ಬೆಂಗಳೂರು,(www.thenewzmirror.com):
ಸದ್ಯ ಬೆಂಗಳೂರಿನಲ್ಲಿ ಹೋಮ್ ಐಸೋಲೇಷನ್ ನಲ್ಲಿ ಹೆಚ್ಚಿನ ಜನರು ಗುಣಮುಖರಾಗ್ತಿದ್ದಾರೆ.., ಕರೋನಾ ಸೋಂಕು ಹೆಚ್ಚಿದ್ದರೂ ಕಡಿಮೆ ಪ್ರಮಾಣದಲ್ಲಿ ಆಸ್ಪತ್ರೆ ದಾಖಲಾತಿ ಆಗ್ತಿದೆ. ಇದ್ರಿಂದ ಕೋವಿಡ್ ಕೇರ್ ಸೆಂಟರ್ ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಪಾಲಿಕೆ ಚಿಂತನೆ ನಡೆಸಿದೆ..,
ಹಜ್ ಭವನ, HAL, ಕಾರ್ಮಿಕರ ಭವನ, ಸರ್ಕಾರಿ ಆಯುರ್ವೇದ ಕಾಲೇಜು ಸೇರಿದಂತೆ ಕೇವಲ ನಾಲ್ಕು CCCಗಳು ಮಾತ್ರ ಬಳಕೆ ಮಾಡಿಕೊಳ್ತಿದ್ದು, ಉಳಿದಂತೆ 24 ಕೋವಿಡ್ ಕೇರ್ ಸೆಂಟರ್ ಗಳಲ್ಲೂ ಜನರಿಲ್ಲಿದೆ ಖಾಲಿ ಖಾಲಿ ಇವೆ. ಮೂರನೇ ಪೂರ್ವ ಸಿದ್ಧತೆಯೆಂದು ನಗರದ 28 ವಿಧಾನಸಭಾ ಕ್ಷೇತ್ರದಲ್ಲೂ ಕೇರ್ ಸೆಂಟರ್ ಓಪನ್ ಮಾಡಿತ್ತು ಪಾಲಿಕೆ.
ಇದೀಗ ಸೋಂಕಿನ ಹೊಡೆತ ಕಡಿಮೆ ಇರುವ ಹಿನ್ನಲೆ ಬೆಡ್ ಬಳಕೆ ಕಡಿಮೆಯಾಗುತ್ತಿದೆ. ಹಾಗೆನೇ ಸಿಸಿಸಿಗಳ ನಿರ್ವಹಣೆಗೆ ಅಂತ ಪ್ರತಿ ಕೋವಿಡ್ ಕೇರ್ ಸೆಂಟರ್ ನಲ್ಲಿ 50 ಬೆಡ್ ಗೆ ಒಬ್ಬ ವೈದ್ಯ, ಇಬ್ಬರು ನರ್ಸ್ ನಿಯೋಜನೆ ಮಾಡಲಾಗಿತ್ತು.., ನಿಗಾ ಘಟಕದಲ್ಲಿ 25 ಬೆಡ್ ಗಳಿಗೆ ಓರ್ವ ವೈದ್ಯ, ಇಬ್ಬರು ಸಿಬ್ಬಂದಿಗಳ ನೇಮಕ ಮಾಡಿತ್ತು ಬಿಬಿಎಂಪಿ.
ಸೋಂಕಿತರು ಆಸ್ಪತ್ರೆ ಸೇರೋದೇ ಇರೋದ್ರಿಂದ CCC ಗಳಿಂದ ಆರ್ಥಿಕ ಹೊರೆ ಆಗ್ತಿದೆ ಅನ್ನೋದನ್ನಸ್ವತಃ ಬಿಬಿಎಂಪಿ ಒಪ್ಪಿಕೊಂಡಿದೆ.., ಹೀಗಾಗಿ ಸಿಸಿಸಿಗೆ ನಿಯೋಜನೆ ಮಾಡಿರೋ ಸಿಬ್ಬಂದಿ ಖಡಿತಕ್ಕೂ ಬಿಬಿಎಂಪಿ ಮುಂದಾಗಿದೆಯಂತೆ..,
28 ವಿಧಾನಸಭಾ ಕ್ಷೇತ್ರದಲ್ಲಿರುವ ಕೇರ್ ಸೆಂಟರ್ ತಾತ್ಕಾಲಿಕವಾಗಿ ಮುಚ್ಚಿ ವಲಯವಾರು ಕೇರ್ ಸೆಂಟರ್ ತೆರೆಯುವ ಆಲೋಚನೆ ನಡೆಸಿದೆ..,