ಬೆಂಗಳೂರು,(www.thenewzmirror.com):
ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದ ಬಿಪಿನ್ ರಾವತ್ ಅವ್ರ ಸಾವಿನ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ಬ್ಯಾಂಕ್‌ನ ಮಹಿಳಾ ನೌಕರರೊಬ್ಬರನ್ನ ಅಮಾನತು ಮಾಡಲಾಗಿದೆ.
ಸರ್ಕಾರಿ ಸ್ವಾಮ್ಯದ ಜಮ್ಮು & ಕಾಶ್ಮೀರ ಬ್ಯಾಂಕ್‌ನ ಉದ್ಯೋಗಿ ಅಫ್ರೀನ್ ಹಸನ್ ನಕಾಶ್ ಅಮಾನತುಗೊಂಡವರು. ಬ್ಯಾಂಕ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಅಫ್ರೀನ್, ಫೇಸ್‌ಬುಕ್‌ನಲ್ಲಿ ಬಿಪಿನ್ ರಾವತ್ ಅವರ ಸಾವಿನ ಫೋಸ್ಟ್ ವೊಂದಕ್ಕೆ ನಗುವ ಎಮೋಜಿ ಹಾಕಿದ್ದರು. ಇದನ್ನು ಗಂಭೀರವಾಗಿರುವ ಪರಿಗಣಿಸಿರೋ ಬ್ಯಾಂಕ್ ಅಫ್ರೀನ್ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ನೌಕರರು ಸೋಷಿಯಲ್ ಮೀಡಿಯಾಗಳ ಬಳಕೆ ಕುರಿತು ಆಗಾಗ ಸುತ್ತೋಲೆ ಹೊರಡಿಸಿದ್ದರೂ ಈ ಮಹಿಳಾ ಸಿಬ್ಬಂದಿಯು ಸಾಮಾಜಿಕ ಜಾಲತಾಣದಲ್ಲಿ ದುರ್ವತನೆ ತೋರಿದ್ದಾರೆ. ಹೀಗಾಗಿ ಶಿಸ್ತುಕ್ರಮ ಕಾಯ್ದಿರಿಸಿ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗ ಮಾಹಿತಿ ನೀಡಿದೆ.