ಬೆಂಗಳೂರು,(www.thenewzmirror.com):
ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಇಡೀ ಸಿನಿಮಾ ಲೋಕವೇ ದುಃಖದಲ್ಲಿ ಮುಳುಗಿದೆ. ಮಣ್ಣಾಲಿ ಮಣ್ಣಾದರೂ ಅಭಿಮಾನಿಗಳ ಮನದಲ್ಲಿ ಪುನೀತ್ ಸದಾ ಜೀವಂತವಾಗಿಯೇ ಇರ್ತಾರೆ. ಸಾವಿನಲ್ಲೂ ಪುನೀತ್, ತಂದೆಯ ಹಾಗೆ ಸಾರ್ಥಕತೆ ಮೆರೆದಿದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಲ್ಲಿ ಬೆಳಕಿಗಾಗಿದ್ದಾರೆ. ಅಪ್ಪು ಒಬ್ಬರು ಇಬ್ಬರಿಗಲ್ಲ ಬದಲಿಗೆ ನಾಲ್ವರ ಬದುಕಿಗೆ ಬೆಳಕಾಗಿದ್ದಾರೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಕಣ್ಣುಗಳು ಇಬ್ಬರ ಬಾಳಿಗೆ ಬೆಳಕಾಗೋದನ್ನು ನೋಡಿದ್ದೇವೆ. ಆದರೆ ಪುನೀತ್ ಕಣ್ಣುಗಳು ನಾಲ್ವರ ಜೀವನಕ್ಕೆ ಆಧಾರವಾಗಿವೆ. ಈ ವಿಚಾರವಾಗಿ ಮಾಹಿತಿ ನೀಡಿದ ನಾರಾಯಣ ನೇತ್ರಾಲಯದ ನೇತ್ರ ತಜ್ಞ ಭುಜಂಗಶೆಟ್ಟಿ, ಕಾರ್ನಿಯಾದ ಮೇಲಿನ ಮತ್ತು ಆಳವಾದ ಪದರಗಳನ್ನು ಬೇರ್ಪಡಿಸುವ ಮೂಲಕ ಪ್ರತಿ ಕಣ್ಣಿನಿಂದ ತಲಾ ಎರಡು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತೆ.
ಆದರೆ ಇಲ್ಲಿ ಮೇಲ್ಪದರದ ಕಾರ್ನಿಯಲ್ ಕಾಯಿಲೆ ಇರುವ ಇಬ್ಬರು ರೋಗಿಗಳಿಗೆ ಮೇಲ್ಪದರವನ್ನು ಕಸಿ ಮಾಡಲಾಗಿದೆ. ಹಾಗೇ ಆಳವಾದ ಪದರವನ್ನು ಮಾತ್ರ ಎಂಡೋಥೀಲಿಯಲ್ ಅಥವಾ ಆಳವಾದ ಕಾರ್ನಿಯಲ್ ಲೇಯರ್ ಕಾಯಿಲೆ ಇರುವ ರೋಗಿಗಳಿಗೆ ಕಸಿಮಾಡಿದೆ. ಆದ್ದರಿಂದ, ನಾಲ್ಕು ವಿಭಿನ್ನ ರೋಗಿಗಳಿಗೆ ದೃಷ್ಟಿ ಬರಲು ಸಾಧ್ಯವಾಗಿದೆ.
ಪುನಿತ್ ಕಣ್ಣು ಆರೋಗ್ಯಕರವಾಗಿದ್ದವು. ಎರಡು ಕಣ್ಣುಗಳನ್ನು ಸದುಪಯೋಗಪಡಿಸಿಕೊಳ್ಳಲು ಎಲ್ಲ ಕಡೆ ಹುಡುಕಾಡಿ ಅರ್ಹ ನಾಲ್ವರು ಫಲಾನುಭವುಗಳಿಗೆ ಅಪ್ಪು ಕಣ್ಣಿನ ಪದರನ್ನ ಅಳವಡಿಸಲಾಗಿದೆ. ಅತ್ಯಾಧುನಿಕ ರೀತಿಯಲ್ಲಿ ಚಿಕಿತ್ಸೆ ನಡೆದಿದ್ದು, ಇದೀಗ ಇವರೆಲ್ಲ ಆರೋಗ್ಯವಾಗಿದ್ದಾರೆ.
ಒಬ್ಬ ಮಹಿಳೆ, ಉಳಿದವರು ಮೂವರು ಯುವಕರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇನ್ನು ಶಸ್ತ್ರ ಚಿಕಿತ್ಸೆ ಮಾಡುವಾಗ ಪುನೀತ್ ಕಣ್ಣು ಎಂಬುದು ತಿಳಿದಿರಲಿಲ್ಲ. ನಂತರ ಗೊತ್ತಾಯಿತು. ಗೊತ್ತಾದ ನಂತರ ಮಿಶ್ರ ಭಾವನೆ ವ್ಯಕ್ತವಾಯ್ತು ಅಂತ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಆ ದಿನದ ಅನುಭವ ಹಂಚಿಕೊಳ್ತಾರೆ.
ಪುನೀತ್ ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ರೂ ಮಾನಸಿಕವಾಗಿ ಯುವರತ್ನ ಎಂದಿಗೂ ಜೀವಂತ. ಇದರ ಜೊತೆಗೆ ಅವರು ಇಲ್ಲದೇ ಇದ್ರೂ ಅವ್ರ ಕಣ್ಣುಗಳು ಪ್ರಪಂಚವನ್ನ ನೊಡ್ತಾ ಇದ್ದಾವೆ. ಡಾ ರಾಜ್ ಕುಮಾರ್ 2006ರಲ್ಲಿ, ಪಾರ್ವತಮ್ಮ ರಾಜ್ ಕುಮಾರ್ 2017ರಲ್ಲಿ ನೇತ್ರದಾನ ಮಾಡಿದ್ದರು. ಇದೀಗ ಅಪ್ಪು ನೇತ್ರದಾನ ಮಾಡಿದ್ದಾರೆ. ಡಾ ರಾಜ್ ಕುಮಾರ್ ಕುಟುಂಬ ಸಾವಿನಲ್ಲೂ ಸಾರ್ಥಕತೆ ಮೆರೆದಿರುವುದು ನಿಜಕ್ಕೂ ಮಾದರಿ ಕಾರ್ಯವೇ!