ಬೆಂಗಳೂರು , (www.thenewzmirror.com):
ಮೂರನೇ ಅಲೆ ಅಪ್ಪಳಿಸ್ತಿದ್ದಂತೆ ಸರ್ಕಾರ ಮತ್ತೆ ಟೈಟ್ ರೂಲ್ಸ್ ಜಾರಿಗೆ ತರಲಾಗ್ತಿದೆ.., ಅದ್ರಲ್ಲೂ ವೀಕೆಂಡ್ನಲ್ಲಿ ಜನ್ರ ಓಡಾಟಕ್ಕೆ ಬ್ರೇಕ್ ಹಾಕೋಕಂತ ವೀಕೆಂಡ್ ಕರ್ಫ್ಯೂ ಜಾರಿಗೆ ಬರ್ತಿದೆ. ಹೀಗಾಗಿ ಈಬಾರಿ ವೀಕೆಂಡ್ನಲ್ಲಿ ಅಲ್ಲಿಗೆ ಹೋಗ್ಬೇಕು ಇಲ್ಲಿಗೆ ಹೋಗ್ಬೇಕಂತ ಪ್ಲಾನ್ ಮಾಡಿದವ್ರಿಗೆ ಸಾರಿಗೆ ಸಮಸ್ಯೆ ಎದುರಾಗಲಿದೆ ಯಾಕಂದ್ರೆ ಅಂದು ಬಿಎಂಟಿಸಿ ಬಸ್ ಗಳ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ..,
ಎರಡನೇ ಅಲೆಯಲ್ಲಿ ಜಾರಿಯಾಗಿದ್ದ ವೀಕೆಂಡ್ ಕರ್ಫ್ಯೂ ಮತ್ತೆ ಅನುಷ್ಠಾನಕ್ಕೆ ಬರ್ತಿದೆ. ರಾಜ್ಯದಲ್ಲಿ ಮೂರನೇ ಅಲೆ ಓಟಕ್ಕಿಳಿದಿರೋ ಹಿನ್ನಲೆ ಸರ್ಕಾರ ಮತ್ತೆ ವೀಕೆಂಡ್ ಕರ್ಫ್ಯೂ ಅಸ್ತ್ರ್ರ ಪ್ರಯೋಗಿಸಿದೆ. ಆದ್ರೆ ಈಬಾರಿಯ ವೀಕೆಂಡ್ ಕರ್ಫ್ಯೂನಲ್ಲಿ ಜನ ಸಾಮಾನ್ಯರ ಓಡಾಟಕ್ಕೆ ಕಂಪ್ಲೀಟ್ ಬ್ರೇಕ್ ಹಾಕೋಕೆ ಸರ್ಕಾರ ನಿರ್ಧರಿಸಿದ್ರೂ ಅನಿವಾರ್ಯ ಸ್ಥಿತಿಯಲ್ಲಿ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.
ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಸಂಚಾರ ಸ್ಥಗಿತಗೊಳಿಸಲು ನಿಗಮ ತೀರ್ಮಾನಿಸಿದೆ. ಹೀಗಾಗಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆ ವರೆಗೂ ನಗರದಲ್ಲಿ ಬಿಎಂಟಿಸಿ ಸಂಚಾರ ಸ್ಥಬ್ಧವಾಗಲಿದೆ. ಕೇವಲ ಅಗತ್ಯ ಸೇವೆಗಾಗಿ ಕೆಲವೇ ಕೆಲವು ಬಸ್ಗಳ ಸಂಚಾರ ನಡೆಸೋದಾಗಿ ಬಿಎಂಟಿಸಿ ಸ್ಪಷ್ಟಪಡಿಸಿದೆ. ಜೊತೆಗೆ ಈ ಬಸ್ಗಳಲ್ಲಿ ಸಾರ್ವಜನಿಕರಿಗೆ ಎಂಟ್ರಿ ಇಲ್ಲ ಅನ್ನೋದನ್ನೂ ತಿಳಿಸಿದೆ.
ಯಾರಿಗೆಲ್ಲಾ ಇರಲಿದೆ ಬಿಎಂಟಿಸಿಯಲ್ಲಿ ಎಂಟ್ರಿ ?
