ಬೆಂಗಳೂರು,(www.thenewzmirror.com) :
ಬೆಂಗಳೂರು ವಿವಿಯಲ್ಲಿ ABVP ನಡೆಸುತ್ತಿದ್ದ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ನಡೆದಿದೆ.., ವಿವಿಯಲ್ಲಿ ಶೈಕ್ಷಣಿಕ ಸಮಸ್ಯೆಗಳನ್ನ ಬಗೆಹರಿಸಿ ಅಂತ ABVP ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ವಿವಿ ಸಂಶೋಧನಾ ವಿದ್ಯಾರ್ಥಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ವಿದ್ಯಾರ್ಥಿಗಳ ನಡುವೆನೇ ಗಲಾಟೆ ಜೋರಾದ ಹಿನ್ನಲೆಯಲ್ಲಿ ಪೊಲೀಸರಿಂದ ಪರಿಸ್ಥಿತಿ ನಿಯಂತ್ರಣ ತರೋಕೆ ಲಾಠಿ ಚಾರ್ಜ್ ಮಾಡಲಾಗಿದೆ.
ಘಟನೆಯಲ್ಲಿ 25 ರಿಂದ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜ್ಞಾನಭಾರತಿಯ ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿ ಬೇರೆಬೇರೆ ವಿಚಾರಗಳಿಗಾಗಿ ಪ್ರತಿಭಟನೆಗೆ ವಿದ್ಯಾರ್ಥಿಗಳು ಮುಂದಾಗಿದ್ರು.., ಈ ವೇಳೆ ಎಬಿವಿಪಿ ಮತ್ತು ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ನಡುವೆ ಜಗಳ ಆರಂಭವಾಗಿದೆ. ರಾಯಚೂರಿನಲ್ಲಿ ಅಂಬೇಡ್ಕರ್ ರವರಿಗೆ ಅವಮಾನ ಹಿನ್ನೆಲೆ ಈ ವಿಚಾರಕ್ಕೆ ಪ್ರತಿಭಟನೆ ಮಾಡುವಂತೆ ABVPಗೆ ಸಂಶೋಧನಾ ವಿವಿಗಳು ಮನವಿ ಮಾಡಿದ್ದಾರೆ. ಆದ್ರೆ ABVP ಮಾರ್ಕ್ಸ್ ಕಾರ್ಡ್, ಫಲಿತಾಂಶ ತಡವಾಗಿ ಬರುತ್ತಿರುವ ಹಿನ್ನೆಲೆ ಎಬಿವಿಪಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಾಡ್ತಾ ಇದ್ರು.
ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರೊ ವಿಚಾರ ಇದೇ ದೊಡ್ಡದು.., ದೇಶಕ್ಕಾಗಿ ನೀವು ಬರೊಲ್ಲ, ಮಾರ್ಕ್ಸ್ ಕಾರ್ಡ್, ಫಲಿತಾಂಶ ತಡವಾಗೋದು ಇದೆಲ್ಲ ಮಾಮೂಲಿ.., ಇವತ್ತು ನಮ್ಮ ಪ್ರತಿಭಟನೆ ಇದೆ.. ನೀವು ನಾಳೆ ಬನ್ನಿ ಅಂತ ಹೇಳಿದಕ್ಕೆ ಗಲಾಟೆ ಜೋರಾಗಿದೆ. ಗಲಾಟೆ ಎಬಿವಿಬಿ ವಿದ್ಯಾರ್ಥಿಗಳ ಮೇಲೆ ಬೆಂಗಳೂರು ಸಂಶೋಧನಾ ವಿವಿ ವಿದ್ಯಾರ್ಥಿಗಳಿಂದ ಹಲ್ಲೆ ನಡೆಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂಗಳೂರು ವಿವಿ ಸ್ನಾತಕ ಹಾಗೂ ಸ್ನಾತೋಕತ್ತರ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ರು..,ಮತ್ತೊಂದಡೆ ಸಂಶೋಧನಾ ವಿದ್ಯಾರ್ಥಿಗಳಿಂದ ಅಂಬೇಡ್ಕರ್ ಭಾವಚಿತ್ರವನ್ನ ವಿವಿ ಗಣರಾಜೋತ್ಸವ ದಿನ ಇಟ್ಟಿಲ್ಲ ಅನ್ನೊದಕ್ಕೆ ಪ್ರತಿಭಟನೆ ನಡೆಯುತಿತ್ತು.,ಕಳೆದ ಎರಡು ದಿನಗಳಿಂದ ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ., ಇಂದು ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದ ವೇಳೆ ಗಲಾಟೆ., ಬೆಂಗಳೂರು ವಿವಿ ಸಂಶೋಧನಾ ಹಾಗೂ ಎಬಿವಿಪಿ ವಿದ್ಯಾರ್ಥಿಗಳ ನಡುವೆ ಗಲಾಟೆ.., ಅಂಬೇಡ್ಕರ್ ಅವಮಾನ ವಿಚಾರ ಬಿಟ್ಟು ಬೇರೆ ಪ್ರತಿಭಟನೆಗೆ ಮುಂದಾಗಿರೊದಕ್ಕೆ ಗಲಾಟೆ ನಡೆದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ ಅಂತ ಮಾಹಿತಿ ನೀಡಿದ್ದಾರೆ.