ಬೆಂಗಳೂರು/ ಬೆಳಗಾವಿ, (www.thenewzmirror.com) :
ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಕೋವಿಡ್ ನಿಯಮಗಳನ್ನು ಜನಪ್ರತಿನಿಧಿಗಳೇ ಉಲ್ಲಂಘನೆ ಮಾಡುವ ಮೂಲಕ ಬೇಜವಾಬ್ದಾರಿ ತೋರುತ್ತಿರುವುದಲ್ಲದೇ, ತಪ್ಪನ್ನು ಸಮರ್ಥಿಸಿಕೊಳ್ಳುವ ಮೂಲಕ ಉಢಾಫೆ ಉತ್ತರಗಳನ್ನು ನೀಡುತ್ತಿದ್ದಾರೆ.
ಇದಕ್ಕೆ ಸೂಕ್ತ ಉದಾಹರಣೆ ಅಂದ್ರೆ ಆಹಾರ ಹಾಗೂ ನಾಗರಿಕ ಸಚಿವ ಉಮೇಶ್ ಕತ್ತಿ, ಮಾಸ್ಕ್ ಯಾಕೆ ಸರ್ ಹಾಕಿಲ್ಲ ಅಂತ ಕೇಳಿದ್ರೆ ಮಾಸ್ಕ್ ಬಗ್ಗೆ ಉಡಾಫೆ ಮಾತನಾಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ ರಾಜ್ಯದ ಜನರ ಆಕ್ರೋಶಕ್ಕೂ ಕಾರಣವಾಗಿದೆ.
ಮಾಸ್ಕ್ ಹಾಕದೇ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಚಿವ ಉಮೇಶ್ ಕತ್ತಿಯವರನ್ನು ಪ್ರಶ್ನಿಸಿದ್ದಕ್ಕೆ, ಸಚಿವರು ಬೇಜವಾಬ್ದಾರಿ ಉತ್ತರ ನೀಡಿದ್ದು, ಮಾಸ್ಕ್ ಹಾಕುವುದು ಬಿಡುವುದು ನನ್ನ ವೈಯಕ್ತಿಕ ನಿರ್ಧಾರ. ನನಗೆ ಮಾಸ್ಕ್ ಹಾಕಬೇಕಂತ ಅನಿಸಿಲ್ಲ, ಹೀಗಾಗಿ ಹಾಕಿಲ್ಲ ಎಂದಿದ್ದಾರೆ.
ಮಾಸ್ಕ್ ಹಾಕೋದು ಬಿಡೋದು ಅವರವರ ನಿರ್ಧಾರ. ಯಾವುದೇ ನಿರ್ಬಂಧ ವಿಧಿಸಲ್ಲ ಎಂದು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಹಾಗಾಗಿ ನನಗೆ ಮಾಸ್ಕ್ ಹಾಕಬೇಕೆನಿಸಿಲ್ಲ ಎಂದು ತಮ್ಮ ಕ್ರಮವನ್ನ ಸಮರ್ಥಿಸಿಕೊಂಡಿದ್ದಾರೆ.