ಸಿದ್ದರಾಮಯ್ಯ ಸರ್ಕಾರದಲ್ಲಿಯೇ ಭಾರೀ ಕಮೀಷನ್ ದಂಧೆ ಅಂತೆ..!

ಬೆಂಗಳೂರು, (www.thenewzmirror.com):

ಬಿಜೆಪಿ ಸರ್ಕಾರ ಅಲ್ಲ ಬದಲಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿಯೇ ಭಾರೀ ಪ್ರಮಾಣದಲ್ಲಿ ಕಮೀಷನ್ ದಂಧೆ ನಡೆದಿತ್ತು. ಅದು ಬರೋಬ್ಬರಿ ಶೇಕಡಾ 50 ರಷ್ಟು ಅಂತ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ದಾಖಲೆಗಳ ಸಮೇತ ಆರೋಪ ಮಾಡಿದ್ದಾರೆ.

RELATED POSTS

ಸಿಎಂ ಬಸವರಾಜ ಬೊಮ್ಮಾಯಿಗ ಎನ್. ಆರ್. ರಮೇಶ್ ದಾಖಲೆ ನೀಡಿಕೆ

ಸಿದ್ಧರಾಮಯ್ಯ ಸರ್ಕಾರದ 2013-18 ರ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಶೇ. 50 ಕ್ಕೂ ಹೆಚ್ಚು ಅನುದಾನಗಳನ್ನು ಲೂಟಿ ಹೊಡೆದಿದ್ದಾರೆ ಅಂತ ಆರೋಪಸಿರೋ ರಮೇಶ್ ಬೆಂಗಳೂರಿನಲ್ಲಿ ನಡೆದಿರುವ ಕಾಮಗಾರಿ ಹಾಗೂ ಆರೋಪಗಳ ಸುಮಾರು 47 ಸಾವಿರ ಪುಟಗಳ ದಾಖಲೆ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

2013-18 ರ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ರಸ್ತೆಗಳ ಅಭಿವೃದ್ಧಿ ಕಾರ್ಯಗಳು, ರಾಜಕಾಲುವೆ ಅಭಿವೃದ್ಧಿ / ಪುನಶ್ಚೇತನ ಕಾರ್ಯ, 110 ಹಳ್ಳಿಗಳ ಅಭಿವೃದ್ಧಿ ಕಾರ್ಯ, ತ್ಯಾಜ್ಯ ಸಂಸ್ಕರಣಾ ಘಟಕಗಳ ಅಭಿವೃದ್ಧಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ, ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ಮತ್ತು ನೆಲದಡಿಯ ಡಸ್ಟ್ ಬಿನ್ ಗಳ ಅಳವಡಿಕೆ ಕಾರ್ಯಗಳ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಸುಮಾರು ₹ 34,700 ಕೋಟಿ ಮೊತ್ತದ ಕಾಮಗಾರಿಗಳ ಹೆಸರಿನಲ್ಲಿ ಶೇ. 50 ಕ್ಕೂ ಹೆಚ್ಚು ಅನುದಾನಗಳನ್ನು ಲೂಟಿ ಮಾಡಿರುವ ಹಗರಣಗಳಿಗೆ ಸಂಬಂಧಿಸಿದಂತೆ ಸುಮಾರು 4,300 ಪುಟಗಳ ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.
ಹಾಗೆಯೇ, ಸಿದ್ಧ ರಾಮಯ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆ ಹಗರಣ, ಇಂದಿರಾ ಕ್ಯಾಂಟೀನ್ ಹಗರಣ, NUHM ಹಗರಣ, ಸಮಾಜ ಕಲ್ಯಾಣ ಇಲಾಖೆಯ ಹಾಸಿಗೆ – ದಿಂಬುಗಳ ಹಗರಣ, ವಿಶ್ವೇಶ್ವರಯ್ಯ ಜಲ ನಿಗಮದ ಹಗರಣ, ಕಾವೇರಿ ನೀರಾವರಿ ನಿಗಮದ ಹಗರಣ, ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಹಗರಣ, PWD ಇಲಾಖೆಯ ಹಗರಣ, BDA ನ ಬದಲಿ ನಿವೇಶನಗಳ ಹಗರಣ ಮತ್ತು ಬಿಬಿಎಂಪಿ TDR ಹಗರಣ ಸೇರಿದಂತೆ 97 ಹಗರಣಗಳಿಗೆ ಸಂಬಂಧಿಸಿದ ಸುಮಾರು 1,17,000 ಪುಟಗಳ ದಾಖಲೆಗಳನ್ನು ಒಳಗೊಂಡ Pen drive ಅನ್ನೂ ಸಹ ನೀಡಿದ್ದಾರೆ.

ಇದರ ಜತೆಗೆ ವಿವಿಧ ನ್ಯಾಯಾಲಯಗಳ ಆದೇಶಗಳನ್ವಯ ED, CBI, CID, ACB ಮತ್ತು BMTF ಗಳಲ್ಲಿ ಒಟ್ಟು 21 ಮಂದಿ ಅಂದಿನ ಸಚಿವರು / ಶಾಸಕರುಗಳ ವಿರುದ್ಧ, 06 ಮಂದಿ ಬಿಬಿಎಂಪಿ ಸದಸ್ಯರ ವಿರುದ್ಧ, 114 ಮಂದಿ ಅಧಿಕಾರಿಗಳು ಮತ್ತು 97 ಮಂದಿ ಗುತ್ತಿಗೆದಾರರ ವಿರುದ್ಧ FIR ಗಳು ದಾಖಲಾಗಿದ್ದ ವಿವರಗಳನ್ನೂ ಸಹ ಮಾನ್ಯ ಮುಖ್ಯಮಂತ್ರಿಗಳಿಗೆ ದಾಖಲೆ ನೀಡಿದ್ದಾರೆ.

ಎನ್ ಆರ್ ರಮೇಶ್ ಮಾಡಿರುವ ಆರೋಪಗಳು
ಸಿದ್ದು ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳು

  • ಸಿಎಂಗೆ ೧,೧೭,೦೦೦ ಪುಟಗಳ ದಾಖಲೆ ಸಲ್ಲಿಕೆ
  • ಕೃಷಿ ಭಾಗ್ಯ ಯೋಜನೆ ಹಗರಣ,
  • ಇಂದಿರಾ ಕ್ಯಾಂಟೀನ್ ಹಗರಣ,
  • NUHM ಹಗರಣ,
  • ಸಮಾಜ ಕಲ್ಯಾಣ ಇಲಾಖೆಯ ಹಾಸಿಗೆ – ದಿಂಬುಗಳ ಹಗರಣ,
  • ವಿಶ್ವೇಶ್ವರಯ್ಯ ಜಲ ನಿಗಮದ ಹಗರಣ,
  • ಕಾವೇರಿ ನೀರಾವರಿ ನಿಗಮದ ಹಗರಣ,
  • ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಹಗರಣ,
  • PWD ಇಲಾಖೆಯ ಹಗರಣ,
  • BDA ನ ಬದಲಿ ನಿವೇಶನಗಳ ಹಗರಣ
  • ಬಿಬಿಎಂಪಿ TDR ಹಗರಣ
ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist