ಬೆಂಗಳೂರು, (www.thenewzmirror.com):
ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಒಮಿಕ್ರಾನ್ ಆತಂಕ ಹೆಚ್ಚಾಗಿದೆ. ಕಾರಣ ಅತಿ ಹೆಚ್ಚು ಒಮಿಕ್ರಾನ್ ಸೋಂಕಿತರು ಪತ್ತೆಯಾಗಿರೋದು ಬೆಂಗಳೂರಿನಲ್ಲಿಯೇ.., ಹೀಗಾಗಿಯೇ ಬಿಬಿಎಂಪಿ ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಸೂಪರ್ ಐಡಿಯಾವೊಂದನ್ಬ ಮಾಡಿದೆ.
ಹೌದು, ಹೈ ರಿಸ್ಕ್ ದೇಶಗಳು ಅಂತ ಯಾವುದೆಲ್ಲಾ ಸದ್ಯಕ್ಕೆ ಗುರ್ತಿಸಿಕೊಂಡಿದಾವೋ ಅಂಥಹ ದೇಶಗಳಿಂದ ಬರುವ ಪ್ರಯಾಣಿಕರು ಬೆಂಗಳೂರಿಗೆ ಎಂಟ್ರಿ ಕೊಡುವಂತಿಲ್ಲ..,ಹೀಗಂತ ಬಿಬಿಎಂಪಿ ಆದೇಶವೊಂದನ್ನ ಹೊರಡಿಸಿದೆ.
ಬ್ರಿಟನ್.. ದಕ್ಷಿಣ ಆಫ್ರಿಕಾ.. ಅಮೆರಿಕದ ಪ್ರಯಾಣಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದವರು 15 ದಿನಗಳ ಕಾಲ ನಗರಕ್ಕೆ ಎಂಟ್ರಿ ಕೊಡುವಂತಿಲ್ಲ…, ಕಾರಣ ಅವರಿಗೆ ಕೋವಿಡ್ ನೆಗೆಟಿವ್ ಬಂದರೂ 15 ದಿನಗಳಕಾಲ ಕ್ವಾರಂಟೈನ್ ಆಗಬೇಕು.
ಇದಕ್ಕಾಗಿ ಬಿಬಿಎಂಪಿ ದೇವನಹಳ್ಳಿ ಸುತ್ತಮುತ್ತಲಿನ ಹೊಟೇಲದ ಗಳನ್ನ ನಿಗದಿಪಡಿಸಿದೆ. ಅಲ್ಲಿ ಕ್ವಾರಂಟೈನ್ ಆಗಿ ಹದಿನೈದು ದಿನಗಳ ನಂತರ ಅವರಿಗೆ ಮತ್ತೆ ಕೋವಿಡ್ ಟೆಸ್ಟ್ ಮಾಡಲಾಗುತ್ತೆ. ಆಗ ನೆಗೆಟಿವ್ ರಿಪೋರ್ಟ್ ಬಂದರೆ ಮಾತ್ರ ನಗರಕ್ಕೆ ಎಂಟ್ರಿ ಅಂತ ಬಿಬಿಎಂಪೊ ಹೇಳುತ್ತಿದೆ.
ಇಷ್ಟು ದಿನ ನೆಗೆಟಿವ್ ರಿಪೋರ್ಟ್ ಬಂದರೆ ಮನೆಯಲ್ಲೇ ಹೋಂ ಐಸೋಲೇಷನ್ ಆಗಬಹುದಿತ್ತು. ಆದರೆ ಒಮಿಕ್ರಾನ್ ವೈರಸ್ ದೇಹದಲ್ಲಿ ಹೊಕ್ಕಿ ಹತ್ತು ದಿನಗಳ ನಂತರವಷ್ಟೇ ಆಕ್ಟಿವ್ ಆಗುತ್ತೆ ಅಂತ ತಜ್ಞರು ಹೇಳಿರೋ ಹಿನ್ನಲೆಯಲ್ಲಿ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.