ಬೆಂಗಳೂರು, (www.thenewzmirror.com):
ಈ ಹಿಂದೆ ಹಲ್ಲೆ ವಿಚಾರದಲ್ಲಿ ತಮ್ಮ ಹೆಸರನ್ನ ಕೆಡಿಸಿಕೊಂಡು ಆನಂತ್ರ ಉತ್ತಮ ನಾಯಕನಾಗಲು ಪರದಾಡ್ತಿರೋ ಶಾಸಕ ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ..,
ರಾಜ್ಯ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮತ್ತೊಂದು ಗಲಾಟೆ ಪ್ರಕರಣದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.., ಬೆಂಗಳೂರು ಹೊರವಲಯದ ರೆಸಾರ್ಟ್ ವೊಂದರಲ್ಲಿ ಮೊಹಮ್ಮದ್ ನಲಪಾಡ್, ಬೆಂಬಲಿಗರು ಮತ್ತು ಬಳ್ಳಾರಿ ಗ್ರಾಮೀಣ ಯುವಕಾಂಗ್ರೆಸ್ ಅಧ್ಯಕ್ಷ ಸಿದ್ಧು ಹಳ್ಳೇಗೌಡ ಅವರ ಬೆಂಬಲಿಗರ ನಡುವೆ ಗಲಾಟೆ ನಡೆದಿದೆಯಂತೆ ಈ ವೇಳೆ ಸಿದ್ಧು ಹಳ್ಳೆಗೌಡ ಮತ್ತು ಬೆಂಬಲಿಗರ ಮೇಲೆ ನಲಪಾಡ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನುವ ಸುದ್ದಿ ಕೇಳಿ ಬರ್ತಿದೆ.
ಖಾಸಗಿ ಹೊಟೇಲ್ ನಲ್ಲಿ Get Togetherನ ಪೂರ್ವಭಾವಿ ಸಭೆಯಲ್ಲಿ ನಲಪಾಡ್, ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ..,
ಇನ್ನು ಈ ಬಗ್ಗೆ ನಲಪಾಡ್ ಪ್ರತಿಕ್ರಿಯೆ ನೀಡಿದ್ದು ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ನಾನು ನನ್ನ ಕುಟುಂಬದೊಂದಿಗೆ ಇದ್ದೆ, ಇದಕ್ಕಾಗಿ ನಾನು ಹೇಗೆ ಹಲ್ಲೆ ಮಾಡಲು ಸಾಧ್ಯ? ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಕಾರಣಕ್ಕೆ ನನ್ನ ವರ್ಚಸ್ಸು ಹಾಳು ಮಾಡುವ ಷಡ್ಯಂತ್ರ ಇದಾಗಿದೆ ಅಂತ ಆರೋಪಿಸಿದ್ದಾರೆ.
ಹಾಗೆನೇ ಘಟನೆ ಕುರಿತಂತೆ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನನ್ನ ಮೇಲೆ ಯಾವುದೇ ಹಲ್ಲೆಯಾಗಿಲ್ಲ ಎಂದು ತಿಳಿಸಿದ್ದಾರೆ.., ನನ್ನ ಮೇಲೆ ಯಾರೂ ಹಲ್ಲೆ ಮಾಡಿಲ್ಲ. ಇದೆಲ್ಲ ಸತ್ಯಕ್ಕೂ ದೂರವಾದದ್ದು, ಅಂದು ನಾನು jw ಮ್ಯಾರೇಟ್ ಹೋಟೆಲ್ ಹೋಗಿದ್ದು ನಿಜ, ಅಲ್ಲಿ ಪೂರ್ವಭಾವಿ ಸಭೆ ಮುಗಿಸಿಕೊಂಡು ಹೊರಟೆ. ಆದರೆ ಆನಂತರ ನಲಪಾಡ್ ಕಡೆಯವರು ನನಗೆ ಬೆದರಿಕೆ ಯಾವುದೇ ಹಾಕಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಯಾಕೆ ಈ ರೀತಿ ಸುದ್ದಿ ಹಬ್ಬಿದೆಯೋ ಗೊತ್ತಿಲ್ಲ. ಅಂತ ಸ್ಪಷ್ಟನೆ ನೀಡಿದ್ದಾರೆ.