ಬೆಂಗಳೂರು: (www.thenewzmirror.com) :
ಮತದಾರರ ಮಾಹಿತಿ ಹೈಜಾಕ್ ಪ್ರಕರಣ ಇಡೀ ಬಿಬಿಎಂಪಿ ಅಧಿಕಾರಿಗಳಲ್ಲಿ ಆತಂಕ ಮನೆ ಮಾಡಿದೆ.., ಬಿಬಿಎಂಪಿ ಪಡಸಾಲೆಯಲ್ಲಿ ಯಾವ ಅಧಿಕಾರಿಗಳ ಬಾಯಲ್ಲಿ ಕೇಳಿದ್ರೂ ಇದೊಂದೇ ಸುದ್ದಿ ಅದರಲ್ಲೂ ಕಂದಾಯ ವಿಭಾಗದ ಅಧಿಕಾರಿಗಳ ನೆಮ್ಮದಿಯನ್ನೇ ಈ ಪ್ರಕರಣ ಹಾಳು ಮಾಡಿದೆ.
ಮತದಾರರ ಜಾಗೃತಿ ಮೂಡಿಸುವ ಜವಾಬ್ದಾರಿ ಹೊತ್ತಿದ್ದ ಚಿಲುಮೆ ಸಂಸ್ಥೆ ಮತದಾರರ ಮಾಹಿತಿಯನ್ನ ಹೈಜಾಕ್ ಮಾಡಿ ರಾಜಕೀಯ ಪಕ್ಷಗಳಿಗೆ ಮಾರಾಟ ಮಾಡ್ತಿದೆ ಎನ್ನುವ ಸುದ್ದಿ ರಾಜ್ಯದಲ್ಲಿ ಕಳೆದ 10 ದಿನಗಳಿಂದ ಸುದ್ದಿಯಲ್ಲಿದೆ.., ಸುದೀರ್ಘ ವಿಚಾರಣೆ ಬಳಿಕ ಕೇಂದ್ರ ಚುನಾವಣಾ ಆಯೋಗ ಇಬ್ಬರು ಐಎಎಸ್ ಅಧಿಕಾರಿಗಳನ್ನೂ ಸಸ್ಪೆಂಡ್ ಮಾಡಿದೆ.
![](https://thenewzmirror.com/wp-content/uploads/2022/11/IMG-20221126-WA0001-1024x819.jpg)
ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾಗಿದ್ದ ರಂಗಪ್ಪ, ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ತಲೆದಂಡ ಆಗುತ್ತಿದ್ದಂತೆ ಚಿಲುಮೆ ಜತೆಗೆ ಸಮನ್ವಯ ಹೊಂದಿದ್ದ ಕಂದಾಯ ವಿಭಾಗದ ಅಧಿಕಾರಿಗಳಿಗೆ ಇದೀಗ ನೆಮ್ಮದಿಯೇ ಇಲ್ಲದಂತಾಗಿದೆ..,
![](https://thenewzmirror.com/wp-content/uploads/2022/11/IMG-20221126-WA0003-625x1024.jpg)
ತನಿಖೆ ನೆಪದಲ್ಲಿ ದಿನ ಬೆಳಗಾದರೆ ಒಂದಲ್ಲಾ ಒಂದು ವಿಚಾರಣೆ ಅಂತ ಅಧಿಕಾರಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರಂತೆ.., ಇದರಿಂದಾಗಿ ದಿನನಿತ್ಯದ ಕೆಲಸ ಮಾಡೋದಿಕ್ಕೂ ಅಧಿಕಾರಿಗಳಿಗೆ ಆಗುತ್ತಿಲ್ಲ ಅನ್ನೋ ಅಳಲು ಬಿಬಿಎಂಪಿ ವ್ಯಾಪ್ತಿಯ ಕಂದಾಯ ವಿಭಾಗದ ಅಧಿಕಾರಿಗಳು ತೋಡಿಕೊಳ್ಳುತ್ತಿದ್ದಾರೆ..,
![](https://thenewzmirror.com/wp-content/uploads/2022/11/IMG-20221126-WA0002.jpg)
ಬಿಬಿಎಂಪಿ ಕಂದಾಯ ಸಿಬ್ಬಂದಿ ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಗೆ ವಾಟ್ಸಪ್ ನಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಕಳುಹಿಸಿರುವ ಮೆಸೆಜ್ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ವಿಚಾರಣೆ ನೆವದಲ್ಲಿ ಸಿಬ್ಬಂದಿಗೆ ಆಗುತ್ತಿರುವ ಕಿರುಕುಳ ಬಗ್ಗೆ ತೋಡಿಕೊಂಡಿರುವ ನೋವಿನ ಮೆಸೇಜ್ ಹೀಗಿದೆ.
