ಬೆಂಗಳೂರು,(www.thenewzmirror.com):
ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ತರುವ ಇಲಾಖೆಯಲ್ಲಿ ಸಾರಿಗೆ ಇಲಾಖೆ ಮೊದಲ ಸ್ಥಾನದಲ್ಲಿ ನಿಲ್ಲುತ್ತೆ. ಇಂಥ ಸಾವಿರಾರು ಕೋಟಿ ಆದಾಯ ಬರುವ ಇಲಾಖೆಯಲ್ಲಿ ಭ್ರಷ್ಟರಿಗೆ ರಾಜ್ಯಾಥಿತ್ಯ ನೀಡಲಾಗುತ್ತಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ. ಇದಕ್ಕೆ ಇಲಾಖೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಆದೇಶಗಳು ಇದಕ್ಕೆ ಇಂಬು ನೀಡುತ್ತಿವೆ.
ಅಷ್ಟಕ್ಕೂ ಈ ಆರೋಪ ಮಾಡುತ್ತಿರುವುದಕ್ಕೂ ಒಂದು ಕಾರಣವಿದೆ. ಇತ್ತೀಚೆಗೆ ನಿಮ್ಮ ನ್ಯೂಝ್ ಮಿರರ್ ಸಾರಿಗೆ ಇಲಾಖೆಯಲ್ಲಿದ್ದಾರಾ ಇಂಥ ಭ್ರಷ್ಟ ಅಧಿಕಾರಿ..?( https://thenewzmirror.com/?p=2181 )
ಎನ್ನುವ ಶೀರ್ಷಿಕೆಯಡಿ ಲೇಖವನ್ನ ಪ್ರಕಟಿಸಿತ್ತು. ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಚೇರಿಯಲ್ಲಿ ಕೆಲ್ಸ ಮಾಡುತ್ತಿದ್ದ ಎ ಆರ್ ಟಿಓ ಜಿ.ಪಿ. ಕೃಷ್ಣಾನಂದ ನಿಯಮ ಮೀರಿ ಡಿಎಲ್ ನೀಡಿದ್ದಾರೆ ಅನ್ನೋ ಆರೋಪದಡಿ ಸಾರಿಗೆ ಇಲಾಖೆ ಆಯುಕ್ತ ಎಸ್. ಎನ್. ಸಿದ್ದರಾಮಪ್ಪ ಅಮಾನತು ಮಾಡಿ ಬೇರೆಗೆ ವರ್ಗಾವಣೆ ಮಾಡಿದ್ದರು.
ಕರ್ತವ್ಯದಲ್ಲಿ ನಿರ್ಲಕ್ಷತೆ ತೋರಿದ್ದರ ಆರೋಪ ಹೊರಿಸಿ ಧಾರವಾಡ (ಪಶ್ಚಿಮ) ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ ವರ್ಗಾವಣೆ ಮಾಡಿದ್ದರು. ಇದನ್ನ ಪ್ರಶ್ನೆ ಮಾಡಿ ಕೆಎಟಿ ಮೆಟ್ಟಿಲೇರಿದ್ದ ಕೃಷ್ಣಾನಂದ ಆಯುಕ್ತರ ಆದೇಶಕ್ಕೆ ಸೆಡ್ಡು ಹೊಡೆಯೋ ಕೆಲಸ ಮಾಡಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.
