ಬೆಂಗಳೂರು, (www.thenewzmirror.com) :
ನಗರ ಸಂಚಾರಿ ಪೊಲೀಸರು ಇದೀಗ ಮತ್ತೊಂದು ಅತಂಕಕಾರಿ ವಿಚಾರವನ್ನ ತಿಳಿಸಿದ್ದು, ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆಯ ನಿಜಬಣ್ಣವನ್ನ ಬಯಲು ಮಾಡಿದೆ.
ದೇಶದಲ್ಲೇ ನಂಬರ್ ಒನ್ ಸಾರಿಗೆ ಸಂಸ್ಥೆ ಯಾವುದು ಅಂದ್ರೆ ಬಿಎಂಟಿಸಿ, KSRTC ಅಂತ ನಾವೆಲ್ಲಾ ಹೇಳ್ತೀವಿ.., ಆದ್ರೆ ಆ ಸಂಸ್ಥೆಗಳೇ ಇದೀಗ ಯಮನ ಏಜೆಂಟ್ ಎನ್ನುವ ರೀತಿ ವರ್ತನೆ ಮಾಡ್ತಿದ್ದಾವಾ ಅನ್ನೋ ಆತಂಕನೂ ಇದೀಗ ಎದುರಾಗಿದೆ.
ಸಂಚಾರಿ ಪೊಲೀಸರು ಕೊಟ್ಟಿರುವ ಮಾಹಿತಿ ಪ್ರಕಾರ ಬಿಎಂಟಿಸಿ ಬಸ್ ಗಳಿಂದಲೇ ಅತಿ ಹೆಚ್ಚು ಅಫಘಾತವಾಗಿದ್ದು, ಸಾವುಗಳಾಗಿವೆ ಅನ್ನೋ ಅಂಶವನ್ನ ತಿಳಿಸಿದ್ದಾರೆ.
ಹೌದು, 2021 ರಲ್ಲಿ ಬಿಎಂಟಿಸಿ ಬಸ್ ಆಕ್ಸಿಡೆಂಟ್ ನಿಂದ 27 ಸಾವುಗಳು, KSRTC ಬಸ್ ನಿಂದ 7 ಹಾಗೆನೇ ಖಾಸಗಿ ಬಸ್ ಗಳಿಂ 12 ಒಟ್ಟಾರೆ 46 ಸಾವುಗಳು ಸಂಭವಿಸಿವೆ ಅಂತ ಮಾಹಿತಿ ನೀಡಿದೆ.
ಆಕ್ಸಿಡೆಂಟ್ ಮಾಹಿತಿ
ಬಿಎಂಟಿಸಿ 27
KSRTC 07
ಖಾಸಗಿ ಬಸ್ 12
ಒಟ್ಟಾರೆ 46
ಇನ್ನೊಂದು ಮೂಲಗಳ ಪ್ರಕಾರ ಬಿಎಂಟಿಸಿ, KSRTC ಬಸ್ ಗಳ ನಿರ್ವಹಣೆ ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರೋದೇ ಇದಕ್ಕೆಲಾ ಕಾರಣ ಅಂತಾನೂ ಹೇಳಲಾಗ್ತಿದೆ.. ಯಾಕಂದ್ರೆ ಬಿಎಂಟಿಸಿ ಸಿಬ್ಬಂದಿ ಹೇಳೋ ಪ್ರಕಾರ ಡಿಪೋಗಳಲ್ಲಿ ಬಸ್ ಗಳ ನಿರ್ವಹಣೆ ಸರಿಯಾಗಿ ಮಾಡ್ತಿಲ್ಲ.., ಇದನ್ನ ಕೇಳೋ ಹೋದ್ರೆ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಾರೆ.., ನಾವು ಕೊಟ್ಟ ಬಸ್ ಅನ್ನ ರೂಟ್ ಗೆ ತೆಗೆದುಕೊಂಡು ಹೋಗುವ ಕೆಲ್ಸ ಮಾತ್ರ ನಿಮ್ಮದು ಅಂತ ಗದರಿಸುತ್ತಾರಂತೆ.
ಒಟ್ಟಿನಲ್ಲಿ ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆಗಳೇ ಇದೀಗ ಸಾವಿನ ಮಾರ್ಗವಾಗುತ್ತಿರುವುದು ನಿಜಕ್ಕೂ ಆತಂಕದ ವಿಚಾರ.