ಬೆಂಗಳೂರು, (www.thenewzmirror.com):
ದಿನಕಳೆದಂತೆ ರಾಜ್ಯದಲ್ಲಿ ಕರೋನಾ ಬ್ಲಾಸ್ಟ್ ಆಗ್ತಿದೆ.. ಒಮಿಕ್ರಾನ್ ನಾಗಲೋಟವನ್ನ ತಡೆಯಬೇಕು ಅಂತ ಸರ್ಕಾರ ಎಷ್ಟೇ ಯತ್ನಿಸಿದರೂ ಅದಕ್ಕೆ ಕಡಿವಾಣ ಹಾಕೋಕೆ ಸಾಧ್ಯವಾಗ್ತಿಲ್ಲ. ಈಗಾಗಲೇ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ರೂ ಸೋಂಕಿನ ಪ್ರಮಾಣ ಮಾತ್ರ ಕಡಿಮೆಯಾಗ್ತಿಲ್ಲ..,
ಇಂದು ಒಂದೇ ದಿನ ರಾಜ್ಯದ 8906 ಮಂದಿಯಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. ಒಂದೇ ದಿನ ಅಂದ್ರೆ ಕಳೆದ 24 ಗಂಟೆಯಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರು ವಿಚಾರಕ್ಕೆ ಬರೋದಾದ್ರೆ 7113 ಸೋಂಕು ಹಾಗೂ ಮೂವರು ಹೆಮ್ಮಾರಿಗೆ ಬಲಿಯಾಗಿದ್ದಾರೆ
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5.42 ಕ್ಕೆ ಏರಿದ್ರೆ ಬೆಂಗಳೂರಿನಲ್ಲಿ ಇದ್ರ ಪ್ರಮಾಣ ಶೇಕಡಾ 10ಕ್ಕೆ ಮುಟ್ಟಿದೆ. ಇನ್ನು ಕಳೆದ 24 ಗಂಟೆಯಲ್ಲಿ 508 ಮಂದಿ ಮಾತ್ರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಪತ್ತೆಯಾದ ಸೋಂಕು- 8906
ಇಂದು ಕೋರೋನಾ ಸಾವು- 4
ಸೋಂಕಿನಿಂದ ಗುಣಮುಖ- 508
ರಾಜ್ಯದ ಪಾಸಿಟಿವಿಟಿ ದರ ಶೇಕಡಾ 5.42
ಬೆಂಗಳೂರು ಪಾಸಿಟಿವಿಟಿ ದರ ಶೇಕಡಾ 10