ಬೆಂಗಳೂರು, (www.thenewzmirror.com):
ಸಾರಿಗೆ ಇಲಾಖೆ ಅಂದ್ರೆ ಅತ್ಯಂತ ಹೆಚ್ಚು ಆದಾಯ ತರೋ ಇಲಾಖೆ.., ಈ ಇಲಾಖೆಯಲ್ಲಿ ಅಧಿಕಾರಿಗಳ ಆಡಿದ್ದೇ ಆಟ ಎನ್ನುವಂಥಾಗಿದೆ.., ಇದಕ್ಕೆ ಪೂರಕ ಎನ್ನುವಂಥ ಪುರಾವೆಗಳು ನ್ಯೂಝ್ ಮಿರರ್ ಗೆ ಸಿಕ್ಕಿದ್ದು, ಹಿರಿಯ ಅಧಿಕಾರಿಗಳ ವಿರುದ್ಧ ಅಸಮಧಾನಹೊರಹಾಕೋ ಸ್ಥಿತಿ ನಿರ್ಮಾಣವಾಗಿದೆ.
ಇಡೀ ಸಾರಿಗೆ ಇಲಾಖೆಯಲ್ಲಿ ಅತಿ ಹೆಚ್ಚು ಆದಾಯ ತರುವ ವಲಯ ಅಂದ್ರೆ ಬೆಂಗಳೂರು ನಗರ.., ಹೀಗಾಗಿಯೇ ಬೆಂಗಳೂರು ನಗರಕ್ಕೆ ಅಂತ ಪ್ರತ್ಯೇಕ ಜಂಟಿ ಆಯುಕ್ತರ ಹುದ್ದೆಯನ್ನ ಏಕಾಏಕಿ ಸೃಷ್ಟಿ ಮಾಡಲಾಯ್ತು. ಹೆಚ್ಚು ಆದಾಯ ತರುವ ವಲಯ ಅಂದ್ಮೇಲೆ ಕೇಳ್ಬೇಕಾ..? ಅಧಿಕಾರಿಗಳು ನಾ ಮುಂದು ತಾಮುಂದು ಅಂತ ಇಲ್ಲಿ ಪೋಸ್ಟಿಂಗ್ ಹಾಕಿಸಿಕೊಳ್ಳೋಕೆ ಲಾಬಿ ಮಾಡ್ತಾ ಇರ್ತಾರೆ.., ಅದೇ ರೀತಿ ಕೆಲ ಮೂಲಗಳ ಪ್ರಕಾರ ಲಾಬಿ ಮಾಡಿಕೊಂಡು ಬೆಂಗಳೂರು ನಗರ ವಲಯದ ಜಂಟಿ ಆಯುಕ್ತ ಹಾಲಸ್ವಾಮಿ ವಿರುದ್ಧ ಇದೀಗ ಆರೋಪಗಳ ಸುರಿಮಳೆ ಕೇಳಿ ಬರ್ತಿದೆ.
ಸಾಮಾನ್ಯವಾಗಿ ಜಂಟಿ ಆಯುಕ್ತರು ಅಂದ್ರೆ ಅವ್ರ ಅಧೀನದಲ್ಲಿ ಕನಿಷ್ಠ 10 ಸಾರಿಗೆ ಕಚೇರಿಗಳು ಬರ್ತವೆ.., ಆ ಕಚೇರಿಯಲ್ಲಿ ಯಾವುದೇ ಸಮಸ್ಯೆ ಆದ್ರೂ ಅದನ್ನ ಬಗೆಹರಿಸೋ ಜವಾಬ್ದಾರಿ ಅವ್ರ ಮೇಲಿದೆ.., ಆದ್ರೆ ಸಮಸ್ಯೆಗಳನ್ನ ಬಗೆಹರಿಸ್ಬೇಕಾದ ಅಧಿಕಾರಿ ಸಮಸ್ಯೆಯನ್ನೇ ಹುಟ್ಟಿ ಹಾಕ್ತಿದ್ದಾರೆ ಅಂದ್ರೆ ನಂಬ್ತೀರಾ..? ನ್ಯೂಝ್ ಮಿರರ್ ಗೆ ಸಿಕ್ಕಿರೋ ದಾಖಲೆಗಳ ಪ್ರಕಾರ ಹೌದು ಎನ್ನುವ ಉತ್ತರ ಸಿಗ್ತಿದೆ.