ಕೆಎಟಿಯಲ್ಲಿ ತಮ್ಮ ಪರವಾದ ಆದೇಶ ಬಂದಿದ್ದರ ಹಿನ್ನಲೆಯಲ್ಲಿ ಅತ್ತ ವರ್ಗಾವಣೆಗೊಂಡ ಸ್ಥಳಕ್ಕೂ ನಿಯುಕ್ತಿಗೊಳ್ಳದೆ ಬೆಂಗಳೂರಿನಲ್ಲೇ ಗಿರಕಿಹೊಡೆಯುತ್ತಿದ್ದ ಕೃಷ್ಣಾನಂದ ತಾವು ಅಂದುಕೊಂಡಿದ್ದನ್ನ ಕೊನೆಗೂ ಸಾಧಿಸಿದ್ದಾರೆ. ಇಲಾಖೆಯಲ್ಲಿರುವ ಒಂದಷ್ಟು ಲೀಡರ್ ಗಳನ್ನ ಹಿಡಿದುಕೊಂಡು ಬೆಂಗಳೂರಿನ ಜ್ಞಾನ ಭಾರತಿ ಕಚೇರಿಯಲ್ಲಿ ಹಾಲಿ ಒಬ್ಬ ಎಆರ್ ಟಿಓ ಇದ್ದರೂ ಅದೇ ಕಚೇರಿಗೆ ಎಆರ್ ಟಿಓ ಆಗಿ ವರ್ಗಾವಣೆ ಮಾಡಿಸಿಕೊಳ್ಳುವಲ್ಲಿ ಕೃಷ್ಣಾನಂದ ಯಶಸ್ವಿಯಾಗಿದ್ದಾರೆ.
ಆದರೆಕೃಷ್ಣಾನಂದ ನಡೆ ಇದೀಗ ಇಲಾಖೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಕೇವಲ ಮೂರೇ ದಿನದಲ್ಲಿ 2504 ಡಿಎಲ್ ಗಳನ್ನ ನೀಡಿದ್ದ ಕೃಷ್ಣಾನಂದ ಫಲಾನುಭವಿಗಳಿಂದ ಲಂಚ ಪಡೆದಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಇಂಥ ಭ್ರಷ್ಟ ಅಧಿಕಾರಿಯ ಒತ್ತಡಕ್ಕೆ ಆಯುಕ್ತರು ಮಣಿದ್ರಾ ಇಲ್ಲ ತಾನು ನಂಬಿದ್ದ ಸೋ ಕಾಲ್ಡ್ ಇಲಾಖೆಯಲ್ಲಿರುವ ಲೀಡರ್ ಗಳು ಕಪ್ಪ ಕಾಣಿಕೆ ಪಡೆದು ಕೃಷ್ಣಾನಂದ ಪರವಾಗಿ ನಿಂತ್ರಾ ಎನ್ನುವ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಕೆಎಟಿ ಆದೇಶ ಬರುತ್ತಿದ್ದಂತೆ ಸಂಭ್ರಮಿಸಿದ್ದ ಕೃಷ್ಣಾನಂದ
ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಚೇರಿಯಲ್ಲಿ ಕೆಲ್ಸ ಮಾಡುತ್ತಿದ್ದಾಗ ಮೂರೇ ದಿನದಲ್ಲಿ 2504 ಡಿಎಲ್ ಮಾಡಿದ್ದಕ್ಕೆ ಅಮಾನತ್ತಾಗಿದ್ದ ಕೃಷ್ಣಾನಂದ ಅಮಾನತ್ತಾದ ದಿನವೇ ತಮ್ಮನ್ನ ನಂಬಿದ್ದ ಇಲಾಖೆಯ ಲೀಡರ್ ಜತೆ ಸೇರಿಕೊಂಡು ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ರು. ಆಯುಕ್ತರ ಆದೇಶದ ವಿರುದ್ಧ ಸೆಟೆದು ನಿಲ್ಲುವಲ್ಲಿ ಸೋ ಕಾಲ್ಡ್ ಲೀಡರ್ ಸಹಾಯ ಮಾಡಿದ್ದೂ ಇದೀಗ ರಹಸ್ಯವಾಗಿ ಉಳಿದಿಲ್ಲ. ತಮ್ಮ ಅಮಾನತು ಆದೇಶ ಆಗಿ ಎರಡು ದಿನದ ಒಳಗೇ ಕೆಎಟಿಯಲ್ಲಿ ತಮ್ಮ ಪರವಾಗಿ ಆದೇಶ ಬರುತ್ತಿದ್ದಂತೆ ಎಲೆಕ್ಟ್ರಾನಿಕ್ ಸಿಟಿ ಕಚೇರಿಯಲ್ಲಿ ತಮ್ಮ ಛೇಲಾಗಳ ಜತೆ ಸೇರಿಕೊಂಡು ಕೃಷ್ಣಾನಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ರಂತೆ. ಪಟಾಕಿ ಸಿಡಿಸಿ ಸಂತಸಪಟ್ಟಿದ್ರಂತೆ.
