ಬೆಂಗಳೂರು,(www.thenewzmirror.com) :
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದ ನೌಕರರಿಗೆ ಸಾರಿಗೆ ಸಚಿವ ಗುಡ್ ನ್ಯೂಸದ ಕೊಟ್ಟಿದ್ದಾರೆ. ಮುಷ್ಕರ ನಡೆಸಿದ್ದರಿಂದ ವಜಾ ಆಗಿದ್ದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಗದಗದಲ್ಲಿ ಮಾತನಾಡಿದ ಸಚಿವರು, ನಾಲ್ಕು ವಾರಗಳೊಳಗೆ ವಜಾ ಆಗಿದ್ದ ಸಿಬ್ಬಂದಿ ಪುನಃ ನೇಮಕಕ್ಕೆ ನಿರ್ಧಾರ ಮಾಡಲಾಗಿದೆ. ಈ ಕುರಿತಂತೆ ಅಧಿಕಾರಿಗಳಿಗೆ ನಾಲ್ಕು ವಾರಗಳ ಗಡುವು ನೀಡಲಾಗಿದೆ ಎಂದು ತಿಳಿಸಿದರು.
ಮುಷ್ಕರದ ವೇಳೆ ಕೆಲವರು ಕೆಲಸಕ್ಕೆ ಗೈರಾಗಿದ್ದರು. ಅಂಥ ನೌಕರರನ್ನ ವಜಾಮಾಡಲಗಿತ್ತು. ವಜಾ ಆಗಿದ್ದವರನ್ನ ಇಲ್ಲಿಯವರೆಗೆ ಕೆಲಸಕ್ಕೆ ನೇಮಕಗೊಳಿಸಲು ಸಾಧ್ಯ ಆಗಿರಲಿಲ್ಲ. ಹೀಗಾಗಿ ನಾಲ್ಕು ವಿಭಾಗದ ಎಂಡಿಗಳಿಗೆ ಈಗಾಗಲೇ ಸೂಚನೆ ಕೊಟ್ಟಿರೋದಾಗಿ ತಿಳಿಸಿದರು.
ಲೋಕಾದಾಲತ್ ಮೂಲಕ ಕಾನೂನು ತೊಡಕು ನಿವಾರಿಸಿ ಸಮಸ್ಯೆ ಇತ್ಯರ್ಥ ಮಾಡುವಂತೆ ಹೇಳಲಾಗಿದ್ದು, ಮಾನವೀಯತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದೂ ಮಾಹಿತಿ ನೀಡಿದ್ದು,ಹೊಸ ವರ್ಷಕ್ಕೆ ವಜಾ ಆ್ ನೌಕರರಿಗೆ ಗುಡ್ ನ್ಯೂಸ್ ಸಿಗೋದ್ರಲ್ಲಿ ಡೌಟೇ ಇಲ್ಲ.