ಉದಾಹರಣೆಗೆ ಹೇಳೋದಾದ್ರೆ., ಜಂಟಿ ಆಯುಕ್ತ ಹಾಲಸ್ವಾಮಿ ಅಧೀನದಲ್ಲಿ 10 ಕ್ಕೂ ಹೆಚ್ಚು ಸಾರಿಗೆ ಕಚೇರಿಗಳು ಬರ್ತವೆ.., ಸರ್ಕಾರಿ ಕಚೇರಿ ಅಂದ್ಮೇಲೆ ಕೇಳ್ಬೆಕಾ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತೆ.., ಯಾವುದೇ ಒಬ್ಬ ಅಧಿಕಾರಿ ತನಗೆ ತೋಚದೇ ಒಂದು ತಪ್ಪನ್ನ ಮಾಡ್ತಾನೇ ಇರ್ತಾರೆ( ತಪ್ಪು ಮಾಡೋದು ಮನುಷ್ಯನ ಸಹಜ ಗುಣ ಅಲ್ವಾ..?). ಹೀಗೆ ಕಚೇರಿಯಲ್ಲಿರೋ ಸಿಬ್ಬಂದಿ ಏನೋ ತಪ್ಪು ಮಾಡಿದ್ದಾರೆ ಅಂತಲೋ.., ಇಲ್ಲ ಡಿಎಲ್, ಎಲ್ ಎಲ್ ಆರ್ ಗೆ ಹಲವು ದಿನಗಳಿಂದ ಬರ್ತಾ ಇದ್ದೀನಿ.., ನನ್ನ ಕೆಲ್ಸ ಆಗ್ತಿಲ್ಲ ಅಂತ ಜಂಟಿ ಆಯುಕ್ತರಿಗೆ ದೂರನ್ನ ಕೊಟ್ರೆ ಅದನ್ನ ಬಗೆಹರಿಸ್ಬೇಕಾದ ಜವಾಬ್ದಾರಿ ಅವ್ರ ಮೇಲಿರುತ್ತೆ.
ತಕ್ಷಣವೇ ಸಮಸ್ಯೆಯನ್ನ ಬಗೆಹರಿಸಿದ್ರೆ ಸರ್ಕಾರಿ ವ್ಯವಸ್ಥೆ ಸ್ಮೂತ್ ಆಗಿ ಹೋಗುತ್ತೆ.., ಆದ್ರೆ ವ್ಯವಸ್ಥೆಯನ್ನ ಸ್ಮೂತ್ ಆಗಿ ನಡೆಯುವಂತೆ ನೋಡಿಕೊಳ್ಬೇಕಾದ ಜಂಟಿ ಆಯುಕ್ತ ಹಾಲಸ್ವಾಮಿ, ಅದನ್ನ ದೊಡ್ಡದು ಮಾಡುವ ಕೆಲ್ಸ ಮಾಡ್ತಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಉದಾಹರಣೆಗೆ ಹೇಳೋದಾದ್ರೆ.., ರಾಜಾಜಿನಗರ ಸಾರಿಗೆ ಕಚೇರಿಯಲ್ಲಿ ಇವ್ರ( ಹಾಲಸ್ವಾಮಿ) ಕೆಳಹಂತದ ಅಧಿಕಾರಿ ವಿರುದ್ಧ ಸಾರ್ವಜನಿಕರು ಯಾರಾದರೂ ಒಬ್ಬರು ಸಮಸ್ಯೆ ಹೇಳಿಕೊಂಡು ಬರ್ತಾರೆ ಅಂದ್ರೆ ಅದನ್ನ ವೈಯುಕ್ತಿಕವಾಗಿ ತೆಗೆದುಕೊಳ್ತಾರೆ ಅನ್ನೋ ಗಂಭೀರ ಆರೋಪವನ್ನ ಹಾಲಸ್ವಾಮಿ ಎದುರಿಸುತ್ತಿದ್ದಾರೆ.