ಇಲಾಖೆಯಲ್ಲಿ ಕೃಷ್ಣಾನಂದನೇ ಬಾಸ್….!
ಹೆಸರಿಗೆ ಕೃಷ್ಣಾನಂದ ಎಆರ್ ಟಿಓ ಆದರೆ ಇಲಾಖೆಯಲ್ಲಿ ಈತನೇ ಬಾಸ್ ರೀತಿ ನಡೆದುಕೊಳ್ತಿದ್ದಾರಂತೆ.., ಇಲಾಖೆಯಲ್ಲಿ ಕೆಲಸ ಮಾಡುತ್ತಿರೋ ಯಾವುದೇ ಅಧಿಕಾರಿಗೆ ಸಮಸ್ಯೆ ಆದರೆ ಈತನೇ ಅದನ್ನ ಬಗೆಹರಿಸುತ್ತಾನಂತೆ.., ಜತೆಗೆ ಪ್ರತಿ ತಿಂಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯವಿರುವುದನ್ನ ಪೂರೈಕೆ ಮಾಡುವ ಜವಾಬ್ದಾರಿಯನ್ನೂ ಇವರು ಹೊತ್ತಿದ್ದಾರೆ ಅನ್ನುವ ಮಾತುಗಳು ಇಲಾಖೆಯಲ್ಲಿ ಗುಸು ಗುಸು ಚರ್ಚೆ ನಡೆಯುತ್ತಿದೆ.
ಕೆಲವು ಕಡೆ ಎಆರ್ ಟಿಓನೇ ಇಲ್ಲ ಆದರೆ ಇಲ್ಲಿ ಮಾತ್ರ ಇಬ್ಬಿಬ್ಬರು
2023 ರ ಫೆಬ್ರವರಿ 17 ರಂದು ಸಾರಿಗೆ ಇಲಾಖೆ ಆಯುಕ್ತರು ಕೃಷ್ಣಾನಂದರನ್ನ ಜ್ಞಾನಭಾರತಿ ಸಾರಿಗೆ ಕಚೇರಿಗೆ ಎಆರ್ ಟಿಓ ಆಗಿ ಮರು ವರ್ಗಾವಣೆ ಮಾಡಿದ್ದಾರೆ. ಆದರೆ ಈ ಕಚೇರಿಯಲ್ಲಿ ಈಗಾಗಲೇ ರಾಜಣ್ಣ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ಇಬ್ಬಿಬ್ಬರು ಎಆರ್ ಟಿಓ ಇರಬಾರದು ಎಂದೇನಿಲ್ಲ. ಈ ಹಿಂದೆಯೂ ಒಂದೊಂದು ಆರ್ ಟಿಓ ಕಚೇರಿಯಲ್ಲಿ ಇಬ್ಬಿಬ್ಬರು ಎಆರ್ ಟಿಓಗಳು ಕೆಲಸ ಮಾಡಿದ ಉದಾಹಣೆಗಳೂ ಉಂಟು. ಆದ್ರೆ ರಾಜ್ಯ ಬಹುತೇಕ ಆರ್ ಟಿಓ ಕಚೇರಿಗಳಲ್ಲಿ ಎಆರ್ಟಿಓ ನೇ ಇಲ್ಲ. ಇದ್ರಿಂದ ಆ ಭಾಗದ ಸಾರ್ವಜನಿಕ್ರು ನಿಗಧಿತ ಸಮಯಕ್ಕೆ ಕೆಲಸಗಳು ಆಗದೇ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಬೆಂಗಳೂರಿನ ಮೇಲೆ ಇನ್ನಿಲ್ಲದ ಪ್ರೀತಿ ಇಟ್ಟುಕೊಂಡಿದ್ದ ಕೃಷ್ಣಾನಂದ ಮತ್ತೆ ಬೆಂಗಳೂರಿಗೆ ಮರು ವರ್ಗಾವಣೆ ಆಗಿರೋದು ಸಾಕಷ್ಟು ಅನುಮಾನ ಹುಟ್ಟಿಸುತ್ತಿದೆ.