ಬೆಂಗಳೂರು, ( www.thenewzmirror.com) :
ಭಾರತದ ಕಿರಿಯ ಕವಯತ್ರಿ ಕು. ಅಮನ ಜೆ.ಕುಮಾರ್ ರವರ World Amidst the Words ಕವನ ಸಂಕಲನವನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಬಿಡುಗಡೆ ಮಾಡಿದರು.
155 ಕವಿತೆಗಳನ್ನ ಒಳಗೊಂಡಿರೋ World Amidst the Words ಕವನ ಸಂಕಲನದಲ್ಲಿ ಪ್ರಕೃತಿ, ಕೋವಿಡ್,ಕುಟುಂಬ, ಹಾಸ್ಯ, ದೇವರು, ಸಾಹಿತ್ಯ, ಭಾವನೆ, ಶಾಂತಿ, ಕೃತಜ್ಞತೆ, ಮಾನವೀಯತೆ, ಸಮಾಜ, ದೇಶ, ಜೀವನ, ಪ್ರೀತಿ, ಕನಸು, ಅನುಭವ,ಮಹಾತ್ವಾಕಾಂಕ್ಷೆ ಸೇರಿದಂತೆ ಹಲವು ಸ್ವಾರಸ್ಯಕರ ತಿರುಳುಗಳನ್ನೊಳಗೊಂಡಿದೆ. ಯುವಕವಯತ್ರಿ ಯ ಕವನ ಸಂಕಲನ ಅಮೆಜಾನ್, ಪ್ಲಿಪ್ ಕಾರ್ಟ್, ಪ್ಲೇ ಸ್ಟೋರ್, ಎವಿನ್ಸ್ ಪಬ್ಲಿಷಿಂಗ್ ಗಳಲ್ಲಿ ಸಿಗಲಿದೆ.
ಅಮನಳ ಮೊದಲ ಕವನ ಸಂಕಲನ Echoes of Soulful Poems ಕಳೆದ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿತ್ತು. ಒಂದು ವರ್ಷದಲ್ಲಿ ಅತಿ ಹೆಚ್ಚು ಕವನಗಳನ್ನ ವಿವಿಧ ವಿಷಯಗಳಲ್ಲಿ ಬರೆದಿರುವುದಕ್ಕೆ ಇಂಡಿಯಾ ಬುಕ್ ಆಫ್ ರೆಕಾಡ್ಸ್, ಏಷಿಯಾ ಬುಕ್ ಆಫ್ ರೆಕಾಡ್ಸ್, ಹಾಗೂ ನೊಬೆಲ್ ಬುಕ್ ಆಫ್ ರೆಕಾಡ್ ಗಳಲ್ಲಿ ದಾಖಲಾಗಿದ್ದಾಳೆ.
ಕುಮಾರಿ ಅಮನಳಾ ತಾಯಿ KSRTC ಯಲ್ಲಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.