ಬೆಂಗಳೂರಿಗರೇ ಹುಷಾರ್……! ಹುಷಾರ್…! ನೀವು ಅಪಾಯದಲ್ಲಿದ್ದೀರಿ….!!

ಬೆಂಗಳೂರು, (www.thenewzmirror.com):

ಬೆಂಗಳೂರಿನ ಮಂದಿ ಮಳೆಗಾಲ ಮುಗಿಯುವ ವರೆಗೂ ಎಚ್ಚರಿಕೆಯಿಂದ ಇರಬೇಕು.., ನಿಮ್ಮದಲ್ಲದ ತಪ್ಪಿಗೆ ನಿಮ್ಮ ಪ್ರಾಣ ಪಕ್ಷಿ ಹಾರಿ ಹೋದರೂ ಹೋಗಬಹುದು..,

RELATED POSTS

ಹೀಗಂತ ನಾವು ಹೆದರಿಸುವ ಕೆಲ್ಸವನ್ನ ನಾವು ಮಾಡುತ್ತಿಲ್ಲ.., ಬದಲಾಗಿ ಬಿಬಿಎಂಪಿ ಕೊಟ್ಟಿರುವ ಮಾಹಿತಿಯನ್ನ ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಾ ಇದ್ದೀವಿ.., ಯಾವ ರೀತಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗ್ತಿದೆಯೋ ಅದೇ ರೀತಿ ನಗರದಲ್ಲಿ ಅಪಾಯದ ಅಂದರೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಂಖ್ಯೆನೂ ಏರಿಕೆಯಾಗುತ್ತಿದೆ.

ಸದ್ಯಕ್ಕೆ 2019 ರಲ್ಲಿ ಬಿಬಿಎಂಪಿ ಸರ್ವೆ ಮಾಡಿದ್ದಾಗ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಗಳ ಸಂಖ್ಯೆ 185 ಇತ್ತು., 2021 ರ ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ವೆ ನಡೆಸಿದಾಗ ಅದರ ಸಂಖ್ಯೆ 396ಕ್ಕೆ ಮುಟ್ಟಿತ್ತು. ಅಕ್ಟೋಬರ್ ಮೊದಲ ವಾರದಿಂದ ನಡೆಸುತ್ತಿರುವ ರ್ಯಾಪಿಡ್ ಸರ್ವೆಯಲ್ಲಿ ಇದರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಿದ್ದು, 396 ರ ಬದಲು 581ಕ್ಕೆ ಬಂದು ಮುಟ್ಟಿದ್ದು, ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ.

ಏನ್ ಹೇಳ್ತಾರೆ ಬಿಬಿಎಂಪಿ ಆಯುಕ್ತರು..?

ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋ ಶಿಥಿಲಾವಸ್ಥೆಯಲ್ಲಿರೋ ಕಟ್ಟಡಗಳ ಸಂಖ್ಯೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಮಾತ್ರ ಮತ್ತದೇ ಉಡಾಫೆ ಉತ್ತರ ಕೊಡ್ತಾರೆ.., ಮಳೆ ಬಂದು ಗೋಡೆಗೆ ಕಟ್ಟಿದ್ದ ಇಟ್ಟಿಗೆ ಮೆತ್ತಗೆ ಆಗಿ ಬೀಳುವ ಸ್ಥಿತಿ ನಿರ್ಮಾಣವಾಗುತ್ತಿದೆ. ಆದಷ್ಟು ಬೇಗ ಕಟ್ಟಡಗಳ ಸರ್ವೆ ಮುಗಿಸಿ ನೊಟೀಸ್ ಕೊಟ್ಟು ಡೆಮಾಲಿಷನ್ ಮಾಡ್ತೀವಿ ಅಂತ ಹೇಳ್ತಿದ್ದಾರೆ.

ನಗರದಲ್ಲಿ ಅಪಾಯದ ಅಂಚಿನಲ್ಲಿರುವ ಕಟ್ಟಡಗಳು

ವಲಯ 2019 2021( ಸೆ.) 2021( ಅ.)
ದಕ್ಷಿಣ ‌‌‌ 33 103 132
ಪಶ್ಚಿಮ 34 95 129
ಪೂರ್ವ 46 67 113
ಮಹದೇವಪುರ 03 24 27
ಆರ್.ಆರ್.ನಗರ 01 11 12
ಬೊಮ್ಮನಹಳ್ಳಿ 00 09 09
ಯಲಹಂಕ 60 84 144
ದಾಸರಹಳ್ಳಿ 08 03 11
ಒಟ್ಟಾರೆ 185 396 581

ವಲಯ ಜಂಟಿ ಆಯುಕ್ತರು ಏನು ಮಾಡುತ್ತಿದ್ದಾರೆ..?

ಇನ್ನು ವಲಯವಾರು ಇರುವ ಜಂಟಿ ಆಯುಕ್ತರು ಅಪಾಯದ ಹಂತದಲ್ಲಿರೋ ಕಟ್ಟಡಗಳನ್ನ ತೆರವು ಮಾಡುವ ಕೆಲಸ ಮಾಡಬೇಕು ಆದರೆ ಹಬ್ಬ ಹರಿದಿನ ಅಂತ ರಜೆ ಹಾಕಿಕೊಂಡು ಪೂಜೆಯಲ್ಲಿ ನಿರತರಾಗಿದ್ದಾರೆ. ಇಂಥ ಜಂಟಿ ಆಯುಕ್ತರನ್ನ ನಂಬಿಕೊಂಡು ಕೂತಿದ್ದಾರೆ.., ಅವರು ಕೊಡುವ ಲೆಕ್ಕವನ್ನ ಇಟ್ಟುಕೊಂಡು ಮಾಧ್ಯಮಗಳಿಗೆ ಅದನ್ನೇ ಹೇಳುತ್ತಾ ಹೋಗುತ್ತಿದ್ದಾರೆ. ಇಂಥ ವಲಯ ಜಂಟಿ ಆಯುಕ್ತರಿಗೆ ಕಿವಿ ಹಿಂಡುವ ಕೆಲಸ ಮಾಡದೇ ಹೋದರೆ ಇನ್ನಷ್ಟು ಅಪಾಯ ಕಟ್ಟಿಟ್ಟ ಬುತ್ತಿ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist