ಬೆಂಗಳೂರು,(www thenewzmirror.com):
ಬೆಂಗಳೂರಿನಲ್ಲಿ ಒಂದಾದ ಮೇಲೊಂದರಂತೆ ಕಟ್ಟಡಗಳು ಕುಸಿಯುತ್ತಿವೆ.., ಮತ್ತೊಂದ್ಕಡೆ ಅನಧಿಕೃತ ಕಟ್ಟಡಗಳು, ಅಪಾರ್ಟ್ ಮೆಂಟ್ ಗಳು ಉರುಳುತ್ತಲೇ ಇದಾವೆ.., ಹೀಗಿದ್ರೂ ಬಿಬಿಎಂಪಿ ಅಧಿಕಾರಿಗಳು ಅಕ್ರಮಕ್ಕೆ ಸಾಥ್ ಕೊಡ್ತಾ ಇದ್ದಾರಾ ಅನ್ನುವ ಅನುಮಾನ ಮೂಡುತ್ತಿದೆ..,
‘ದಿನ್ಯೂಸ್ ಮಿರರ್’ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬಿಬಿಎಂಪಿ ಅಧಿಕಾರಿಗಳೇ ಅಕ್ರಮವಾಗಿ ಕಟ್ಟಡಗಳನ್ನ ಕಟ್ಟಲು ಅನುವು ಮಾಡಿಕೊಡುತ್ತಿದ್ದಾರಾ ಅನ್ನುವ ಅನುಮಾನ ಮೂಡುತ್ತಿದೆ. ಅಷ್ಟೇ ಅಲ್ಲದೇ ನಕಲಿ ಪ್ಲಾನ್ ಗಳನ್ನ ನೀಡುತ್ತಿದ್ದಾರಾ ಅನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ವಸಂತಪುರ ವಾರ್ಡ್ ನಲ್ಲಿ ವೆಂಕಟರೆಡ್ಡಿ ಲೇಔಟ್ ಇದೆ. ಈ ಲೇಔಟ್ ನಲ್ಲಿ ಕಳೆದ 40 ವರ್ಷಗಳಿಂದ ವಾಸಿಸುತ್ತಿರುವ ನಾಗರಿಕರಿಗೆ ಹೊಸದಾಗಿ ನಿರ್ಮಾಣಮಾಡುತ್ತಿರುವ ಅಪಾರ್ಟ್ ಮೆಂಟ್ ನಿಂದ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ‘ವನ್ಶಿಕ ಸ್ವಿವೆನ್ ಅಪಾರ್ಟ್ ಮೆಂಟ್’ ಗೆ ಬಿಬಿಎಂಪಿ ಅಧಿಕಾರಿಗಳು ಸಾಥ್ ಕೊಡುತ್ತಿದ್ದಾರೆ ಎನ್ನುವ ಆರೋಪವನ್ನ ಸಾರ್ವಜನಿಕರು ಮಾಡುತ್ತಿದ್ದಾರೆ.
40 ವರ್ಷ ಇಲ್ಲದ ರಸ್ತೆ ದಿಢೀರ್ ಉದ್ಭವ
ಇಂಥ ಪ್ರಶ್ನೆಯನ್ನ ವೆಂಕಟರೆಡ್ಡಿ ಲೇಔಟ್ ನ ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ನಿರ್ಮಾಣ ಕಾರ್ಯ ಮಾಡುತ್ತಿರುವ ‘ವನ್ಶಿಕ ಸ್ವಿವೆನ್ ಅಪಾರ್ಟ್ ಮೆಂಟ್’ ತನ್ನ ಗ್ರಾಹಕರಿಗೆ ಅನುಕೂಲವಾಗಲಿ ಎಂದು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರಂತೆ.., ತನ್ನ ಅಪಾರ್ಟ್ ಮೆಂಟ್ ಗೆ ಸಹಾಯವಾಗಲಿ ಎಂದು 40 ವರ್ಷ ಇಲ್ಲದ ರಸ್ತೆಯನ್ನ ಏಕಾಏಕಿ ನಿರ್ಮಿಸಿದ್ದಾರೆ. ಇದಕ್ಕಾಗಿ ಹಲವು ವರ್ಷಗಳಿಂದ ಇದ್ದ ಕಾಂಪೌಂಡ್ ಅನ್ನ ಒಡೆದುಹಾಕಿದ್ದಾರೆ ಎಂದು ನಿವಾಸಿಗಳು ಆರೋಪ ಮಾಡುತ್ತಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ಶಾಮೀಲು…?
ಇನ್ನೊಂದು ಆರೋಫ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೇಳಿ ಬರ್ತಿದೆ. ವೆಂಕಟರೆಡ್ಡಿ ಲೇಔಟ್ ನಲ್ಲಿ ಡೆಡ್ ಎಂಡ ರಸ್ತೆ ಅಂತ ಲೇಔಟ್ ನಲ್ಲಿ ತೋರಿಸಲಾಗಿದೆ. ಆದರೆ ‘ವನ್ಶಿಕ ಸ್ವಿವೆನ್ ಅಪಾರ್ಟ್ ಮೆಂಟ್’ ಗೆ ಪ್ಲಾನ್ ನೀಡುವಾಗ ರಸ್ತೆ ಇದೆ ಎಂದು ಪ್ಲಾನ್ ಗೆ ಅನುಮತಿ ನೀಡಿದ್ದಾರೆ. ಬಿಬಿಎಂಪಿಯವರೇ ಅನುಮತಿ ನೀಡಿದ್ದಾರೆ ಎಂದು ಸೈಟ್ ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹರೀಶ್ ದಾಖಲೆಗಳನ್ನ ತೋರಿಸುತ್ತಿದ್ದಾರೆ. ಆದರೆ ಅದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಬಿಬಿಎಂಪಿ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿ ಅಪಾರ್ಟ್ ಮೆಂಟ್ ಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ದೂರುತಿದ್ದಾರೆ ನಿವಾಸಿಗಳು.
