ರಾಜ್ಯದ ಶೇಕಡಾ 100 ರಷ್ಟು ಎರಡು ಲಸಿಕೆ ನೀಡಿದ ಜಿಲ್ಲೆ ಬೆಂಗಳೂರು..!

ಬೆಂಗಳೂರು,(www.thenewzmirror.com) :

ಇಡೀ ರಾಜ್ಯ ಕೋವಿಡ್ ವಿರುದ್ಧ ಹೋರಾಡುತ್ತಿದೆ.. ಮತ್ತೊಂದ್ಕಡೆ ರೂಪಾಂತರಿ ವೈರಸ್ ನ ಆತಂಕವೂ ಹೆಚ್ಚಾಗ್ತಿದೆ. ಇದರ ಬೆನ್ನಲ್ಲೇ ಬೆಂಗಳೂರು ನಗರ ಜಿಲ್ಲೆ (ಬಿಬಿಎಂಪಿ ಹೊರತು ಪಡಿಸಿ) ಎರಡು ಡೋಸ್ ಲಸಿಕೆ ನೀಡಿದ ಶೇಕಡಾ 100% ರಷ್ಟು ರಾಜ್ಯದ ಪ್ರಥಮ ಜಿಲ್ಲೆ ಎಂಬ ಖ್ಯಾತಿಗೆ ಒಳಗಾಗಿದೆ.

RELATED POSTS

ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಪತ್ರಿಕಾಗೋಷ್ಠಿ

ಡಿಸೆಂಬರ್ 23 ರ ಸಮಯಕ್ಕೆ ಮೊದಲ ಡೋಸ್ 129% ಹಾಗೂ ಎರಡನೇ ಡೋಸ್ 100% ರಷ್ಟು ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಮಾಹಿತಿ ನೀಡಿದರು.

ಜಿಲ್ಲಾವಾರು ಮಾಹಿತಿ

ರಾಜ್ಯ ಆರೋಗ್ಯ ಇಲಾಖೆ 10,32,000 ಜನರಿಗೆ ವ್ಯಾಕ್ಸಿನ್ ನೀಡುವ ಗುರಿಯನ್ನ ಕೊಟ್ಟಿತ್ತು. ಇದರಲ್ಲಿ ಮೊದಲ ಡೋಸ್ 13,26,255 ಮಂದಿಗೆ ಶೇಕಡಾ(129%), ಎರಡನೇ ಡೋಸ್ 10,34,184 ಮಂದಿಗೆ (100%) ನೀಡಲಾಗಿದೆ.ಇನ್ನೂ ಲಸಿಕೆ ನೀಡುವ ಕಾರ್ಯ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಬಿಬಿಎಂಪಿ ಲಸಿಕೆ ನೀಡುವಲ್ಲಿ ಹಿಂದೆ

ಸದ್ಯ ಆರೋಗ್ಯ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ. ಬಿಬಿಎಂಪಿ ಲಸಿಕೆ ನೀಡುವಲ್ಲಿ ಹಿಂದೆ ಬಿದ್ದಿದೆ. ಮೊದಲ ಡೋಸ್ ಅನ್ನ ಶೇಕಡಾ 91% ರಷ್ಟು ಹಾಗೂ ಎರಡನೇ ಡೋಸ್ ಶೇಕಡಾ 74% ರಷ್ಟು ಮಂದಿಗೆ ಮಾತ್ರ ನೀಡಲಾಗಿದೆ.

ಜಿಲ್ಲಾವಾರು ಫಸ್ಟ್ ಡೋಸ್ ಪಡೆದ ವಿವರ

ಬೆಂಗಳೂರು ನಗರ-129%

ಕೊಡಗು-100%

ಮಂಡ್ಯ-94%

ರಾಮನಗರ-97%

ಉಡುಪಿ-96%

ಬಾಗಲಕೋಟೆ-101%

ಉತ್ತರ ಕನ್ನಡ-97

ಹಾಸನ-98%

ಮೈಸೂರು-97%

ಕೋಲಾರ 99%

ಬೆಂಗಳೂರು ಗ್ರಾಮಾಂತರ-93%

ವಿಜಯಪುರ-101%

ಬೆಳಗಾವಿ -99%

ದಕ್ಷಿಣ ಕನ್ನಡ-93%

ಚಿಕ್ಕಬಳ್ಳಾಪುರ-99%

ದಾವಣಗೆರೆ-98%

ಧಾರವಾಡ-99%

ಚಿತ್ರದುರ್ಗ-98%

ಬೀದರ್-99%

ಗದಗ-102%

ಚಾಮರಾಜನಗರ – 96%

ತುಮಕೂರು-96%

ಚಿಕ್ಕಮಗಳೂರು- 95%

ಶಿವಮೊಗ್ಗ-95%

ಯಾದಗಿರಿ-96%

ಕೊಪ್ಪಳ-97%

ಬಳ್ಳಾರಿ-97%

ಹಾವೇರಿ-94%

ರಾಯಚೂರು- 95%

ಕಲಬುರಗಿ-95%

ಬೆಂಗಳೂರು ನಗರ ಜಿಲ್ಲೆ ವಿವರ

  • ಒಟ್ಟು 5 ತಾಲೂಕು ಒಳಗೊಂಡಿದೆ
  • 7 ಟೌನ್ ಮುನ್ಸಿಪಲ್ ಕೌನ್ಸಿಲ್,
  • 86 ಗ್ರಾಮ ಪಂಚಾಯತಿ,
  • 2 ಸಿಟಿ ಮುನ್ಸಿಪಲ್ ಕೌನ್ಸಿಲ್,
  • 864 ಗ್ರಾಮಗಳು
  • ಒಟ್ಟು ಜನ ಸಂಖ್ಯೆ 15 ಲಕ್ಷ

ಗುರಿ ತಲುಪಲು ಬಳಸಲಾದ ಸಿಬ್ಬಂದಿಗಳ ವಿವರ

40 – ನುರಿತ ವೈದ್ಯರು
39 – ವೈದ್ಯರು
ಆರೋಗ್ಯ ಸಿಬ್ಬಂದಿಗಳು – 300
ಆಶಾ ಕಾರ್ಯಕರ್ತೆಯರು – 832

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist