ಬೆಂಗಳೂರು, (www.thenewzmirror.com) :
ರಾಜಾಕಾಲುವೆ ಒತ್ತುವರಿಯಿಂದ ಮನೆಗಳಿಗೆ ಮಳೆ ನೀರು ನುಗ್ಗಿ ನಗರದಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿತ್ತು. ಇದ್ರ ಬೆನ್ನಲ್ಲೇ ಎಚ್ಚತ್ತ ಸರ್ಕಾರ ರಾಜಾಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದೆ. ಈಗ ರಾಜಕಾಲುವೆ ಒತ್ತುವರಿ ಮಾಡಿ ಮನೆ ಕಟ್ಟಿದವರಿಗೆ ಢವಢವ ಶುರುವಾಗಿದೆ…
ರಾಜಾಧಾನಿ ಬೆಂಗಳೂರಿನಲ್ಲಿ ಕೆರೆ ಒತ್ತುವರಿ, ರಾಜಾಕಾಲುವೆ ಒತ್ತುವರಿ ಸಮಸ್ಯೆ ಇವತ್ತು ನಿನ್ನೆಯದಲ್ಲ. ಸಮಸ್ಯೆ ಕಣ್ಣಿಗೆ ಕಂಡಿದ್ತೂ ನಮ್ಮ ಸರ್ಕಾರ ಕುರುಡಾಗಿತ್ತು. ಕಳೆದ ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಇಡೀ ಬೆಂಗಳೂರು ಉತ್ತರವೇ ತತ್ತರಿಸಿ ಹೋಗಿತ್ತು.
ಕೆಲವು ಕಡೆ ಕೆರೆ ನೀರು ಮನೆ, ಅಪಾರ್ಟ್ಮೆಂಟ್, ಅಂಗಡಿ-ಮುಂಗಟ್ಟುಗಳಿಗೆ ನುಗ್ಗಿದ್ರೆ, ಇನ್ನು ಕೆಲವು ಕಡೆ ಕೆರೆ ಕೋಡಿ ತುಂಬಿ ಅದ್ವಾನವಾಗಿತ್ತು. ಬೆಂಗಳೂರು ಉತ್ತರ ಭಾಗದ ಜನರು ಅಕ್ಷರಶಃ ನರಕಯಾತನೆ ಅನುಭವಿಸಿದ್ದು, ಸರ್ಕಾರ, ಬಿಬಿಎಂಪಿ ಗೆ ಹಿಡಿಶಾಪ ಹಾಕಿದ್ರು. ಇದ್ರ ಬೆನ್ನಲ್ಲೆ ಎಚ್ಚೆತ್ತ ಸರ್ಕಾರ ಈಗ ಒತ್ತುವರಿಯಾದ ರಾಜಾಕಾಲುವೆ ತೆರವುಗೊಳಿಸಲು ಸೂಚನೆ ನೀಡಿದೆ.
ಒತ್ತುವರಿ ವಿವರ
ಒತ್ತುವರಿ ಲೀಸ್ಟ್ ನಲ್ಲಿ ಒಟ್ಟು 356 ವಾಸದ ಮನೆಗಳು
959 ಕಡೆಗಳಲ್ಲಿ ಖಾಲಿಜಾಗಕ್ಕೆ ಒತ್ತುವರಿಗೊಳಿಸಿ ಬೇಲಿ
ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿದೆ 35 ವಾಣಿಜ್ಯ ಕೈಗಾರಿಕಾ ಕಟ್ಟಡಗಳು
244 ಕಡೆಗಳಲ್ಲಿ ರಾಜಕಾಲುವೆ ಜಾಗ ಒತ್ತುವರಿ ಮಾಡಿ ನಿರ್ಮಾಣ
ಸರ್ಕಾರದ ಒತ್ತುವರಿ ಲೀಸ್ಟ್ ನಲ್ಲಿ ನಗರದ ಒಟ್ಟು 356 ವಾಸದ ಮನೆ
ಗಳಿದ್ದು, 959 ಕಡೆಗಳಲ್ಲಿ ಖಾಲಿಜಾಗಕ್ಕೆ ಒತ್ತುವರಿಗೊಳಿಸಿ ಬೇಲಿ ಹಾಕಿರೋದು ಗೊತ್ತಾಗಿದೆ. ಇನ್ನು ಒತ್ತುವರಿ ಜಾಗದಲ್ಲಿ 35 ವಾಣಿಜ್ಯ ಕೈಗಾರಿಕಾ ಕಟ್ಟಡಗಳು ನಿರ್ಮಾಣವಾಗಿದ್ದು, 244 ಕಡೆಗಳಲ್ಲಿ ರಾಜಕಾಲುವೆ ಜಾಗ ಒತ್ತುವರಿ ಮಾಡಿ ಕಟ್ಟಡ ಕಟ್ಟಲಾಗಿದೆ ಅಂತಾ ಗುರುತಿಸಲಾಗಿದೆ. ಹೀಗಾಗಿಯೇ ನಾನಾ ರೂಪಗಳಲ್ಲಿ ರಾಜಕಾಲುವೆ ಒತ್ತುವರಿಯಿಂದ ಸ್ವಲ್ಪ ಮಳೆ ಬಂದ್ರೆ ಇಡೀ ರಾಜಧಾನಿ ಕೆರೆಯಂತಾಗುತ್ತೆ. ಈಗಾಗಲೇ ಗುರುತಿಸಲ್ಪಟ್ಟ ಎಲ್ಲ ಒತ್ತುವರಿಗಳನ್ನು ತಕ್ಷಣ ತೆರವುಗೊಳಿಸುವಂತೆ ಸಿಎಂ ಆದೇಶ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಕಾರ್ಯಪ್ರವೃತವಾಗಿದ್ದಾರೆ.
ರಾಜಾಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಸಿಎಂ ಏನೋ ಸೂಚನೆ ನೀಡಿದ್ದಾರೆ. ಆದ್ರೆ, ಈಗಿರುವ ಪ್ರಶ್ನೆ ಎಲ್ಲಿಂದ ತೆರವು ಮಾಡುತ್ತೆ ಬಿಬಿಎಂಪಿ..? ತೆರವು ಮಾಡ್ತಾರಾ ಅಥವಾ ಮಳೆ ಕಡಿಮೆ ಆದ್ಮೇಲೆ ಸೈಲೆಂಟ್ ಆಗ್ತಾರಾ.. ಅನ್ನೋದು…ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.