ಮನಸೆಲ್ಲಾ ನೀನೇ – ಆಲ್ಬಂ ಹಾಡು ಬಿಡುಗಡೆ

ಬೆಂಗಳೂರು, (www.thenewzmirror.com):

ಜಗತ್ತು  ಡಿಜಿಟಲ್ ಯುಗಕ್ಕೆ ತನ್ನನ್ನು ತಾನು ಒಗ್ಗಿಕೊಳ್ಳುತ್ತಿದ್ದಂತೆ  ಜಗತ್ತಿನ ವಿದ್ಯಾಮಾನ ಬೆರಳ ತುದಿಗೆ ಬಂದು ನಿಂತಿದೆ. ಹೀಗಾಗಿ ಸಾಮಾಜಿಕ ಜಾಲ ತಾಣ ಮತ್ತು ವೆಬ್ ದುನಿಯಾದೇ ಹವಾ.

RELATED POSTS

ಈಗಿನ ಆಧುನಿಕ ಕಾಲಕ್ಕೆ ತಕ್ಕಂತೆ ಹೊಸ ಪ್ರಯೋಗಗಳಿಗೆ ಒಗ್ಗಿಕೊಳ್ಳಲು “ಎ2 ಒರಿಜಿನಲ್ಸ್” ಹೊಸ ಪ್ರಯೋಗಕ್ಕೆ ಮುಂದಾಗಿದೆ. ಹೊಸ ಆಡಿಯೋ ವೀಡಿಯೋ ದೃಶ್ಯವೈಭವಗಳು ಜನರನ್ನು ತಲುಪುತ್ತಿರುವ ಕಾಲಘಟ್ಟದಲ್ಲಿ “ಎ2 ಒರಿಜಿನಲ್ಸ್” ಸಂಸ್ಥೆ ಅದಕ್ಕೆಲ್ಲ ಭಿನ್ನ ಎನ್ನುವಂತೆ ಹೊಸ ಆಡಿಯೋ ಆಲ್ಬಂ ಹೊರತಂದಿದೆ.

“ಎ2 ಸಂಸ್ಥೆ” ನಿರ್ಮಾಣ ಮಾಡಿರುವ ಮನಸೆಲ್ಲಾ ನೀನೇ ಎಂಬ ಆಲ್ಬಂ ಹಾಡಿನ ದೃಶ್ಯ ವೈಭವ ಎ2 ಒರಿಜಿನಲ್ಸ್ ನಲ್ಲಿ ಮಾರ್ಚ್ 31 ರಂದು ಲೋಕಾರ್ಪಣೆಯಾಯಿತು.

ಆಡಿಯೋ ವಿಡಿಯೋ ಆಲ್ಬಂ ಅನ್ನು ಯುವ ಪ್ರತಿಭೆ ವಿಸ್ಮಯ ಜಗ ನಿರ್ದೇಶನದ ಜೊತೆಗೆ, ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಆಲ್ಬಂನ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಪೂರ್ತಿ ವೀಡಿಯೋ ಎ2 ಎಂಟರ್ ಟೈನ್ ಮೆಂಟ್ ಯುಟ್ಯೂಬ್ ಚಾನಲ್ ಬಿಡುಗಡೆಯಾಗಿದ್ದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ ಎನ್ನುತ್ತಾರೆ ಎ2 ಒರಿಜಿನಲ್ಸ್ ಎಕ್ಸಿಕ್ಯೂಟಿವ್ ನ ಪ್ರವೀಣ್‌ ಟಿ ಪಿ.

ಮನಸೆಲ್ಲಾ ನೀನೇ ಆಡಿಯೋ ಆಲ್ಬಂನಲ್ಲಿ ಧನುಷ್ ಹಾಗೂ ರೋಷಿಣಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ.  ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದರು. ನಟನೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ.

ಪ್ರತೀ ಫ್ರೇಮ್ ನಲ್ಲೂ ಸಾಕಷ್ಟು ಸ್ಕೋರ್ ಮಾಡಿದ್ದಾರೆ. ವಿಶೇಷ ಪಾತ್ರದಲ್ಲಿ ಪುಟಾಣಿ ಧ್ರುತಿ ಕಾಣಿಸಿಕೊಂಡಿದ್ದು, ಆ ಪಾತ್ರ ಯಾವುದು ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ಆಲ್ಬಂ ಗೀತೆಯನ್ನು ಸತ್ಯ ರಾಧಾಕೃಷ್ಣ ಸುಮಧುರವಾಗಿ ಹಾಡಿದ್ದಾರೆ.  ಸತೀಶ್ ರಾಜೇಂದ್ರ ಛಾಯಾಗ್ರಹಣ, ರಿಯಾಸ್ ಸಂಕಲನವಿದೆ. 

ಎ2 ಒರಿಜಿನಲ್ಸ್ ನಿಂದ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಪ್ರಯತ್ನಕ್ಕೆ ಸಂಸ್ಥೆ ಮುಂದಾಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ವಾಣಿ ಪ್ರಸಾದ್‌ ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist