ಆನ್ಲೈನ್ ಕ್ಲಾಸ್ಗೆ ತೊಂದರೆ ದೂರು
ಬೆಂಗಳೂರು:
ಸಾರ್ವಜನಿಕರ ದೂರಿನ ಮೇಲೆ ಬೀದಿ ತರಕಾರಿ ವ್ಯಾಪಾರಿಗಳು ಬಳಸುತ್ತಿದ್ದ ಮೈಕುಗಳನ್ನು ಪೂರ್ವ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ.
ತರಕಾರಿ, ಪಾತ್ರೆ, ಬಟ್ಟೆ ವ್ಯಾಪಾರಕ್ಕೆ ಆಟೋ, ಸ್ಕೂಟರ್ನಲ್ಲಿ ಬರುತ್ತಿದ್ದ ವ್ಯಾಪಾರಿಗಳು ಮೈಕ್ ಬಳಸುತ್ತಿದ್ದರು. ಇದರಿಂದ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಮತ್ತು ವೃದ್ಧರಿಗೆ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳು ವಾಹನಗಳಿಗೆ ಅಳವಡಿಸಿದ್ದ ಮೈಕ್ ಜಪ್ತಿ ಮಾಡಿದ್ದಾರೆ.
ಮೈಕ್ ಜಪ್ತಿ ಮಾಡಿದ ಪೊಲೀಸರ ಕ್ರಮಕ್ಕೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಬೀದಿ ಬೀದಿಯಲ್ಲಿ ವ್ಯಾಪಾರ ಮಾಡಿದರೆ ಅವರ ಸಂಕಷ್ಟ ಏನು ಅಂತಾ ಗೊತ್ತಾಗುತ್ತದೆ. ತಿರುಗಾಡುವುದಲ್ಲದೆ ಬಾಯಲ್ಲಿ ಸಾರುತ್ತಾ ವ್ಯಾಪಾರ ಮಾಡುವ ನೋವು ಅವರಿಗೆ ಮಾತ್ರ ಗೊತ್ತು. ಮೈಕ್ನಲ್ಲಿ ಸಾರುವುದರಿಂದ ಅಂತದ್ದೇನು ತೊಂದರೆ ಆಗುತ್ತದೆ ಎಂದು ಟೀಕಿಸಿದ್ದಾರೆ.