ಅಷ್ಟಕ್ಕೂ ಈ ರೀತಿ ಯಾಕೆ ಹೇಳ್ತಾ ಇದೀವಿ ಅಂದ್ರೆ ತನ್ನ ಕೆಳ ಹಂತದ ಅಧಿಕಾರಿಗಳನ್ನ ನನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಬೇಕು( ಸಾಮಾನ್ಯವಾಗಿ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ಯಾರ ಕೈಯಾಳಾಗಿ ಇರೋದಿಲ್ಲ) ಅನ್ನೋ ಮನಸ್ಥಿತಿಯನ್ನಿಟ್ಟುಕೊಂಡು ಸಮಸ್ಯೆಯನ್ನ ದೂರನ್ನಾಗಿ ಕನ್ವರ್ಟ್ ಮಾಡಿಕೊಂಡು ಅವ್ರ ಮೇಲೆ ಕತ್ತಿ ಮಸೆಯೋ ಕೆಲ್ಸವನ್ನ ಮಾಡ್ತಾರಂತೆ.., ಸಾರ್ವಜನಿಕರಿಂದ ಬರುವ ಸಮಸ್ಯೆಯನ್ನ ಉದ್ದೇಶ ಪೂರಕವಾಗಿ ದೂರಿನ ರೀತಿ ಬದಲಾವಣೆ ಮಾಡಿಕೊಂಡು ಯಾವ ಅಧಿಕಾರಿ ವಿರುದ್ಧ ದೂರು ಬರುತ್ತೋ ಆ ಅಧಿಕಾರಿ ನಾನು ಹೇಳಿದ ಹಾಗೆ ಕೇಳಬೇಕು.., ನನ್ನ ಅಡಿಯಾಳಾಗಿ ಇಟ್ಟುಕೊಳ್ಬೇಕು ಅಂತ ಸಮಸ್ಯೆಯನ್ನ ದೂರನ್ನಾಗಿ ಪರಿವರ್ತನೆ ಮಾಡ್ತಾರಂತೆ.
ಮೌಖಿಕವಾಗಿ ಯಾರಾದ್ರೂ ಸಮಸ್ಯೆ ಹೇಳೋಕೆ ಹೋದ್ರೆ ಅವ್ರ ಬಲವಂತವಾಗಿ ಇಂಥ ಅಧಿಕಾರಿನಾ…? ಅವ್ರ ವಿರುದ್ಧ ಒಂದು ದೂರು ಬರೆದುಕೊಡಿ ಅಂತ ಒತ್ತಾಯಪೂರಕವಾಗಿ ದೂರನ್ನ ಸಾರ್ವಜನಿಕರಿಂದ ಬರೆಸಿಕೊಳ್ತಾರೆ ಅನ್ನೋ ಆರೋಪಾನೂ ಕೇಳಿ ಬರ್ತಿದೆ.
ಅಷ್ಟೇ ಅಲ್ದೇ ಅದೇ ದೂರನ್ನ ಇಟ್ಟುಕೊಂಡು ತನ್ನ ಅಧೀನದಲ್ಲಿರೋ ಅಧಿಕಾರಿಗೆ( ಸಾರ್ವಜನಿಕರು ಯಾವುದೇ ಅಧಿಕಾರಿ ವಿರುದ್ಧ ಸಮಸ್ಯೆ ಅಂತ ಹೇಳಿಕೊಂಡು ಬಂದ್ರೂ) ವಿನಾಕಾರಣ ಕಿರುಕುಳ ಕೊಡೋದು.., ಏಕ ವಚನದಲ್ಲಿ ಮಾತನಾಡೋದು…, ಏನಯ್ಯಾ ನಿನ್ನ ಮೇಲೆ ಭಾರೀ ದೂರು ಬರ್ತಿದೆ.., ನಿನ್ನ ಮೇಲೆ ಆಕ್ಷನ್ ತೆಗೆದುಕೊಳ್ಬೇಕಾ( ಅಧಿಕಾರದ ದರ್ಪದಲ್ಲಿ), ನಿನ್ನನ್ನ ಬೇರೆ ಕಡೆ ವರ್ಗಾವಣೆ ಮಾಡ್ತೀನಿ ಅಂತೆಲ್ಲಾ ಬೆದರಿಸೋ ಕೆಲ್ಸವನ್ನ ಮಾಡ್ತಾರಂತೆ.
ತಪ್ಪೇ ಮಾಡದ ಅಧಿಕಾರಿಗೆ (ತನ್ನ ಮೇಲಾಧಿಕಾರಿ ನಿನ್ನ ಮೇಲೆ ದೂರು ಬರ್ತಿದೆ ಅಂದ್ರೆ ಎಂಥವ್ರಿಗೂ ಭಯ ಆಗದೇ ಇರುತ್ತಾ ಹೇಳಿ..,) ನಾನೇನೋ ತಪ್ಪು ಮಾಡಿದ್ದೀನಿ ಅನ್ನೋ ಭಯದಲ್ಲಿ ಇಲ್ಲ ಸಾರ್ ನಾನೇನು ತಪ್ಪು ಮಾಡಿಲ್ಲ ಅಂತ ಹೇಳಿದ್ರೆ ಸಾರ್ವಜನಿಕರಿಂದ ಬಂದಿರೋ ದೂರಿನ ಪ್ರತಿಯನ್ನ(ಇವ್ರೇ ಬಲವಂತವಾಗಿ ಬರೆಸಿಕೊಂಡಿರೋ ಪತ್ರ) ತೋರಿಸಿ ಅವ್ರನ್ನ ಬೆದರಿಸೋ ಕೆಲ್ಸವನ್ನ ಮಾಡ್ತಾರಂತೆ.
