ಮೈಸೂರು, (www.thenewzmirror.com) :
ಒಮಿಕ್ರಾನ್ ವೈರಸ್ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುವನ್ನ ಹೆಚ್ಚಿಸುತ್ತಾ ಹೋಗ್ತಿದೆ.. ಈ ಪಟ್ಟಿಗೆ ಇದೀಗ ಸಾಂಸ್ಕೃತಿಕ ನಗರಿ ಮೈಸೂರು ಸೇರಿಕೊಂಡಿದ್ದು, 9 ವರ್ಷ ಮಗುವಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ.
ಹೊರದೇಶದಿಂದ 9 ವರ್ಷದ ಮಗುವಿಗೆ ಯಾವುದೇ ರೋಗ ಲಕ್ಷಣವಿಲ್ಲದಿದ್ರೂ ಒಮಿಕ್ರಾನ್ ಸೋಂಕು ತಗುಲಿದೆ. ಸದ್ಯ ಮಗುವನ್ನು ಪ್ರತ್ಯೇಕವಾಗಿ ಇರಿಸಿನ ಚಿಕಿತ್ಸೆ ನೀಡಲಾಗ್ತಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನ ತಪಾಸಣೆ ಮಾಡಲಾಗಿದೆ.
ಡಿ.19 ರಂದು ಪೋಷಕರ ಜತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಂಕಿತ ಮಗು ಆಗಮಿಸಿದ್ದು, ಡಿ.19 ರಂದು ರಕ್ತ ಸ್ಯಾಂಪಲ್ ಪಡೆಯಲಾಗಿತ್ತು.ನಿನ್ನೆ ಮಗುವಿಗೆ ಒಮಿಕ್ರಾನ್ ಪಾಸಿಟಿವ್ ದೃಢವಾಗಿದೆ. ಪೋಷಕರಿಗೆ ಒಮಿಕ್ರಾನ್ ನೆಗೆಟಿವ್, ಮಗುವಿಗೆ ಪಾಸಿಟಿವ್ ಬಂದಿದ್ದು, ಸದ್ಯ ಸೋಂಕಿತ ಮಗು ಆರೋಗ್ಯವಾಗಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.