ಬೆಂಗಳೂರು, (www.thenewzmirror.com):
ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಸತತ ಮೂರು ಗಂಟೆಗಳ ಆತಂಕ ಮೂಡಿಸಿದ್ದ ಎರಡು ಸೂಟ್ ಕೇಸ್ ನಲ್ಲಿ ಬಾಂಬ್ ಅಲ್ಲ ಬಟ್ಟೆ ಇದೆ ಅನ್ನೋದು ಗೊತ್ತಾಗಿದೆ.
ಇಂದು ಮಧ್ಯಾಹ್ನ 12.45 ರ ಸುಮಾರಿಗೆ ರಾಜಶೇಖರ್ ಅವರಿಗೆ ಸೇರಿದ್ದ ಬೈಕ್ ಮೇಲೆ ಕಪ್ಪು ಬಣ್ಣದ ಸೂಟ್ ಕೇಸ್.., ಇದರಿಂದ 20 ಮೀಟರ್ ದೂರದಲ್ಲಿ ಕಂದು ಬಣ್ಣದ ಮತ್ತೊಂದು ಸೂಟ್ ಕೇಸ್ ಪತ್ತೆಯಾಗಿತ್ತು. ಸೂಟ್ ಕೇಸ್ ನ ಮಾಲೀಕರು ಯಾರು ಅನ್ನೋದು ಗೊತ್ತಿಲ್ಲದಿದ್ದರಿಂದ ಆತಂಕ ಮನೆ ಮಾಡಿತ್ತು. ಎಂದಿನಂತೆ ಬೆಳಗ್ಗೆ 10.30 ಕ್ಕೆ ಬೈಕ್ ಪಾರ್ಕ್ ಮಾಡಿದ್ದ ರಾಜಶೇಖರ್ ಅವರ ಬೈಕ್ ಮೇಲೆ ಯಾರೋ ಸೂಟ್ ಕೇಸ್ ಇಟ್ಟು ಹೋಗಿದ್ದರು. ಹಾಗೆನೇ ಮತ್ತೊಂದು ಸೂಟ್ ಕೇಸ್ ನ ಮಾಲೀಕರು ಯಾರೂ ಅನ್ನೋದೂ ಗೊತ್ತಾಗದಾಗ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು.
ನಿವಾಸಿಗಳ ಮಾಹಿತಿ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಶ್ವಾನ ದಳ ಹಾಗೂ ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳ ಒಂದು ಗಂಟೆ ತಪಾಸಣೆ ಬಳಿಕ ಅದನ್ನ ನಿರ್ಜಲ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸೂಟ್ ಕೇಸ್ ಗಳನ್ನ ಓಪನ್ ಮಾಡಿದಾಗ ಅದರಲ್ಲಿ ಬಟ್ಟೆಗಳಿರುವುದು ಪತ್ತೆಯಾಗಿದೆ.
ಯಾರೋ ಸೂಟ್ ಕೇಸ್ ಗಳನ್ನ ಮರೆತು ಬಿಟ್ಟು ಹೋಗಿದ್ದೇ ಇಷ್ಟೇಲ್ಲಾ ಅವಾಂತರಕ್ಕೆ ಕಾರಣವಾಗಿದೆ ಅನ್ನೋದು ತಡವಾಗಿ ಗೊತ್ತಾಗಿದೆ.