ಕೊಪ್ಪಳ,(www.thenewzmirror.com):
ರಾಜ್ಯದಲ್ಲಿ ಉಪ ಚುನವಾಣೆ ಕಾವು ರಂಗೇರುತ್ತಿದೆ.., ಇದ್ರ ಬೆನ್ನಲ್ಲೇ ಮತ್ತೊಂದು ಅಪರೂಪದ ಸನ್ನಿವೇಶಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಸಾಕ್ಷಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಪಂಪ ಸರೋವರಕ್ಕೆ ಭೇಟಿ ನೀಡಿದ್ದ ಸಾರಿಗೆ ಸಚಿವರು, ವಾನರ ಸೈನ್ಯಕ್ಕೆ ಬಾಳೆ ಹಣ್ಣು ನೀಡಿ, ವಾನರ ಸೈನ್ಯದೊಂದಿಗೆ ಕೆಲ ಸಮಯ ಕಳೆದಿದ್ರು. ಈ ವೇಳೆ ಮರಿ ವಾನರಗಳು ಸಚಿವರ ತಲೆಯ ಮೇಲೆ ಕುಳಿತು ಆಶೀರ್ವಾದ ನೀಡಿದ್ದು ಮತ್ತೊಂದು ವಿಶೇಷವಾಗಿತ್ತು.
ಈ ಕುರಿತಂತೆ ಫೋಟೋವನ್ನ ತಮ್ಮ ಟ್ವಿಟ್ಟರ್ ಕಾತೆಯಲ್ಲಿ ಹಂಚಿಕೊಂಡಿದ್ದು, ಇದೊಂದು ಅಪರೂಪದ ಕ್ಷಣ ಎಂದು ಬರೆದುಕೊಂಡಿದ್ದಾರೆ.