ಬೆಂಗಳೂರು,(www.thenewzmirror.com):
ರಾಜ್ಯದಲ್ಲಿ ಬಲವಂತದ ಮತಾಂತರ ಪ್ರಕರಣಗಳು ಹೆಚ್ಚಾಗ್ತಿದ್ದು, ಇದರ ನಿಷೇಧಕ್ಕೆ ಸರ್ಕಾರ ಕಠಿಣ ಕಾನೂನು ಜಾರಿಗೆ ಚಿಂತನೆ ನಡೆಸಿದೆ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ಈ ಕುರಿತ ಕಾಯ್ದೆ ಜಾರಿಗೆ ತರೋಕೆ ಸರ್ಕಾರ ಮುಂದಾಗಿದೆ.
ಮತಾಂತರ ನಿಷೇಧ ಮಸೂದೆ ಯಾವುದೇ ಧರ್ಮದ ವಿರುದ್ಧವಿಲ್ಲ. ಕಾಯ್ದೆ ಕುರಿತು ಯಾವುದೇ ಸಮುದಾಯ ಆತಂಕ ಪಡುವ ಅಗತ್ಯವಿಲ್ಲ ಅಂತ ಸರ್ಕಾರ ಪದೇ ಪದೇ ಸ್ಪಷ್ಟಪಡಿಸ್ತಾ ಇದೆ.
ಹಾಗಿದ್ರೆ ಮತಾಂತರ ನಿಷೇಧ ಕಾಯ್ದೆಯಲ್ಲಿ ಏನೇನಿದೆ ಅನ್ನೋದನ್ನ ನೋಡೋದಾದರೆ..,
- ಬಲವಂತದ ಮತಾಂತರಕ್ಕೆ 10 ವರ್ಷ ಜೈಲು ಶಿಕ್ಷೆ
- ಆಮಿಷ ಅಥವಾ ವಂಚಿಸಿ ಮತಾಂತರ ಮಾಡಿದ್ರೆ ಜೈಲು
- ಆಮಿಷವೊಡ್ಡಿ ಮತಾಂತರ ಮಾಡಿದ್ರೆ 1ರಿಂದ 5 ವರ್ಷ ಜೈಲು
- ಬಲವಂತದ ಮತಾಂತರಕ್ಕೆ ದಂಡ ವಿಧಿಸಲು ಪ್ರಸ್ತಾಪ
- ಇಂತಹ ಕೃತ್ಯ ಎಸಗುವ ವ್ಯಕ್ತಿಗೆ ಜಾಮೀನು ನಿರಾಕರಣೆ
- ಯಾವುದೇ ವ್ಯಕ್ತಿ ಮತಾಂತರಗೊಳ್ಳುವ ಮೊದಲೇ ತಿಳಿಸಬೇಕು
- ಡಿಸಿ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ನೋಟಿಸ್ ನೀಡಬೇಕು
- ಕೇವಲ ಮದುವೆ ಉದ್ದೇಶದಿಂದ ನಡೆದ ಮತಾಂತರ ಅಸಿಂಧು
- ಸರ್ಕಾರ ನಿಗದಿ ಪಡಿಸಿದ ಕಾನೂನಿನ ಪ್ರಕಾರವೇ ಮತಾಂತರ