ಬೆಂಗಳೂರು,(www.thenewzmirror.com):
ಬಿಪಿನ್ ರಾವತ್ ದುರ್ಮರಣ ಕುರಿತ ಅಪಹಾಸ್ಯದಿಂದ ಬೇಸತ್ತು ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮ ಸೇರಲು ನಿರ್ಧಾರ ಮಾಡಿದ್ದೇನೆಂದು ಚಿತ್ರ ನಿರ್ಮಾಪಕ ತಿಳಿಸಿದ್ದಾರೆ.
ಇನ್ಮುಂದೆ ನಾನು ಹಾಗೂ ನನ್ನ ಪತ್ನಿ ಲೂಸಿಮ್ಮ ಮುಸ್ಲಿಮರಾಗಿ ಉಳಿಯುವುದಿಲ್ಲ ಬದಲಾಗಿ ಹಿಂದೂಧರ್ಮಕ್ಕೆ ಮತಾಂತರಗೊಳ್ಳುತ್ತೇವೆ ಎಂದು ಕೇರಳದ ರಾಜ್ಯದ ಚಿತ್ರ ನಿರ್ಮಾಪಕ ಅಲಿ ಅಕ್ವರ್ ತಿಳಿಸಿದ್ದಾರೆ. ಇತ್ತೀಚೆಗೆ ಅಕಾಲಿಕ ಸಾವಿಗೀಡಾದ ಸಿಡಿಎಸ್ ರಾವತ್ ಅವ್ರ ಸಾವಿಗೆ ಸಂಬಂಧಿಸಿದ ಪೋಸ್ಟ್‌ಗೆ ಅನೇಕ ಮುಸ್ಲಿಮರು ನಗುಮೊಗದಿಂದ ಪ್ರತಿಕ್ರಿಯಿಸಿದ್ದು ಸರಿಯಲ್ಲ.., ಇದ್ರಿಂದ ಬೇಸತ್ತು ತಾವು ಧರ್ಮ ತೊರೆಯುತ್ತೇವೆಂದು ಹೇಳಿದ್ದಾರೆ.
ಇಸ್ಲಾಂ ಧರ್ಮದ ಉನ್ನತ ನಾಯಕರು ಕೂಡ ದೇಶದ್ರೋಹಿಗಳ ಇಂತಹ ಕ್ರಮಗಳನ್ನು ವಿರೋಧಿಸಿಲ್ಲ ಎಂದು ಹೇಳಿರೋ ಅಕ್ಬರ್, ವೀರ ಸೇನಾಧಿಕಾರಿಯನ್ನ ಅವಮಾನಿಸಿದ್ದನ್ನ ಗಮನಿಸಿದರೆ ಧರ್ಮದ ಮೇಲಿನ ನಂಬಿಕೆಯನ್ನ ಕಳೆದುಕೊಂಡಿದ್ದೇನೆ ಎಂದು ಅವರು ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಇಂದು ನಾನು ಹುಟ್ಟಿನಿಂದ ಪಡೆದ ಉಡುಪನ್ನು ತೆಗೆಯುತ್ತಿದ್ದೇನೆ. ಇಂದಿನಿಂದ ನಾನು ಮುಸ್ಲಿಂ ಅಲ್ಲ. ನಾನು ಭಾರತಕ್ಕೆ ಸೇರಿದವನು. ಭಾರತದ ವಿರುದ್ಧ ಸಾವಿರಾರು ನಗುತ್ತಿರುವ ಎಮೋಜಿಗಳನ್ನು ಪೋಸ್ಟ್ ಮಾಡಿದವರಿಗೆ ಇದು ನನ್ನ ಉತ್ತರ ಎಂದು ಹೇಳಿದ್ದಾರೆ.
ಈ ಪೋಸ್ಟ್‌ಗೆ ಫೇಸ್‌ಬುಕ್‌ನಲ್ಲಿ ಮುಸ್ಲಿಂ ಬಳಕೆದಾರರಿಂದ ತೀವ್ರ ಟೀಕೆಗಳು ಬಂದಿವೆ ಮತ್ತು ಕೆಲವರು ನಿಂದನೀಯ ಭಾಷೆಯನ್ನು ಬಳಸಿದ್ದಾರೆ. ಆ ಕೆಲವು ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಲು ಅಕ್ಬರ್ ಅವಹೇಳನಕಾರಿ ಪದಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಅನೇಕ ಬಳಕೆದಾರರು ಅಕ್ಬರ್ ಅವರನ್ನು ಬೆಂಬಲಿಸಿದ್ದಾರೆ ಮತ್ತು ದೂರುವವರನ್ನು ಖಂಡಿಸಿದ್ದಾರೆ.