‘ವನ್ಶಿಕ ಸ್ವಿವೆನ್ ಅಪಾರ್ಟ್ ಮೆಂಟ್’ ಗೆ ಕೇವಲ ಒಂದೇ ಕಡೆ ರಸ್ತೆ ಮೀಸಲಿಡಲಾಗಿದೆ. ಆದರೆ ಒಂದೇ ಕಡೆ ರಸ್ತೆ ಇದ್ದರೆ ಗ್ರಾಹಕರು ಅಪಾರ್ಟ್ ಮೆಂಟ್ ಖರೀದಿ ಮಾಡೋದಿಲ್ಲ ಅನ್ನ ದುರಾಸೆಯಲ್ಲಿ ಹಲವು ವರ್ಷಗಳಿಂದ ಇದ್ದ ತಡೆಗೋಡೆಯನ್ನ ರಾತ್ರೋರಾತ್ರಿ ಡೆಮಾಲಿಷನ್ ಮಾಡಿದ್ದಾರಂತೆ. ಇದನ್ನ ಕೇಳಹೋದ ಸ್ಥಳೀಯರಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕಿಸುತ್ತಿದ್ದಾರಂತೆ.
ಈ ನಿಟ್ಟಿನಲ್ಲಿ ಪೊಲೀಸ್ ಠಾಣೆಯಲ್ಲೂ ದೂರು ನೀಡಲಾಗಿದೆ. ಡಿಸಿಪಿ, ಎಸಿಪಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲಂತೆ. ಪೊಲೀಸರು ಬಿಲ್ಡರ್ ಪರವಾಗಿಯೇ ವಕಾಲತ್ತು ವಹಿಸುತ್ತಿದ್ದಾರೆ ಅಂತ ನಿವಾಸಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ.
ವಾರ್ಡ್ AEE ಏನು ಮಾಡುತ್ತಿದ್ದಾರೆ…?
ಇನ್ನು ವಸಂತಪುರ ವಾರ್ಡ್ AEE ತಿಮ್ಮಯ್ಯ ವೆಂಕಟಪ್ಪ ಅವರನ್ನ ಕೇಳಿದರೆ ನಾನು ಈ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ಹೋಗಲಿಲ್ಲ.., ಇನ್ನೊಂದು ವಾರದಲ್ಲಿ ಹೋಗಿ ಪರಿಶೀಲನೆ ನಡೆಸುತ್ತೀನಿ.., ಎಂದು ಹೇಳುತ್ತಾರೆ.
ಒಂದು ವಾರ್ಡ್ ನಲ್ಲಿ ಯಾವುದೇ ಒಂದು ಕಟ್ಟಡ, ಅಪಾರ್ಟ್ ಮೆಂಟ್ ನಿರ್ಮಾಣ ವಾಗುತ್ತಿದೆ ಅಂದರೆ ಅದು ಕಾನೂನು ಬದ್ಧವಾಗಿ ಇದೆಯೋ ಇಲ್ಲವೋ ಅನ್ನೋದನ್ನ ಕಾಲಕಾಲಕ್ಕೆ ಪರಿಶೀಲನೆ ನಡೆಸ್ಬೇಕು. ಆದ್ರೆ ಅದ್ಯಾವುದನ್ನೂ ಮಾಡದೇ ನಾಲ್ಕು ಅಂತಸ್ತು ಕಟ್ಟುವ ವರೆಗೂ ಸುಮ್ಮನಿರೋದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಜಂಟಿ ಆಯುಕ್ತರು ಹೇಳುವುದೇನು..?
ಇನ್ನು ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ರಾಮಕೃಷ್ಣ ಅವರನ್ನ ಕೇಳಿದರೆ ಬಿಬಿಎಂಪಿ ಅವರಿಂದ ರಸ್ತೆ ಇದೆ ಎಂದು ದಾಖಳೆಗಳನ್ನ ನೀಡಿಲ್ಲ.., ಬೇಕಾದರೆ ನಿವಾಸಿಗಳು ಪೊಲೀಸ್ ದೂರು ಕೊಡಲಿ ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಳುಚಿಕೊಳ್ಳುವ ಯತ್ನ ಮಾಡುತ್ತಿರುವುದು ಇದರಲ್ಲಿ ಅವರ ಪಾಲು ಇದ್ಯಾ ಅನ್ನುವ ಪ್ರಶ್ನೆ ಮೂಡುತ್ತಿದೆ.
‘ವನ್ಶಿಕ ಸ್ವಿವೆನ್ ಅಪಾರ್ಟ್ ಮೆಂಟ್’ ಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಕಾನೂನು ಬಾಹಿರವಾಗಿ ಬಿಲ್ಡಿಂಗ್ ಪ್ಲಾನ್ ಕೊಟ್ಟಿದ್ದೇ ಆದರೆ ಕೂಡಲೇ ಅದನ್ನ ಕ್ಯಾನ್ಸಲ್ ಮಾಡಬೇಕು.
ಹಾಗೆನೇ ಒಡೆದಿರುವ ತಡೆಗೋಡೆಯನ್ನ ಮರು ನಿರ್ಮಾಣ ಮಾಡಬೇಕು ಎಂದು ಕುವೆಂಪು ಸ್ವಸಹಾಯ ಸೇವಾ ಸಂಘದ ಅಧ್ಯಕ್ಷ ಚಂದ್ರೇಗೌಡ ಮನವಿ ಮಾಡುತ್ತಿದ್ದಾರೆ.