ಕಷ್ಟಪಟ್ಟು ಸರ್ಕಾರಿ ಕೆಲ್ಸ ಪಡೆದ ಸಿಬ್ಬಂದಿನೋ ಅಧಿಕಾರಿಯೋ ಅಯ್ಯೋ ಎಲ್ಲಿ ನನ್ನ ಕೆಲ್ಸ ಹೋಗಿ ಬಿಡುತ್ತೋ ಅನ್ನೋ ಭಯದಲ್ಲಿ ಸರ್ ನನಗೆ ಗೊತ್ತಿಲ್ಲದೇ ತಪ್ಪಾಗಿದೆ( ತಪ್ಪು ಮಾಡದಿದ್ರೂ, ಎಲ್ಲಿ ಕೆಲಸ ಕಳೆದುಕೊಳ್ತೀವೋ ಅನ್ನೋ ಆತಂಕದಲ್ಲಿ) ಎಂದು ಹಿರಿಯ ಅಧಿಕಾರಿ ಮುಂದೆ ಮಂಡಿಯೂರಿ ಕುಳಿತುಕೊಳ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ತನಗೆ ಬೇಕಾದ ( ಕಾನೂನು ಬದ್ದವಾಗಿಲ್ಲದ) ಕೆಲ್ಸಗಳನ್ನ ಮಾಡಿಕೊಳ್ತಾರಂತೆ.
ಮೊದಲೇ ಇಲಾಖೆಗೆ ಆದಾಯದ ಮೂಲವಾಗಿರೋ ಬೆಂಗಳೂರು ವಲಯದಲ್ಲಿ ಪ್ರತಿ ದಿನ ತನ್ನ ಕೆಳ ಹಂತದ ಅಧಿಕಾರಿಗಳಿಗೆ ಈ ರೀತಿ ಕಿರುಕುಳ ಕೊಡೋ ಕೆಲ್ಸ ಮಾಡ್ತಿದ್ದಾರಂತೆ ವಾರಕ್ಕೆ ಕನಿಷ್ಠ 2 ರಿಂದ 3 ಅಧಿಕಾರಿಗಳು ಇವ್ರ ಮುಂದೆ( ತಪ್ಪು ಮಾಡಿಲ್ಲದಿದ್ರೂ) ಮಂಡಿಯೂರಿ ಕುಳಿತುಕೊಂಡು ಅವ್ರು ಹೇಳುವ ಕೆಲ್ಸವನ್ನ ಮಾಡಿಕೊಡ್ತಾ ಇದ್ದಾರಂತೆ.
ಸದ್ಯ ಸಾರಿಗೆ ಇಲಾಖೆಯಲ್ಲಿ ಆನ್ ಲೈನ್ ಸೇವೆಯನ್ನ ಜಾರಿ ಮಾಡಲಾಗಿದೆ. ತನ್ನ ಅಧೀನದಲ್ಲಿರೋ ಕಚೇರಿಗಳಲ್ಲಿ ಆನ್ ಲೈನ್ ಸೇವೆಯಲ್ಲಿ ಯಾವೆಲ್ಲಾ ರೀತಿ ಸಮಸ್ಯೆ ಆಗ್ತಿದೆ. ಅದನ್ನ ಹೇಗೆ ಬಗೆಹರಿಸ್ಬೇಕು ಅನ್ನೋದನ್ನ ತಲೆಕಡೆಸಿಕೊಳ್ತಿಲ್ಲ ಅನ್ನೋ ಆರೋಪಾನೂ ಕೇಳಿ ಬಂದಿದೆ.
ಈ ಕಚೇರಿಗೆ ಕಾಯ್ದೆ ಅನ್ವಯ ಆಗೋದಿಲ್ವಾ…?
