ಬೆಂಗಳೂರು,(www.thenewzmirror.com):
ಮಹಮ್ಮದ್ ರಫಿಕ್.., ಜಾನುವಾರುಗಳಿಗೆ ಆಸರೆಯಾಗಿದ್ದ ಕೆಆರ್ ಪುರಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್.., ನಗರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ…,
ಇಂದು ಬೆಳಗ್ಗೆ ಸ್ನಾನಕ್ಕೆ ತೆರಳಿದ್ದಾಗ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಮನೆಯವರಯ ವೈದ್ಯರನ್ನ ಕರೆಸಿ ತಪಾಸಣೆ ಮಾಡಿಸಿದ್ದಾರೆ. ಆದರೆ ಅಷ್ಟರಲ್ಲೇ ಮಹಮ್ಮದ್ ರಫೀಕ್ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ..,
ಪೊಲೀಸ್ ಇಲಾಖೆಯಲ್ಲಿ ಸರಳ ವ್ಯಕ್ತಿ ಅಂತಲೇ ಗುರ್ತಿಸಿಕೊಂಡಿದ್ದ ಪೊಲೀಸ ಅಧಿಕಾರಿ.., ಇಲಾಖೆಯಲ್ಲಿ ಎಲ್ಲರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಒಬ್ಬ ಸಹೃದಯಿ.., ಕಲೆ ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದ ಅಧಿಕಾರಿ
ಲಾಕ್ ಡೌನ್ ವೇಳೆ ಗೋವುಗಳನ್ನ ರಕ್ಷಣೆ ಮಾಡುವುದು ಅವುಗಳನ್ನ ಪೋಷಣೆ ಮಾಡುವುದನ್ನ ಮಾಡುತ್ತಿದ್ದರೆ. ಅದೇ ವೇಳೆಗೆ ಸಾವಿನ ದವಡೆಯಲ್ಲಿದ್ದ ಹಸುವಿನ ಕರುವನ್ನ ರಕ್ಷಿಸಿ ಅದಕ್ಕೆ ಮರುಹುಟ್ಟುಕೊಟ್ಟಿದ್ದರು. ಅದಕ್ಕೆ ಪ್ರೀತಿಯಿಂದ ಭೀಮ ಎಂದು ಮರುನಾಮಕರಣ ಮಾಡಿದ್ದರು.
ತಾವು ಎಲ್ಲೇ ಟ್ರಾನ್ಸ್ ಫರ್ ಆಗಿದ್ರೂ ಕರುವನ್ನ ತಮ್ಮ ಜತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದ ಸರಳ ವ್ಯಕ್ತಿತ್ವ ಅವರದ್ದಾಗಿತ್ತು.
ಒಬ್ಬ ತಾಯಿ ಹೇಗೆ ಮಗುವನ್ನ ರಕ್ಷಣೆ ಮಾಡಿ, ಪೋಷಣೆ ಮಾಡುತ್ತಿದಳೋ ಅದೇ ರೀತಿ ಕರುವನ್ನ ಪೋಷಣೆ ಮಾಡುತ್ತಿದ್ದರು. ಅದೇ ರೀತಿ ಝೀ ಕನ್ನಡ ವಾಹಿನಿಯ ಸರಿಗಮಪದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸುಬ್ರಹ್ಮಣಿ ಜೊತೆ ಭಾಗವಹಿಸಿದ್ದರು..,