ಕೇಂದ್ರ ಸರ್ಕಾರಿ ನೌಕರರಿಗೆ
ಪೊಲೀಸ್, ಹಾಗೂ ರಕ್ಷಣಾ ಸಿಬ್ಬಂದಿಗೆ
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿಗೆ
ಆಸ್ಪತ್ರೆಗೆ ತೆರಳುವ ರೋಗಿಗಳಿಗೆ
ಪತ್ರಕರ್ತರು,
ರೈಲು ಮತ್ತು ವಿಮಾನ ಯಾನ ಪ್ರಯಾಣಿಕರು ( ಟಿಕೆಟ್ ತೋರಿಸಿ ಪ್ರಯಾಣಕ್ಕೆ ಅವಕಾಶ)
ಇನ್ನು ಮೆಟ್ರೋ ಎಂದಿನಂತೆ ಸಂಚಾರ ನಡೆಸಲು ತೀರ್ಮಾನಿಸಿದೆ. ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿವೇಳೆಯೂ ಮೆಟ್ರೋ ಸಂಚಾರ ನಡೆಯುತ್ತಿದೆ. ಹೀಗಾಗಿ ಬೆಂಗಳೂರಲ್ಲೂ ದೆಹಲಿ ಮಾದರಿಯನ್ನೇ ಅನಸರಿಸಲು ತೀರ್ಮಾನಿಸಲಾಗಿದೆ. ಆದ್ರೆ ಶನಿವಾರ ಹಾಗೂ ಭಾನುವಾರ ನಗರದಲ್ಲಿ ಮೆಟ್ರೋ ಓಡಾಟದ ಅಂತರವನ್ನ ಪ್ರತೀ 20 ನಿಮಿಷಕ್ಕೆ ಒಂದರಂತೆ ಹೆಚ್ಚಿಸಲಾಗಿದೆ. ಜೊತೆಗೆ ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆವರೆಗೆ ಮಾತ್ರ ಮೆಟ್ರೋ ಸೇವೆ ಇರಲಿದೆ. ಉಳಿದಂತೆ ಸೋಮವಾರದಿಂದ ಗುರುವಾರದ ವರೆಗೆ ಮೆಟ್ರೋ ಸೇವೆ ಈ ಹಿದಿನಂತೆ ನಡೆಯಲಿದೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
ಇನ್ನೊಂದ್ಕಡೆ ಕೆಎಸ್ಆರ್ಟಿಸಿಯೂ ವೀಕೆಂಡ್ ಕರ್ಫ್ಯೂ ವೇಳೆ ಸಂಚಾರ ನಡೆಸಲು ತೀರ್ಮಾನಿಸಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯ ಹಾಗೂ ಅಂತರಾಜ್ಯ ಬಸ್ ಸೇವೆ ಎಂದಿನಂತೆ ಇರಲಿದೆ. ಪ್ರಯಾಣಿಕರಿಗೆ ತಕ್ಕಂತೆ ಸೇವೆ ಒದಗಿಸೋದಾಗಿ ಕೆಎಸ್ಆರ್ಟಿಸಿ ಘೋಷಿಸಿದೆ. ಕೋವಿಡ್ ರೂಲ್ಸ್ ಫಾಲೋಮಾಡಿ ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಸುತ್ತೆ. ಹೊರ ರಾಜ್ಯದ ಪ್ರಯಾಣಿಕರ ಮೇಲೆ ವಿಶೇಷ ನಿಗಾವಹಿಸಿ ಸಂಚಾರ ಮಾಡೋದಾಗಿ ಕೆಎಸ್ಆರ್ಟಿಸಿ ಸ್ಪಷ್ಟಪಡಿಸಿದೆ. ಕೇರಳ ಮಹಾರಾಷ್ಟ್ರ ಹಾಗೂ ಗೋವಾದಿಂದ ಬರೋ ಪ್ರಯಾಣಿಕರಿಗೆ 72 ಗಂಟೆಗಳೊಳಗಿನ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಮಾತ್ರವಲ್ಲ ರಾತ್ರಿ ಪ್ರಯಾಣಿಸೋ ಪ್ರಯಾಣಿಕರು ಮುಂಗಡ ಆನ್ಲೈನ್ ಬುಕ್ಕಿಂಗ್ ಮಾಡಿಸೋದು ಕಡ್ಡಾಯ ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ವೀಕೆಂಡ್ ಕರ್ಫ್ಯೂ ವೇಳೆಯೂ ಮೆಟ್ರೋ ಕೆಎಸ್ಆರ್ಟಿಸಿ ಇರುತ್ತೆ. ಆದ್ರೆ ಮನೆಯಿಂದ ಅನಗತ್ಯವಾಗಿ ಹೊರಗೆ ಬಂದ್ರೆ ಕಾನೂನು ಕ್ರಮಕೈಗೊಳ್ತಿವಿ.. ಎನ್ಡಿಎಂಐ ಅಡಿ ಕೇಸ್ ದಾಖಲಿಸಿ ಒಳಗೆ ಕಳಿಸ್ತಿವಿ ಅಂತ ಪೊಲೀಸ್ರು ಹೇಳ್ತಿದ್ದಾರೆ. ಇನ್ನೊಂದ್ಕಡೆ ಆಟೋ, ಕ್ಯಾಬ್ ಸಂಚಾರಕ್ಕೂ ಅವಕಾಶ ಇಲ್ಲ. ಹೀಗಾಗಿ ಜನ್ರು ಕೆಎಸ್ ಆರ್ಟಿಸಿ ಬಸ್ನಲ್ಲಿ ಬಂದಿಳಿದ್ರೂ ಮುಂದೆ ಹೋಗೋಕೆ ಬಿಎಂಟಿಸಿ ಬಸ್ಸೂ ಇಲ್ಲ. ಆಟೋ ಕ್ಯಾಬೂ ಸಿಗೋದಿಲ್ಲ.. ಹೀಗಾಗಿ ಜನ್ರು ತಮ್ಮ ಕೆಲ್ಸ ಎಷ್ಟು ಅನಿವಾರ್ಯ ಅನ್ನೋದನ್ನ ಅರಿತು ವೀಕೆಂಡ್ ಕರ್ಫ್ಯೂ ವೇಳೆ ಮನೆಯಿಂದ ಹೊರ ಬರುವುದು ಉತ್ತಮ.