ಬೆಂಗಳೂರು ,(www.thenewzmirror.com) :
ಕೋವಿಡ್ ಹೊಸ ಪ್ರಭೇದ ಒಮಿಕ್ರಾನ್ ನಿಂದ ರಾಜ್ಯವನ್ನ ಬಚಾವ್ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಡಿಸೆಂಬರ್ 28 ರಿಂದ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೋವಿಡ್ ತಜ್ಞರು, ಸಂಪುಟ ದರ್ಜೆಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, ಒಮಿಕ್ರಾನ್ ತಡೆಯೋ ನಿಟ್ಟಿನಲ್ಲಿ ಈ ಕ್ರಮ ಎಂದು ಸಚಿವ ಸುಧಾಕರ್ ತಿಳಿಸಿದರು.
ಡಿಸೆಂಬರ್ 28 ರಿಂದ 10 ದಿನಗಳ ಕಾಲ ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಐದು ಗಂಟೆ ವರೆಗೂ ನೈಡ್ ಕರ್ಫ್ಯೂ ಜಾರಿ ಇರಲಿದ್ದು, ಆ ಸಮಯದಲ್ಲಿ ಯಾವುದೇ ಸಭೆ, ಸಮಾರಂಭ ನಡೆಸದಂತೆಯೂ ಸೂಚನೆ ನೀಡಲಾಗಿದೆ.
ಸಾರ್ವಜನಿಕವಾಗಿ ಹೊಸ ವರ್ಷ ಆಚರಣೆಗೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು, ಹೊಟೇಲ್, ಪಬ್, ರೆಸ್ಟೋರೆಂಟ್ ಗಳಲ್ಲಿ ಶೇಕಡಾ 50 ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸದ್ಯ ರಾಜ್ಯದಲ್ಲಿ ಮೊದಲ ಡೋಸ್ ಶೇಕಡಾ97 ರಷ್ಟು ಪೂರ್ಣಗೊಂಡಿದ್ದು ಉಳಿದ ಶೇಕಡಾ 3 ರಷ್ಟು ಆದಷ್ಟು ಬೇಗ ನೀಡುವಂತೆಯೂ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಹಾಗೆಬೇ ಎರಡನೇ ಡೋಸ್ ಶೇಕಡಾ 75 ರಷ್ಟು ಪೂರ್ಣಗೊಂಡಿದೆ ಅದನ್ನ ಶೀಘ್ರವಾಗಿ ನೀಡುವಂತೆಯೂ ಸೂಚನೆ ನೀಡಿದರು.
ಸದ್ಯ ರಾಜ್ಯದಲ್ಲಿ 45 ಲಕ್ಷ ಮಂದಿ ಎರಡನೇ ಡೋಸ್ ಪಡೆದಿಲ್ಲ. ಕೂಡಲೇ ಅವರೆಲ್ಲಾ ಲಸಿಕೆ ಪಡೆದುಕೊಳ್ಳುವಂತೆ ಸರ್ಕಾರದ ಪರವಾಗಿ ಸಚಿವ ಸುಧಾಕರ್ ಮನವಿ ಮಾಡಿದರು.
ಜನವರಿ ಹತ್ತರಿಂದ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲು ಪ್ರಧಾನಿ ಸೂಚನೆ ಕೊಟ್ಟಿದ್ದಾರೆ ಹಾಗೆನೇ ಜನವರಿ ಮೂರರಿಂದ 15 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ನೀಡುವಂತೆ ತಿಳಿಸಿದ್ದು, ಇದಕ್ಕೆ ರಾಜ್ಯ ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿದರು.
ಸದ್ಯ ನಾಲ್ಕು ಸಾವಿರ ಐಸಿಯು ಬೆಡ್ ಸಿದ್ಧವಿದ್ದು, ಇದರ ಸಂಖ್ಯೆಯನ್ನ 7051 ಕ್ಕೆ ಏರಿಕೆ ಮಾಡಲು ನಿರ್ಧಾರವಾಗಿದೆ ಎಂದು ತಿಳಿಸಿದರು.
ಇಂದಿನ ಸಭೆಯ ಹೈಲೈಟ್ಸ್
- ರಾಜ್ಯಾದ್ಯಂತ ರಾಜ್ಯಾದ್ಯಂತ ಡಿಸೆಂಬರ್ 28 ರಿಂದ 10 ದಿನ ನೈಟ್ ಕರ್ಫ್ಯೂ ಜಾರಿ
- ಸಾರ್ವಜನಿಕ ಸ್ಥಳಗಳಲ್ಕಿ ಹೊಸ ವರ್ಷ ಆಚರಣೆ ಇಲ್ಲ
- ಹೊಟೇಲ್ ಗಳಲ್ಲಿ ಶೇಕಡಾ ೫೦ ರಷ್ಟು ಜನ್ರಿಗೆ ಪ್ರವೇಶ