ಬೆಂಗಳೂರು , (www.thenewzmirror.com) :
ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರೋ ಸೈಬರ್ ಕಳ್ಳರ ಹಾವಳಿಗೆ ಬ್ರೇಕ್ ಬೀಳ್ತಾನೇ ಇಲ್ಲ. ಇವರ ಲೀಸ್ಟ್ ಗೆ ಇದೀಗ ನಿವೃತ್ತ ಐಪಿಎಸ್ ಅಧಿಕಾರಿ ಮೋಸ ಹೋಗಿದ್ದಾರೆ.
ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಫೋನ್ ಮಾಡಿದ ಕಳ್ಳರು ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್‌ಬಿದರಿ ಅವರ ಬ್ಯಾಂಕ್ ಅಕೌಂಟ್ ನಿಂದ ಹಣ ಎಗರಿಸಿದ್ದಾರೆ.
ಬ್ಯಾಂಕ್ ಅಧಿಕಾರಿ ಎಂದು ಜರೆ ಮಾಡಿದ ಸೈಬರ್ ಕಳ್ಳ ತಾನು ಬ್ಯಾಂಕ್ ಅಧಿಕಾರಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಪಾನ್ ಕಾರ್ಡ್ ನಂ. ಲಿಂಕ್ ಮಾಡಬೇಕೆಂದು ಕರೆ ಮಾಡಿದ್ದಾರೆ. ಹಾಗೆನೇ ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗುವುದಾಗಿ ತಿಳಿಸಿದ್ದಾರೆ.
ಇದಾದ ಬಳಿಕ ಬಿದರಿ ಅವರ ಮೊಬೈಲ್ ಗೆ ಒಂದು ಎಸ್ ಎಂ ಎಸ್ ಮೂಲಕ ಓಟಿಪಿ ಕಳುಹಿಸಿದ್ದಾರೆ. ಬಳಿಕ ಮೊಬೈಲ್ ಗೆ ಬರುವ ಮೇಸೆಜ್ ನ ಓಟಿಪಿ ನಂ. ಕೇಳಿದ್ದಾರೆ. ಇದಾದ ಬಳಿಕ ಓಟಿಪಿ ನಂಬರ್ ಹೇಳಿದ ಕೆಲವೇ ಕ್ಷಣಗಳಲ್ಲಿ ಶಂಕರ್ ಬಿದರಿ ಅಕೌಂಟ್ ನಲ್ಲಿದ್ದ 89 ಸಾವಿರ ಹಣ ಕಡಿತವಾಗಿದೆ.
ಯಾವಾಗ ತಮ್ಮ ಅಕೌಂಟ್ ನಿಂದ 89 ಸಾವಿರ ಹಣ ಡ್ರಾ ಆಗಿದೆ ಎಂದು ತಿಳಿತೋ ತಕ್ಷಣವೇ ವಂಚನೆ ಹಿನ್ನಲೆ ಆಗ್ನೇಯ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಎಫ್ ಐಆರ್ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.