
ಬೆಂಗಳೂರು, (www.thenewzmirror.com) :
ಬೆಂಗಳೂರಲ್ಲಿ ಹೈ ರೇಸ್ ಬಿಲ್ಡಿಂಗ್ ಓನರ್ಸ್ ನೋಡ್ಲೇಬೇಕಾದ ಸ್ಟೋರಿ ಇದು. ಯಾಕಂದ್ರೆ ನಗರದಲ್ಲಿ ಅಂತಸ್ತಿನ ಮೇಲೆ ಅಂತಸ್ತಿನ ಮನೆ ಕಟ್ಟಿಕೊಂಡವರು ಹಾಗೂ ಅಂತಹ ಮನೆಗಳಲ್ಲಿ ವಾಸವಿರುವವರಿಗೆ ಬಿಬಿಎಂಪಿ ಶಾಕ್ ನೀಡ್ತಾಯಿದೆ. ನಿಯಮ ಮೀರಿ ಬಿಲ್ಡಿಂಗ್ ಕಟ್ಟಿದ್ರೆ ಅಂತಹ ಬಿಲ್ಡಿಂಗ್ ನೆಲಸಮ ಮಾಡೋದಕ್ಕೆ ಪಾಲಿಕೆ ನಿರ್ಧರಿಸಿದೆ..
ನಗರದಲ್ಲಿ ಇತ್ತಿಚೆಗೆ ಮನೆ ಕುಸಿತ, ಗೋಡೆ ವಾಲುವಂತಹ ಪ್ರಕರಣಗಳು ಹೆಚ್ಚಾಗ್ತಾಯಿವೆ. ಹೀಗಾಗಿ ಬಿಬಿಎಂಪಿ ನಗರದಲ್ಲಿರುವ ಕಟ್ಟಡಗಳ ಸರ್ವೆಗೆ ಮುಂದಾಗಿದೆ. ಕೇವಲ ಹಳೆಯ ಕಟ್ಟಡಗಳಲ್ಲದೇ ಹೊಸದಾಗಿ ನಿರ್ಮಾಣವಾಗಿರುವ ಕಟ್ಟಡಗಳು ಕೂಡ ಕುಸಿಯುವ ಹಂತದಲ್ಲಿದ್ದು ಕಳಪೆ ಕಾಮಗಾರಿ ಹಾಗೂ ನಿಯಮ ಉಲ್ಲಂಘನೆ ಕಾರಣಗಳು ಎದ್ದು ಕಾಣುತ್ತಿದೆ.
ಹೀಗಾಗಿ ಅಕ್ರಮ ಬಿಲ್ಡಿಂಗ್ ಗಳನ್ನ ತೆರವುಗೊಳಿಸುವ ಉದ್ದೇಶದಿಂದ ಕಟ್ಟಡಗಳ ಸರ್ವೆ ಆರಂಭಿಸ್ತಾಯಿರುವ ಬಿಬಿಎಂಪಿ ಅಕ್ರಮವಾಗಿ ಕಟ್ಟಿರುವ 4 ಅಂತಸ್ತಿಗಿಂತ ಹೆಚ್ಚಿನ ಹೈ ರೇಝ್ ಬಿಲ್ಡಿಂಗ್ ಪಟ್ಟಿಯನ್ನು ತಯಾರಿಸೋದಕ್ಕೆ ಮುಂದಾಗಿದೆ. ಹೀಗಾಗಿ ಅಕ್ರಮವಾಗಿ ಕಟ್ಟಿರುವ ಗಗನಚುಂಬಿ ಬಿಲ್ಡಿಂಗ್ ಮಾಲಿಕರಿಗೆ ನಡುಕ ಶುರುವಾಗಿದೆ. ಬಿಲ್ಡಿಂಗ್ ಸರ್ವೆಗೆ ಈಗಾಗಲೇ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದ್ದು ಸರ್ವೆಯ ಪ್ರಾಥಮಿಕ ವರದಿ ಪಾಲಿಕೆ ಕೈಸೇರಿದೆ.
ಈಗಾಗಲೇ ಅನಧಿಕೃತ ಕಟ್ಟಡಗಳ ಸರ್ವೆ ನಡೀತಾ ಇದ್ದು, ಅನಧಿಕೃತ ಕಟ್ಟಡ ಕಂಡುಬಂದ್ರೆ ಅಂತಹವರಿಗೆ ಮೊದಲು ನೊಟೀಸ್ ಕೊಡ್ತೀವಿ, ನೊಟೀಸ್ ಕೊಟ್ಟು ಅವ್ರಿಗೆ ಖಾಲಿ ಮಾಡಲು ಸೂಚನೆ ಕೊಡ್ತೀವಿ. ತುಂಬಾ ಶಿಥಿಲಾವಸ್ಥೆ ಕಂಡು ಬಂದರೆ ತಕ್ಷಣವೇ ಖಾಲಿ ಮಾಡಿಸಿ ಡೆಮಾಲಿಷನ್ ಮಾಡ್ತೀವಿ, ಅನಧಿಕೃತ ಕಟ್ಟಡಗಳು ಕಂಡು ಬಂದರೆ ಮುಲಾಜಿಲ್ಲದೆ ಡೆಮಾಲಿಷನ್ ಮಾಡ್ತಿವಿ. ಡೆಮಾಲಿಷನ್ ಸಮಯದಲ್ಲಿ ಒಂದು ವೇಳೆ ರಾಜಕೀಯ ಒತ್ತಡ ಬಂದ್ರೂ ಕೂಡ ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ, ಮುಲಾಜಿಲ್ಲದೇ ತೆರವು ಮಾಡ್ತಿವಿ ಎಂದಿದ್ದಾರೆ.
ಒಟ್ನಲ್ಲಿ ಪಾಲಿಕೆ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗಿದ್ದು , ಸರ್ವೆ ರಿಪೋರ್ಟ್ ಪಾಲಿಕೆ ಕೈಸೇರಿದ ಬಳಿಕ ಅಕ್ರಮ ಕಟ್ಟಡಗಳು ನೆಲಸಮವಾಗಲಿದೆ.