋದಲ್ಲಿ 43 ರಿಂದ 50 ಕಿಲೋ ವ್ಯಾಟ್ ಕೇಂದ್ರೀಯ ಕಾರ್ಯಾಗಾರಗಳಲ್ಲಿ 170 ಕಿಲೋ ವ್ಯಾಟ್ ಉತ್ಪಾದನಾ ಸಾಮರ್ಥ್ಯದ ಸೌರಶಕ್ತಿ ಸ್ಥಾವರಗಳನ್ನ ಸ್ಥಾಪಿಸೋ ಯೋಜನೆ ಇದಾಗಿದೆ. ಹೀಗೆ ಎಲ್ಲಾ ಡಿಪೋಗಳಲ್ಲಿ ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ಆದ್ರೆ ಪ್ರತಿ ತಿಂಗಳು ನಿಗಮಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ತಗ್ಗಲಿದೆ.. ಇಷ್ಟೆಲ್ಲಾ ಆದಾಯ ಬರೋ ಯೂನಿಟ್ ಗಳನ್ನ ಅಳವಡಿಸಬೇಕು ಅಂದ್ರೆ ಪ್ರತಿ ಡಿಪೋಗೆ ಕನಿಷ್ಠ 30 ಲಕ್ಷ ಖರ್ಚಾಗುತ್ತಂತೆ…
ಸದ್ಯ ಬಿಎಂಟಿಸಿಯಲ್ಲಿರೋ 45 ಡಿಪೋಗಳಿಂದ 1 ಕೋಟಿ 79 ಲಕ್ಷ ವಿದ್ಯುತ್ ಶುಲ್ಕ ಅಂತ ಪಾವತಿ ಮಾಡಲಾಗ್ತಿದೆ. ಒಂದು ವೇಳೆ ಸೋಲಾರ್ ಯೂನಿಟ್ ಅಳವಡಿಕೆಯಾದ್ರೆ ಇಷ್ಟೇಲ್ಲಾ ಹಣ ನಿಗಮಕ್ಕೆ ಉಳಿತಾಯವಾಗಲಿದೆ.