ಹಾಲಸ್ವಾಮಿ ಕೋರಮಂಗಲ ಸಾರಿಗೆ ಕಚೇರಿಯ ಆರ್ಟಿಓ ಆಗಿ ಕಾರ್ಯನಿರ್ವಹಣೆ ಮಾಡ್ತಾ ಇದ್ದಾರೆ. ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಯಾವುದೇ ಸಾರಿಗೆ ಕಚೇರಿಯಲ್ಲಿ ನೋಂದಣಿಯನ್ನ ಎಆರ್ ಟಿಓ ಅಥವಾ ಆರ್ಟಿಓ ಮಾಡಬೇಕು ಆದರೆ ಕೋರಮಂಗಲ ಸಾರಿಗೆ ಕಚೇರಿಯಲ್ಲಿ ಕಾನೂನು ಪಾಲನೆ ಆಗ್ತಾನೇ ಇಲ್ಲ ಯಾಕಂದ್ರೆ ಕಚೇರಿಯಲ್ಲಿ ಇರಬೇಕಾದ ಆರ್ಟಿಓ ಅಧಿಕಾರಿ ಹಾಲಸ್ವಾಮಿ ಕಚೇರಿಯಲ್ಲೇ ಇರೋದಿಲ್ಲವಂತೆ. ಕೇಂದ್ರ ಸ್ಥಾನ ಸಹಾಯಕ(HQA) ಅವರಿಗೆ ನೊಂದಣಿ ಮಾಡಲು ಅವಕಾಶ ಕೊಟ್ಟಿದ್ದಾರಂತೆ.
ಅಷ್ಟೇ ಅಲ್ಲದೆ ನೋಂದಣಿ ವಿಚಾರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸೋಕೂ ಛೇಂಬರ್ ನಲ್ಲಿ ಇರೋದಿಲ್ಲವಂತೆ( ಕೋರಮಂಗಲ ಸಾರಿಗೆ ಕಚೇರಿಯಲ್ಲಿ). ಇದು ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದ್ದು ಸಮಸ್ಯೆಗೆ ಇತಿಶ್ರೀ ಹಾಡಿ ಅಂತ ಸಾರ್ವಜನಿಕರು ಮನವಿ ಮಾಡ್ತಾ ಇದ್ದಾರೆ.
ಅಧಿಕಾರಿಗಳಿಗೂ ಕಿರಿ ಕಿರಿ
ಇನ್ನೊಂದು ಮೂಲಗಳ ಪ್ರಕಾರ ಸಾರ್ವಜನಿಕರು ಸಮಸ್ಯೆ ಅಂತ ಬಂದಾಗ ಆರ್ ಟಿಓ ಅಧಿಕಾರಿಯಾಗಿರುವ ಹಾಲಸ್ವಾಮಿ ಆಫೀಸ್ ನಲ್ಲೇ ಇರೋದಿಲ್ಲವಂತೆ( ಯಾವಾಗ ಬರ್ತಾರೆ ಯಾವಾಗ ಹೋಗ್ತಾರೆ ಅನ್ನೋದು ಗೊತ್ತೇ ಆಗಲ್ವಂತೆ). ಹೀಗಾಗಿ ಸಾರ್ವಜನಿಕರು ಇಡೀ ದಿನ ಕಾದರೂ ಸಾಹೇಬ್ರು ಬರೋದು ಡೌಟು ಅಂತ ಕಚೇರಿಯ ಸಿಬ್ಬಂದಿ ಹೇಳೋದು ಒಂದು ಕಡೆಯಾದರೆ ಮತ್ತೊಂದು ಕಡೆ ಇತರ ಸಿಬ್ಬಂದಿಯನ್ನ ಸಾರ್ವಜನಿಕರು ಪ್ರಶ್ನೆ ಮಾಡುವ ಸ್ಥಿತಿ ಎದುರಾಗಿದ್ದು, ಪ್ರತಿ ದಿನ ಉತ್ತರ ಕೊಟ್ಟು ಕೊಟ್ಟು ಸಾಕಾಗಿ ಹೋಗಿದ್ದಾರಂತೆ.
ಇನ್ನು ಜಂಟಿ ಆಯುಕ್ತರ ವಿರುದ್ಧ ಸಾಕಷ್ಟು ಅಧಿಕಾರಿಗಳು ಆಯುಕ್ತರಿಗೆ ಮೌಖಿಕವಾಗಿ ದೂರು ಕೊಟ್ಟಿದ್ದರೂ ಅವ್ರ ವಿರುದ್ಧ ಕ್ರಮ ಕೈಗೊಳ್ತಿಲ್ಲ ಅನ್ನೋ ಬೇಸರಾನೂ ಇದೆ.., ಇದಕ್ಕೆಲ್ಲಾ ಕೊನೆಯಾವಾಗ..? ಯಾವಾಗಪ್ಪ ಇವ್ರಿಂದ ಮುಕ್ತಿ ಸಿಗುತ್ತೆ ಅಂತ ಪ್ರತಿ ದಿನ ಕಾಲ ದೂಡುತ್ತಿದ್ದಾರೆ.