ಕರೆ ಮಾಡುತ್ತಿರುವವರು ನಮ್ಮ ಮಾಹಿತಿ,ನಮ್ಮ ಕಚೇರಿ ಮಾಹಿತಿ,ಯಾರಿಗೆ ಯಾವಗೆಲ್ಲಾ ಕರೆ ಮಾಡಿದ್ದಿರಿ..ನಿತ್ಯದ ಕಾರ್ಯಚಟುವಟಿಕೆಯ ಮಾಹಿತಿಗಳನ್ನು ಕೇಳುತ್ತಿದ್ದಾರೆ.ಸ್ವಲ್ಪ ಟೈಮ್ ಕೊಡಿ ಸಾರ್ ಹೇಳ್ತಿವಿ ಎಂದ್ರೆ ಗದರಿಸುವುದು,ಹೆದರಿಸುವ ಕೆಲಸ ಮಾಡುತ್ತಿದ್ದಾರಂತೆ.ಕಳೆದ 10 ದಿನಗಳಿಂದ ಮಾನಸಿಕ ನೆಮ್ಮದಿಯನ್ನೇ ಕಳಕೊಂಡಿದ್ದೀವಿ.ತೆರಿಗೆ ಸಂಗ್ರಹದ ಟಾರ್ಗೆಟ್ ರೀಚ್ ಮಾಡಲಿಕ್ಕಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಡಾಟಾ ಎಂಟ್ರಿ ಆಪರೇಟರ್ಸ್,ಕಂದಾಯ ಸಿಬ್ಬಂದಿ,ಟಿಐ,ಆರ್ ಐ,ಎಆರ್ ಓ ಗಳು ಅಧ್ಯಕ್ಷ ಅಮೃತ್ ರಾಜ್ ಗೆ ಈ ಬಗ್ಗೆ ದೂರು ಕೂಡ ನೀಡಿದ್ದಾರೆ.ಮತದಾರರಲ್ಲಿ ಮತಜಾಗೃತಿ ಮೂಡಿಸುವ ಕೆಲಸದ ಭಾಗವಾಗಿ ನಮಗೆ ಕೆಲವು ಜವಾಬ್ದಾರಿ ವಹಿಸಲಾಗಿತ್ತು.ಅದನ್ನು ಮೇಲಾಧಿಕಾರಿಗಳ ಅಣತಿಯಂತೆ ಮಾಡಿ ಮುಗಿಸಿದ್ದೇವೆ.ರಜೆಯನ್ನೂ ಪರಿಗಣಿಸದೆ ಕೆಲಸ ಮಾಡಿಕೊಟ್ಟಿದ್ದೇವೆ. ಆದರೂ ನಮ್ಮನ್ನು ಮೇಲ್ಕಂಡ ಹಗರಣದಲ್ಲಿ ಸಿಲುಕಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ದಯವಿಟ್ಟು ನಮ್ಮನ್ನು ಈ ಜಾಲದಿಂದ ರಕ್ಷಿಸಬೇಕು. ಇಲ್ಲದಿದ್ದಲ್ಲಿ ಯಾರ ಸ್ಥಿತಿ ಏನಾಗುತ್ತೋ ಎನ್ನುವ ಅಂದಾಜು ನಮಗೆ ಗೊತ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.
ಚಿಲುಮೆ ಸಂಸ್ಥೆ ಪರವಾಗಿ ಯಾರು ಕೆಲಸ ಮಾಡಿದ್ದಾರೆ.., ಯಾರು ಮಾಡಿಲ್ಲ ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಪೊಲೀಸ್ ಹಾಗೂ ಚುನಾವನಾ ಆಯೋಗ ತಮ್ಮದೇ ಆಯಾಮದಲ್ಲಿ ವಿಚಾರಣೆ ನಡೆಸುತ್ತಿದೆ. ಅಂತಿಮವಾಗಿ ಆರೋಪಿಗಳು ಸಿಗುವ ವರೆಗೂ ಅಧಿಕಾರಿಗಳಿಗೆ ಕಿರಿಕಿರಿ ತಪ್ಪಿದ್ದಲ್ಲ..,